“ಅಮ್ಮನ ಚರಿತ್ರೆ – ಚಿಣ್ಣರ ವಿಮರ್ಶೆ” ಮಹಿಷಮರ್ದಿನಿ ಬ್ರಹ್ಮಕಲಶ ಚಿಣ್ಣರ ಸಮಿತಿಯಿಂದ ದಿಟ್ಟ ಹೆಜ್ಜೆ
ಪುತ್ತೂರು : (ಜ.16) ಶ್ರೀ ಮಹಿಷಮರ್ದಿನಿ ದೇವಸ್ಥಾನ ಮಠಂತಬೆಟ್ಟು, ಕೋಡಿಂಬಾಡಿ ಇದರ ವತಿಯಿಂದ ಏಪ್ರಿಲ್ 21 ರಿಂದ 26 ನೇ ತಾರೀಖಿನವರೆಗೆ ನಡೆಯುವ ಬ್ರಹ್ಮಕಲಶೋತ್ಸವದ ಚಿಣ್ಣರ ಸಮಿತಿಯ ವತಿಯಿಂದ ಆಯ್ದ ಶಾಲಾ ಆಸಕ್ತ ವಿದ್ಯಾರ್ಥಿಗಳಿಗೆ ಶ್ರೀ ಮಹಿಷಮರ್ದಿನಿ ದೇವಸ್ಥಾನದ ಇತಿಹಾಸ ಮತ್ತು ನಮ್ಮ ಹಿಂದೂ ಸಂಸ್ಕೃತಿಯ ಆಚಾರ ವಿಚಾರವನ್ನು

ಚಿಣ್ಣರ ಸಮಿತಿ ಅಧ್ಯಕ್ಷ ಪ್ರದೀಲ್ ರೈ ರ ಸಾಂದರ್ಭಿಕ ಚಿತ್ರ
ಮಕ್ಕಳಿಗೆ ತಿಳಿಯಪಡಿಸುವ ಉದ್ದೇಶದಿಂದ ಬ್ರಹ್ಮಕಲಶದ ಮಾಧ್ಯಮ ಮತ್ತು ಪ್ರಚಾರ ಸಮಿತಿಯ ಸಂಯೋಜನೆಯೊಂದಿಗೆ “ಅಮ್ಮನ ಚರಿತ್ರೆ – ಚಿಣ್ಣರ ವಿಮರ್ಶೆ” ಎಂಬ ವಿಶಿಷ್ಟ ಕಾರ್ಯಕ್ರಮ 19.01.2020 ಬೆಳಿಗ್ಗೆ 10.00 ಕ್ಕೆ ಕೋಡಿಂಬಾಡಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಜರುಗಲಿದೆ ಎಂದು ಬ್ರಹ್ಮಕಲಶ ಪ್ರಚಾರ ಮತ್ತು ಮಾಧ್ಯಮ ಸಮಿತಿಯ ಅಧ್ಯಕ್ಷರಾದ ಶ್ರೀ ಜಯಪ್ರಕಾಶ್ ಬದಿನಾರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.