ಶ್ರೀ ಮಹಿಷಮರ್ದಿನಿ ದೇವಸ್ಥಾನ, ಮಠಂತಬೆಟ್ಟು




ಪುತ್ತೂರು ತಾಲೂಕಿನ ಕೋಡಿಂಬಾಡಿ ಗ್ರಾಮದ ಮಠಂತಬೆಟ್ಟು ಎಂಬ ನಿಸರ್ಗ ತಾಣದಲ್ಲಿ ’ಮಹಿಷಮರ್ದಿನಿ’ ಗ್ರಾಮದೇವತೆಯ ಪ್ರಾಚೀನ ಗುಡಿ ಇದೆ.ದ.ಕ.ಜಿಲ್ಲೆಯ ಪ್ರಾಚೀನ ದೇವಸ್ಥಾನಗಳ ಸಂಶೋಧನಾ ಗ್ರಂಥದಲ್ಲಿ ಡಾ|ಗುರುರಾಜ ಭಟ್ ಮತ್ತು ಡಾ|ಲೀಲಾವತಿ ಭಟ್ ರವರು ಇದನ್ನು ಸುಮಾರು ಒಂದು ಸಾವಿರ ವರ್ಷಗಳಷ್ಟು ಪ್ರಾಚೀನವಾದುದೆಂದು ಉಲ್ಲೇಖಿಸಿದ್ದಾರೆ.
ಈ ದೇಗುಲವು ರಾಜತುಲ್ಯವಾದ ಅನುಪವೀತಯಾದವರಿಂದ ನಿರ್ಮಿಸಲ್ಪಟ್ಟಿರಬೇಕು.ಇದಕ್ಕೆ ಉಂಬಳಿ ಭೂಮಿ ಇತ್ತು ಆದ್ದರಿಂದ ಇಲ್ಲಿ ನಿತ್ಯಪೂಜೆ ವಿಶೇಷ ಉತ್ಸವ ಜಾತ್ರೆಗಳು ನಡೆಯುತ್ತಿದ್ದವು ಎನ್ನಲಾಗಿದೆ. ಇಲ್ಲಿ ಒಂದು ಮಠಶಾಲೆಯೂ ಇದ್ದು ಜನರಿಗೆ ಶಿಕ್ಷಣ ನೀಡುವ ವ್ಯವಸ್ಥೆ ಇತ್ತೆಂದು ಕಂಡುಬಂದಿದೆ. ಈ ಕಾರಣದಿಂದಲೇ ಮಠಂತಬೆಟ್ಟು ಎಂಬ ಹೆಸರು ಬಂದಿರಬಹುದೆಂದು ಊಹಿಸಲಾಗಿದೆ. ಬೆಟ್ಟು (ಒಂದು ಬೆಳೆ ಬೆಳೆಯುವ) ಗದ್ದೆಗಳ ಊರಿನಲ್ಲಿ ಈ ವೇದಾಧ್ಯಯನದ ಮಠದಲ್ಲಿ ಶ್ರೀಮಹಿಷಮರ್ದಿನಿಯನ್ನು ಪೂಜಿಸುತ್ತಿದ್ದರು. ಕಾಲಕ್ರಮೇಣ ಮಠ ನಡೆಸುವ ಮನೆಯವರು ನಿಸ್ಸಂತಾನ ಹೊಂದಿದ್ದರಿಂದ ಮುಂದೆ ಜೈನರಾಜರ ಆಳ್ವಿಕೆಯಲ್ಲಿ ರಾಜರ ಸಹಕಾರದೊಂದಿಗೆ ಊರವರು ಮಹಿಷಮರ್ದಿನಿಯನ್ನು ಈಗಿರುವ ಸ್ಥಳದಲ್ಲಿ ನೆಲೆಗೊಳಿಸಿದರು.

