ವಿವೇಕಾನಂದ ಪ್ರಾಥಮಿಕ ಶಾಲೆಯಲ್ಲಿ ಅಮ್ಮನ ಚರಿತ್ರೆ ಚಿಣ್ಣರ ವಿಮರ್ಶೆ.

Suma ashok rai

ಪುತ್ತೂರು : ( ಫೆ.08) ಮಠಂತಬೆಟ್ಟು ಶ್ರೀ ಮಹಿಷಮರ್ದಿನಿ ದೇವಸ್ಥಾನದ ಬ್ರಹ್ಮಕಲಶದ ಪ್ರಯುಕ್ತ ಮಾಧ್ಯಮ ಮತ್ತು ಪ್ರಚಾರ ಸಮಿತಿಯ ಸಂಯೋಜನೆಯಲ್ಲಿ ಬ್ರಹ್ಮಕಲಶ ಚಿಣ್ಣರ ಸಮಿತಿಯಿಂದ ನಡೆಯುವ ಅಮ್ಮನ ಚರಿತ್ರೆ ಚಿಣ್ಣರ ವಿಮರ್ಶೆ ಕಾರ್ಯಕ್ರಮವು ಪುತ್ತೂರಿನ ಪ್ರತಿಷ್ಠಿತ ಶಿಕ್ಷಣ ಸಂಸ್ಥೆ ವಿವೇಕಾನಂದ ಪ್ರಾಥಮಿಕ ಶಾಲೆಯಲ್ಲಿ ಶನಿವಾರ ಫೆಬ್ರವರಿ 08 ರಂದು ನಡೆಯಿತು. ವಿವೇಕಾನಂದ ವಿಧ್ಯಾಸಂಸ್ಥೆಯ ವಿಧ್ಯಾರ್ಥಿಗಳಾದ ಕು. ಸಿಂಚನ ಮತ್ತು ಕ. ಮಂಗಳ ದುರ್ಗಾ ರವರ ಪ್ರಾರ್ಥನೆಯೊಂದಿಗೆ ಆರಂಭವಾಯಿತು. ವಿದ್ಯಾರ್ಥಿ ಸಂಜಯ್ ಜಗದೀಶ್ ಮಠಂತಬೆಟ್ಟು ಶ್ರೀ ಮಹಿಷಮರ್ದಿನಿ ದೇವಸ್ಥಾನ ಬ್ರಹ್ಮಕಲಶದ ಚಿಣ್ಣರ ಸಮಿತಿಯ ಅಧ್ಯಕ್ಷರು, ಪದಾಧಿಕಾರಿಗಳು ಮತ್ತು ವಿವಿಧ ಸಮಿತಿ ಪದಾಧಿಕಾರಿಗಳಿಗೆ ಸ್ವಾಗತ ಕೋರಿದರು.

Pradil rai
ಕಾರ್ಯಕ್ರಮದಲ್ಲಿ ಚಿಣ್ಣರ ಸಮಿತಿ ಉಸ್ತುವಾರಿ ಶ್ರೀಮತಿ ಸುಮ ಅಶೋಕ್ ಕುಮಾರ್ ರೈ ಮಾತನಾಡಿ ಶ್ರೀ ಕ್ಷೇತ್ರ ಮಠಂತಬೆಟ್ಟು ಮಹಿಷಮರ್ದಿನಿ ದೇವಸ್ಥಾನದ ಬ್ರಹ್ಮಕಲಶವನ್ನು ವಿಶಿಷ್ಟವಾಗಿ ಮಾಡಲು ವಿವಿಧ ರೀತಿಯ ಹೊಸ ಹೊಸ ಚಿಂತನೆಗಳನ್ನು ಮಾಡಿದ್ದು ನಮ್ಮ ನಡೆ ಗದ್ದೆ ಕಡೆ ಕಾರ್ಯಕ್ರಮದ ಮುಖಾಂತರ ದೇವರ ನೈವೇದ್ಯಕ್ಕೆ ಬೇಕಾಗುವ ಅಕ್ಕಿಯನ್ನು ಭಕ್ತರೆಲ್ಲರೂ ಸೇರಿ ಕೆಲಸ ಮಾಡುವ ಮೂಲಕ ಗ್ರಾಮದ ಗದ್ದೆಯಲ್ಲಿ ಬೆಳೆಯುತ್ತಿದ್ದೆವೆ. ಬ್ರಹ್ಮಕಲಶ ಸಂದರ್ಭದಲ್ಲಿ ಬೇಕಾಗುವ ಬಾಳೆಗೋನೆ ಮತ್ತು ಬಾಳೆ ಎಲೆಯ ಅಗತ್ಯತೆಗಾಗಿ “ಮನೆಗೊಂದು ಬಾಳೆಗಿಡ ದೇವಿಗೊಂದು ಬಾಳೆಗೋನೆ” ಮೂಲಕ ಭಕ್ತರಿಗೆ ಬಾಳೆಗೋನೆ ನೀಡಲಾಗಿದೆ. ಇನ್ನು ದೇವಸ್ಥಾನಕ್ಕೆ ಬರುವ ಚಿಕ್ಕ ಮಕ್ಕಳನ್ನು ಶ್ರೀ ಮಹಿಷಮರ್ದಿನಿ ದೇವಸ್ಥಾನದ ಬ್ರಹ್ಮಕಲಶದ ಕಾರ್ಯದಲ್ಲಿ ಭಾಗಿಯಾಗಿಸಲು ಚಿಣ್ಣರ ಸಮಿತಿಯನ್ನು ರಚಿಸಿದ್ದು,

