ಸಂಸ್ಕಾರಯುತ ಶಿಕ್ಷಣದ ರಾಯಭಾರಿ ವಿವೇಕಾನಂದ ತೆಂಕಿಲ, ಶ್ರೀ ರಾಮ ಉಪ್ಪಿನಂಗಡಿ ಶಾಲೆಯಲ್ಲಿ ನಾಳೆ “ಅಮ್ಮನ ಚರಿತ್ರೆ ಚಿಣ್ಣರ ವಿಮರ್ಶೆ” 300 ವಿಧ್ಯಾರ್ಥಿಗಳು ಪಾಲ್ಗೊಳ್ಳುವ ಸಾಧ್ಯತೆ.

ಪುತ್ತೂರು : (ಫೆ.07) ಶ್ರೀ ಮಹಿಷಮರ್ದಿನಿ ದೇವಸ್ಥಾನ ಮಠಂತಬೆಟ್ಟು ಇದರ ಬ್ರಹ್ಮಕಲಶದ ಪ್ರಯುಕ್ತ ಮಾಧ್ಯಮ ಮತ್ತು ಪ್ರಚಾರ ಸಮಿತಿಯ ಸಂಯೋಜನೆಯಲ್ಲಿ ನಡೆಯುವ “ಅಮ್ಮನ ಚರಿತ್ರೆ ಚಿಣ್ಣರ ವಿಮರ್ಶೆ” ವಿಶಿಷ್ಟ ಕಾರ್ಯಕ್ರಮವು ನಾಳೆ ದಿನಾಂಕ 08 ಫೆಬ್ರವರಿ 2020 ನೇ ಶನಿವಾರ ಬೆಳಿಗ್ಗೆ ಗಂಟೆ 10ಕ್ಕೆ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆ ತೆಂಕಿಲ ಪುತ್ತೂರು ಮತ್ತು 11.30ಕ್ಕೆ ಶ್ರೀ ರಾಮ ಪ್ರಾಥಮಿಕ ಶಾಲೆ ಉಪ್ಪಿನಂಗಡಿ ಇಲ್ಲಿ ನಡೆಯಲಿದೆ.

Mattantabettu

ಕಾರ್ಯಕ್ರಮವು ಶಾಲಾ ಮಕ್ಕಳಿಗೆ ಶ್ರೀ ಕ್ಷೇತ್ರದ ಇತಿಹಾಸವನ್ನು ಪರಿಚಯಿಸಲಿದ್ದು ವಿದ್ಯಾರ್ಥಿಗಳಲ್ಲಿ ಧಾರ್ಮಿಕತೆ ಮತ್ತು ಸಂಸ್ಕಾರ, ಸಂಸ್ಕೃತಿಯ ಬಗ್ಗೆ ಒಲವು ಮೂಡಿಸಲಿದೆ ಎಂದು ಬ್ರಹ್ಮಕಲಶ ಸಮಿತಿ ಪ್ರಚಾರ ಮತ್ತು ಮಾಧ್ಯಮ ಸಮಿತಿ ಸಂಚಾಲಕ ಶ್ರೀ ಜಯಪ್ರಕಾಶ್ ಬದಿನಾರು ಪತ್ರಿಕಾ ಪ್ರಕಟಣೆ ಯಲ್ಲಿ ತಿಳಿಸಿದ್ದಾರೆ.

CATEGORIES
TAGS
Share This

COMMENTS

Wordpress (0)
Disqus ( )
error: Content is protected !!