“ನಮ್ಮ ಭೂಮಿಯ ತರಕಾರಿ ಬ್ರಹ್ಮಕಲಶಕ್ಕೆ ಪೂರ್ವ ತಯಾರಿ” ವಿಶೇಷ ಕಾರ್ಯದತ್ತ ಮಠಂತಬೆಟ್ಟು ದೇವಿಯ ಭಕ್ತರು.

ಪುತ್ತೂರು : (ಫೆ.15) ಎಪ್ರಿಲ್ ತಿಂಗಳ 21 ನೇ ತಾರೀಖಿನಿಂದ 26 ನೇ ತಾರೀಖಿನವರೆಗೆ ನಡೆಯುವ ನಮ್ಮ ಮಠಂತಬೆಟ್ಟು ಶ್ರೀ ಮಹಿಷಮರ್ದಿನಿ ದೇವಳದ ಬ್ರಹ್ಮಕಲಶೋತ್ಸವದ ಶುಭ ಸಂದರ್ಭದಲ್ಲಿ ಭಕ್ತರ ಮಹಾದಾಸೆಯಂತೆ ತಾಯಿಯ ಪ್ರೇರಣೆಯ ಮೂಲಕ ಯಾವ ರೀತಿಯಾಗಿ ಯಶಸ್ವಿಯಾಗಿ ಗದ್ದೆ ಬೇಸಾಯವನ್ನು ಮಾಡಿರುತ್ತೇವೆಯೋ ಅದೇ ರೀತಿ ಭಕ್ತರ ಒಗ್ಗೂಡುವಿಕೆಯಿಂದ ಮತ್ತು ಹಂಬಲದಿಂದ ತರಕಾರಿ

Mattantabettu

ಬೆಳೆಯುವ ಮಹತ್ವಾಕಾಂಕ್ಷೆಯ ಯೋಜನೆಯಾದ “ನಮ್ಮ ಭೂಮಿಯ ತರಕಾರಿ ಬ್ರಹ್ಮಕಲಶಕ್ಕೆ ಪೂರ್ವ ತಯಾರಿ” ಎಂಬ ಶೀರ್ಷಿಕೆಯಡಿ ತರಕಾರಿ ಬೆಳೆಯುವ ಕಾರ್ಯಕ್ಕೆ ಚಾಲನೆ ನೀಡುವ ಕಾರ್ಯಕ್ರಮವು ಇದೇ ಬರುವ ಬಾನುವಾರ ದಿನಾಂಕ 16.02.2020 ರಂದು ಬೆಳಿಗ್ಗೆ 10.30 ಕ್ಕೆ ಸರಿಯಾಗಿ ಮಠಂತಬೆಟ್ಟು ಪಾಲ್ತಿಮಾರು ಗದ್ದೆಯಲ್ಲಿ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ಊರ ಭಕ್ತಾದಿ ಬಂಧುಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕಾಗಿ ಬ್ರಹ್ಮಕಲಶ ಮಾಧ್ಯಮ ಮತ್ತು ಪ್ರಚಾರ ಸಮಿತಿ ಸಂಚಾಲಕರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

CATEGORIES
TAGS
Share This

COMMENTS

Wordpress (0)
Disqus (0 )
error: Content is protected !!