Guruvilas

ಬ್ರಹ್ಮಕಲಶದ ಪ್ರಚಾರ ಮತ್ತು ಮಾಧ್ಯಮ ಸಮಿತಿ ಸಂಚಾಲಕ ಶ್ರೀ ಜಯಪ್ರಕಾಶ್ ಬದಿನಾರು ರವರ ಸಂಯೋಜನೆಯಿಂದ ಶ್ರೀ ಕ್ಷೇತ್ರದ ಇತಿಹಾಸವನ್ನು ತಿಳಿಯಪಡಿಸಲು ಮತ್ತು ನಮ್ಮ ಸಂಸ್ಕೃತಿಯಯನ್ನು ಮಕ್ಕಳು ತಮ್ಮಲ್ಲಿ ಅಳವಡಿಸಿಕೊಳ್ಳುವಂತಾಗಲು “ಅಮ್ಮನ ಚರಿತ್ರೆ ಚಿಣ್ಣರ ವಿಮರ್ಶೆ” ಎಂಬ ಹೊಸ ಕಾರ್ಯಕ್ರಮ ಮಾಡುತ್ತಿದ್ದೇವೆ ಈ ಕಾರ್ಯಕ್ರಮದ ನಂತರ ಸಮಿತಿಯ ಎಲ್ಲಾ ಮಕ್ಕಳಲ್ಲಿ ಧಾರ್ಮಿಕ ಚಿಂತನೆಗಳು ಹೆಚ್ಚಾಗಿದೆ ಅಲ್ಲದೆ ತುಂಬಾ ಬದಲಾವಣೆಯನ್ನು ನಾವು ಕಾಣುತ್ತಿದ್ದೇವೆ. ಈ ಎಲ್ಲಾ ಕಾರ್ಯಕ್ರಮವು ಯಶಸ್ವಿಯಾಗಲೂ ಶ್ರೀ ದೇವಿಯ ಆಶೀರ್ವಾದ ಜೊತೆಗೆ ನಿಮ್ಮೆಲ್ಲರ ಸಹಕಾರ ಕಾರಣ ಎಂದರು. ಅಲ್ಲದೆ ವಿವೇಕಾನಂದ ಶಿಕ್ಷಣ ಸಂಸ್ಥೆಯ ಪ್ರೋತ್ಸಾಹ ಮತ್ತು ಇಲ್ಲಿಯ ವಿಧ್ಯಾರ್ಥಿಗಳು ನೀಡಿದ ಸಹಕಾರ ನಮಗೆ ಇನ್ನಷ್ಟು ಕಾರ್ಯಕ್ರಮ ನಡೆಸಲು ಪ್ರೇರಣೆಯಾಗಲಿದೆ ಎಂದರು. ಅಧ್ಯಕ್ಷತೆ ವಹಿಸಿದ ಚಿಣ್ಣರ ಸಮಿತಿ ಅಧ್ಯಕ್ಷ ಪ್ರದೀಲ್ ರೈ ಬ್ರಹ್ಮಕಲಶ ಕಾರ್ಯಗಳಲ್ಲಿ ವಿದ್ಯಾರ್ಥಿ ಮಿತ್ರರು ಎಲ್ಲಾರು ಭಾಗವಹಿಸುವಂತೆ ಮನವಿ ಮಾಡಿದರು.
ಕು. ಪ್ರಣಾಮ್ಯ ಅಮ್ಮನ ಚರಿತ್ರೆ ಚಿಣ್ಣರ ವಿಮರ್ಶೆ ಕಾರ್ಯಕ್ರಮದ ಬಗ್ಗೆ ಮಾಹಿತಿ ನೀಡಿದರು. ವಿವೇಕಾನಂದ ಶಾಲೆಯ ವಿದ್ಯಾರ್ಥಿಗಳಾದ ಕ.ಅಗಮ್ಯ ಮತ್ತು ತನ್ಮಯಿ ವಾಗ್ಲೆ ಅನಿಸಿಕೆ ವ್ಯಕ್ತಪಡಿಸಿದರು.