ಶ್ರೀ ಡಿ.ವಿ. ಸದಾನಂದ ಗೌಡ
ಗೌರವಾಧ್ಯಕ್ಷರು, ಬ್ರಹ್ಮಕಲಶೋತ್ಸವ ಸಮಿತಿ

ಶ್ರೀ ಅಶೋಕ್ ಕುಮಾರ್ ರೈ ಕೆೆ ಎಸ್
ಅಧ್ಯಕ್ಷರು, ಬ್ರಹ್ಮಕಲಶೋತ್ಸವ ಸಮಿತಿ

ಶ್ರೀ ಸೀತಾರಾಮ ಶೆಟ್ಟಿ
ಕಾರ್ಯಾಧ್ಯಕ್ಷರು, ಬ್ರಹ್ಮಕಲಶೋತ್ಸವ ಸಮಿತಿ

ಶ್ರೀ ಜಯಾನಂದ ಕೋಡಿಂಬಾಡಿ
ಪ್ರಧಾನ ಕಾರ್ಯದರ್ಶಿ, ಬ್ರಹ್ಮಕಲಶೋತ್ಸವ ಸಮಿತಿ

ಶ್ರೀ ನಿರಂಜನ ರೈ ಮಠಂತಬೆಟ್ಟು
ಕೋಶಾಧಿಕಾರಿ, ಬ್ರಹ್ಮಕಲಶೋತ್ಸವ ಸಮಿತಿ

ಶ್ರೀ ಜಯಪ್ರಕಾಶ್ ಬದಿನಾರು
ಸಂಚಾಲಕರು, ಮಾಧ್ಯಮ ಮತ್ತು ಪ್ರಚಾರ ಸಮಿತಿ

ಶ್ರೀ ಚಂದ್ರ ನಾಯ್ಕ್
ದೇವಸ್ಥಾನದ ಆಡಳಿತಾಧಿಕಾರಿಗಳು

ಶ್ರೀ ರಾಮಕೃಷ್ಣ ಭಟ್
ಪ್ರಧಾನ ಅರ್ಚಕರು
- ಶಾಶ್ವತ ನಿತ್ಯಪೂಜೆ ರೂ.5001
- ದುರ್ಗಾ ನಮಸ್ಕಾರ ಪೂಜೆ ರೂ.4001
- ವಿಶೇಷ ರಂಗ ಪೂಜೆ ರೂ.1501
- ಅಲಂಕಾರ ಪೂಜೆ ರೂ.1001
- ಸಹಸ್ರನಾಮಾರ್ಚನ ರೂ.1001
- ಶ್ರೀ ದುರ್ಗಾ ಪೂಜೆ ರೂ.1001
- ವಿಶೇಷ ಹೂವಿನ ಪೂಜೆ ರೂ.750
- ಒಂದು ದಿನದ ನಿತ್ಯಪೂಜೆ ರೂ.400
- ಪಂಚಾಮೃತ ಅಭಿಷೇಕ ರೂ.150
- ಹೂವಿನ ಪೂಜೆ ರೂ.100
- ಹಾಲು ಪಾಯಸ ರೂ.100
- ಕುಂಕುಮಾರ್ಚನೆ ರೂ.50
- ಹಣ್ಣುಕಾಯಿ ರೂ.30
- ಮಂಗಳಾರತಿ ರೂ.5
- ಕುಜ ರಾಹು ಸಂಧಿ ಶಾಂತಿ / ರಾಹು ಬೃಹಸ್ಪತಿ ಸಂಧಿ ಶಾಂತಿ ರೂ.13000
- ಶುಕ್ರಾಧಿತ್ಯ ಸಂಧಿ ಶಾಂತಿ / ಸ್ವಯಂವರ ಪಾರ್ವತಿ ಹೋಮ ರೂ.13000
- ಪಂಚಮಾರಿಷ್ಟ ಹೋಮ / ನವಗ್ರಹ ಹೋಮ ರೂ.10000
- ಶ್ರೀ ಗಣಪತಿ ಹೋಮ / ದೂರ್ವಾ ಹೋಮ ರೂ.3000
- ಸ್ವಯಂವರ ಪಾರ್ವತಿ ಪೂಜೆ ರೂ.3000
- ಶ್ರೀ ಸತ್ಯನಾರಾಯಣ ಪೂಜೆ ರೂ.3000
- ನವಗ್ರಹ ಸಹಿತ ಶನೀಶ್ವರ ಕಲ್ಪೋಕ್ತ ಪೂಜೆ ರೂ.1001
- ಅಶ್ವತ್ಥ ಪೂಜೆ ರೂ.1001
- ಅಕ್ಷರಾಭ್ಯಾಸ ರೂ.100
- ಅನ್ನಪ್ರಾಶನ ರೂ.150
- ವಾಹನ ಪೂಜೆ:
- ದ್ವಿಚಕ್ರ ರೂ.50
- ಚತುಷ್ಚಕ್ರ ರೂ.75
ಪೂಜಾ ಸಮಯ:
ಮಧ್ಯಾಹ್ನ ಗಂಟೆ 12.00
ರಾತ್ರಿ ಗಂಟೆ 7.00
- ಪ್ರತಿ ಶುಕ್ರವಾರ ದೇವಳದಲ್ಲಿ ರಾತ್ರಿ ಗಂಟೆ 7.00ರಿಂದ ಭಜನಾ ಸೇವೆ ನಡೆಯುತ್ತದೆ
- ಪ್ರತಿ ತಿಂಗಳ ಸಂಕ್ರಮಣದಂದು ರಾತ್ರಿ ಗಂಟೆ 8.00ರಿಂದ ಸಂಕ್ರಾಂತಿ ಪೂಜೆಯು ಗ್ರಾಮದ ಬೈಲುವಾರು ಸೇವೆಯಾಗಿ ಜರಗುತ್ತಿರುವುದು.
Matanthabettu Shree Mahishamardini Temple is located at Matanthabettu of Kodimbady Village of Puttur Taluk in Dakshina Kannada District. Matanthabettu is covered by rich greenery and agriculture is the major activity of the location.
ಗೂಗಲ್ ಮ್ಯಾಪ್ ಹಾಗೂ ಸಂಪರ್ಕ ವಿಳಾಸ
ಶ್ರೀ ಮಹಿಷಮರ್ದಿನಿ ದೇವಸ್ಥಾನ
ಮಠಂತಬೆಟ್ಟು, ಕೋಡಿಂಬಾಡಿ ಗ್ರಾಮ
ಪುತ್ತೂರು ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ, ಕರ್ನಾಟಕ 574325
Phone: 08251-207946 / 7353 971 868 / 9880 243 245