ಶ್ರೀ ಮಹಿಷಮರ್ದಿನಿ ದೇವಸ್ಥಾನದ ಜೀರ್ಣೋದ್ಧಾರಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ರೂ.5 ಲಕ್ಷ ದೇಣಿಗೆ

ಪುತ್ತೂರು : (ಡಿ.26) ಕೋಡಿಂಬಾಡಿ ಗ್ರಾಮದ ಮಠಂತಬೆಟ್ಟು ಶ್ರೀ ಮಹಿಷಮರ್ದಿನಿ ದೇವಸ್ಥಾನದ ಜೀರ್ಣೋದ್ಧಾರ ಕೆಲಸಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆಯವರು ರೂ.5 ಲಕ್ಷ ದೇಣಿಗೆ ನೀಡಿದ್ದು ಈ ಮೊತ್ತವನ್ನು ಕ್ಷೇತ್ರದ ಸಮುದಾಯ ಅಭಿವೃದ್ಧಿ ಪ್ರಾದೇಶಿಕ ನಿರ್ದೇಶಕರಾದ ಶ್ರೀಹರಿಯವರು ಮಠಂತಬೆಟ್ಟು ದೇವಸ್ಥಾನಕ್ಕೆ ಭೇಟಿ ನೀಡಿ ದೇವಳದ ಸಮಿತಿಗೆ ಹಸ್ತಾಂತರಿಸಿದರು. ಪುಷ್ಪರಾಜ್ ಯೋಜನಾಧಿಕಾರಿ ಸಮುದಾಯ ಅಭಿವೃದ್ಧಿ ವಿಭಾಗ ಧರ್ಮಸ್ಥಳ, ರವಿ ಉಪ್ಪಿನಂಗಡಿ ವಲಯದ ಮೇಲ್ವಿಚಾರಕರು, ಹೇಮಾವತಿ ಯಸ್. ಆಚಾರ್ಯ ಕೋಡಿಂಬಾಡಿ ಕಾರ್ಯಕ್ಷೇತ್ರದ ಸೇವಾಪ್ರತಿನಿಧಿ, ಸುರೇಶ್ ಗೌಡ ಬೋಳಾಜೆ ಅಧ್ಯಕ್ಷರು ಕೋಡಿಂಬಾಡಿ ಒಕ್ಕೂಟ, ಪವಿತ್ರಾ ಆಚಾರ್ಯ ಸೇಡಿಯಾಪು, ವಸಂತ ಶೆಟ್ಟಿ ದೇಂತಾರು, ಧರ್ಮಾವತಿ ಆಚಾರ್ಯ ಸೇಡಿಯಾಪು ಜೊತೆಗಿದ್ಧರು ಮತ್ತು ಕ್ಷೇತ್ರದ ತಂಡದೊಂದಿಗೆ ದೇವಳದ ಜೀರ್ಣೋದ್ಧಾರಗೊಳ್ಳುತ್ತಿರುವ ಕೆಲಸ ಕಾಮಾಗಾರಿಗಳನ್ನು ವೀಕ್ಷಿಸಿದರು.

Mattantabettu

ಈ ಸಂದರ್ಭದಲ್ಲಿ ಮಾತನಾಡಿದ ಅವರು, ಕ್ಷೇತ್ರದಿಂದ ಖಾವಂದರು 5 ಲಕ್ಷ ರೂಪಾಯಿಯನ್ನು ಪ್ರಸಾದ ರೂಪದಲ್ಲಿ ನೀಡಿದ್ದಾರೆ, ಇದರ ಜೊತೆಗೆ ದಾನಿಗಳಿಂದ ಸಂಗ್ರಹಿಸುವ ಮೊತ್ತದೊಂದಿಗೆ ಊರಿನವರು, ಸಮಿತಿಯವರು ಕೈ ಜೋಡಿಸಿ ಒಳ್ಳೆಯ ರೀತಿಯಲ್ಲಿ ಜೀರ್ಣೋದ್ಧಾರ ಮತ್ತು ಬ್ರಹ್ಮಕಲಶೋತ್ಸವನ್ನು ನಡೆಸಬೇಕೆಂದು ಸಲಹೆ ನೀಡಿದರು.

Mattantabettu

ಜೀರ್ಣೋದ್ಧಾರ ಮತ್ತು ಬ್ರಹ್ಮಕಲಶೋತ್ಸವ ಸಮಿತಿಯ ಕಾರ್ಯಧ್ಯಕ್ಷರಾದ ಸೀತಾರಾಮ ಶೆಟ್ಟಿ ಹೆಗ್ಡೆಹಿತ್ಲು, ಬ್ರಹ್ಮಕಲಶೋತ್ಸವ ಸಮಿತಿಯ ಪ್ರಧಾನ ಕಾರ್ಯದರ್ಶಿ ಜಯಾನಂದ ಕೋಡಿಂಬಾಡಿ, ಕಾರ್ಯದರ್ಶಿ ರಮೇಶ್ ನಾಯಕ್ ನಿಡ್ಯ, ಕೋಶಾಧಿಕಾರಿ ನಿರಂಜನ ರೈ ಮಠಂತಬೆಟ್ಟು, ಸಂಚಾಲಕರಾದ ಗಂಗಾಧರ ಶೆಟ್ಟಿ ಮಠಂತಬೆಟ್ಟು, ಜಯಪ್ರಕಾಶ ಬದಿನಾರು, ಉಪಾಧ್ಯಕ್ಷರುಗಳಾದ ವಾರಿಸೇನ ಜೈನ್ ಕೋಡಿಯಾಡಿ, ಕೇಶವ ಭಂಡಾರಿ ಕೈಪ ಬೆಳ್ಳಿಪಾಡಿ, ರಾಜೀವ್ ಶೆಟ್ಟಿ ಕೇದಗೆ-ಮಠಂತಬೆಟ್ಟು, ಸಂಕಪ್ಪ ಶೆಟ್ಟಿ ಮಠಂತಬೆಟ್ಟು,

Advertising

ಸಂಘಟನಾ ಕಾರ್ಯದರ್ಶಿ ಸಂತೋಷ್ ಕುಮಾರ್ ರೈ ಕೆದಿಕಂಡೆಗುತ್ತು, ಜಗನ್ನಾಥ ಶೆಟ್ಟಿ ನಡುಮನೆ, ಬ್ರಹ್ಮಕಲಶೋತ್ಸವ ಚಪ್ಪರ ಸಮಿತಿಯ ಸಂಚಾಲಕರಾದ ಸದಾಶಿವ ಸಾಮಾನಿ ಸಂಪಿಗೆದಡಿ-ಮಠಂತಬೆಟ್ಟು, ಉಗ್ರಾಣ ಸಮಿತಿಯ ಶಾಂತರಾಮ ಸಾಮಾನಿ ಮಠಂತಬೆಟ್ಟು, ಹೊರೆಕಾಣಿಕೆ ಸಮಿತಿಯ ಯೋಗೀಶ್ ಯಸ್. ಸಾಮಾನಿ ಸಂಪಿಗೆದಡಿ-ಮಠಂತಬೆಟ್ಟು, ವಾಹನ ನಿರ್ವಹಣಾ ಸಮಿತಿಯ ಪ್ರೀತಂ ಶೆಟ್ಟಿ ಕೇದಗೆ ಉಪಸ್ಥಿತರಿದ್ದರು.

CATEGORIES
TAGS
Share This

COMMENTS

Wordpress (0)
Disqus ( )
error: Content is protected !!