Vivekananda

ಕಾರ್ಯಕ್ರಮದಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳಿಗೆ ಅಭಿನಂದನಾ ಪತ್ರವನ್ನು ಶಾಲಾ ಶಿಕ್ಷಕಿ ನಳಿನಿ ಮಾತಾಜಿ, ಬ್ರಹ್ಮಕಲಶದ ಸಮಿತಿ ಪದಾಧಿಕಾರಿಗಳಾದ ಗಂಗಾಧರ ಶೆಟ್ಟಿ, ಸೌಮ್ಯ ಶಿವಪ್ರಕಾಶ್, ಶ್ರೀಮತಿ ರೇಣುಕಾ ಎಂ ನೀಡಿ ಗೌರವಿಸಿದರು. ಕಾರ್ಯಕ್ರಮದಲ್ಲಿ ಪ್ರಚಾರ ಸಮಿತಿಯ ಸಂಚಾಲಕ ಜಯಪ್ರಕಾಶ್ ಬದಿನಾರು, ಸಹ ಸಂಚಾಲಕರಾದ ಜಗದೀಶ್ ಕಜೆ, ಪ್ರಮುಖರಾದ ಯೋಗೀಶ್ ಸಾಮಾನಿ, ರಶ್ಮಿ ನಿರಂಜನ್ ರೈ, ಕರುಣಾಕರ ಸಾಮಾನಿ, ಚಿಣ್ಣರ ಸಮಿತಿ ಕಾರ್ಯಧ್ಯಕ್ಷರಾದ ನಿಶಿತ.ಜಿ.ಶೆಟ್ಟಿ ಮಠಂತಬೆಟ್ಟು, ಪ್ರಧಾನ ಕಾರ್ಯದರ್ಶಿ ಸಾನ್ವಿ.ಎಂ ರೈ ಮಠಂತಬೆಟ್ಟು, ಸಂಚಾಲಕರಾದ ಗುರುವಿಲಾಸ್ ಕೃಷ್ಣಗಿರಿ, ಉಪಾಧ್ಯಕ್ಷರಾದ ಶರಣ್ ಸೇಡಿಯಾಪು ಕಾರ್ಯದರ್ಶಿ ದಿಗಂತ್ ಡೆಕ್ಕಾಜೆ, ಚಿಣ್ಣರ ಸಮಿತಿಯ ಸದಸ್ಯರಾದ ಭವಿಷ್ಯ ಆಚಾರ್ಯ ಕೊಂಬಕೋಡಿ, ಸಾನ್ವಿ ಪೂಜಾರಿ ಕೆದಿಕಂಡೆ, ಧನುಷ್ ಆಚಾರ್ಯ ಕೊಂಬಕೋಡಿ, ನೆಹಾರಿಕಾ ಆರ್ ರೈ ಮಠಂತಬೆಟ್ಟು ಉಪಸ್ಥಿತರಿದ್ದರು.

CATEGORIES
TAGS
Share This

COMMENTS

Wordpress (0)
Disqus ( )
error: Content is protected !!