ಕೋಡಿಂಬಾಡಿ ಶಾಲೆಯಲ್ಲಿ ವಿಧ್ಯುಕ್ತವಾಗಿ ಆರಂಭಗೊಂಡ “ಅಮ್ಮನ ಚರಿತ್ರೆ ಚಿಣ್ಣರ ವಿಮರ್ಶೆ” ಕಾರ್ಯಕ್ರಮ.
ಪುತ್ತೂರು : (ಜ.19) ಶ್ರೀ ಮಹಿಷಮರ್ದಿನಿ ದೇವಸ್ಥಾನ ಮಠಂತಬೆಟ್ಟು, ಕೋಡಿಂಬಾಡಿ ಏಪ್ರಿಲ್ 21 ರಿಂದ 26 ನೇ ತಾರೀಖಿನವರೆಗೆ ಶ್ರೀ ದೇವಿಗೆ ನಡೆಯಲಿರುವ ಅಷ್ಟಬಂಧ ಬ್ರಹ್ಮಕಲಶೋತ್ಸವದ ಪ್ರಯುಕ್ತ ದೇವಳದ “ಚಿಣ್ಣರ ಸಮಿತಿಯ” ವತಿಯಿಂದ ಆಯ್ದ ಶಾಲೆಗಳ ಆಸಕ್ತ ವಿದ್ಯಾರ್ಥಿಗಳಿಗೆ ಶ್ರೀ ದೇವಳದ ಇತಿಹಾಸವನ್ನು ತಿಳಿಯಪಡಿಸುವ ಉದ್ದೇಶದಿಂದ ಬ್ರಹ್ಮಕಲಶದ “ಮಾಧ್ಯಮ ಮತ್ತು ಪ್ರಚಾರ” ಸಮಿತಿಯ ಸಂಯೋಜನೆಯೊಂದಿಗೆ “ಅಮ್ಮನ ಚರಿತ್ರೆ, ಚಿಣ್ಣರ ವಿಮರ್ಶೆ” ಎಂಬ ವಿಶಿಷ್ಟ ಕಾರ್ಯಕ್ರಮವು ಕೋಡಿಂಬಾಡಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಇಂದು ಜನವರಿ 19 ರಂದು ಉದ್ಘಾಟನೆಗೊಂಡಿತ್ತು.

ಕಾರ್ಯಕ್ರಮ ಉದ್ಘಾಟನೆ ಮಾಡುತ್ತಿರುವ ಪ್ರದೀಲ್ ರೈ
ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಚಿಣ್ಣರ ಸಮಿತಿಯ ಅಧ್ಯಕ್ಷರಾದ ಪ್ರದೀಲ್ ಎ ರೈ, ರೈ ಎಸ್ಟೇಟ್ ಕೋಡಿಂಬಾಡಿ ವಹಿಸಿದ್ದರು. ಪ್ರಧಾನ ಕಾರ್ಯದರ್ಶಿ ಸಾನ್ವಿ ಎಂ ರೈ ಮಠಂತಬೆಟ್ಟು, ಕಾರ್ಯಧ್ಯಕ್ಷರಾದ ನಿಶಿತಾ ಜಿ ಶೆಟ್ಟಿ ಮಠಂತಬೆಟ್ಟು, ಸಂಚಾಲಕರಾದ ಗುರುವಿಲಾಸ್ ಕೃಷ್ಣಗಿರಿ, ಸಂಘಟನಾ ಸಂಚಾಲಕರಾದ ರಿಧಿ ಎ ರೈ, ರೈ ಎಸ್ಟೇಟ್ ಕೋಡಿಂಬಾಡಿ ಶಾಲಾ ನಾಯಕನಾದ ಚಿನ್ಮಯಿ, ಸಾಯಿ ಪ್ರಸಾದ್ ಮೋನಡ್ಕ, ಕಾರ್ಯದರ್ಶಿ ದಿಗಂತ್ ಡೆಕ್ಕಾಜೆ, ಉಪಾಧ್ಯಕ್ಷರಾದ ಯಶ್ವಿ ಡಿ ಶೆಟ್ಟಿ, ಶರಣ್ ಸೇಡಿಯಾಪು, ಶ್ರಾವಣಿ. ಯಸ್. ರೈ ಕೆದಿಕಂಡೆಗುತ್ತು, ಸಂಚಿತ ಕೃಷ್ಣಮೂರ್ತಿ ಪಾದೆ, ನಿದೀಶಾ ಜಿ ಶೆಟ್ಟಿ, ಧನ್ವಿ ಡಿ ಶೆಟ್ಟಿ, ಜಗದೀಶ್ ಕೃಷ್ಣಗಿರಿ ಉಪಸ್ಥಿತರಿದ್ದರು.

ಪ್ರಾಸ್ತಾವಿಕ ಮಾತನ್ನಾಡುತ್ತಿರುವ ಜಯಪ್ರಕಾಶ್ ಬದಿನಾರು
ಪ್ರಚಾರ ಸಮಿತಿಯ ಸಂಚಾಲಕರಾದ ಜಯಪ್ರಕಾಶ್ ಪ್ರಾಸ್ತಾವಿಕವಾಗಿ ಮಾತಾನಾಡಿದರು. ಪ್ರಣಮ್ಯ ಕಾರ್ಯಕ್ರಮವನ್ನು ನಿರೂಪಿಸಿದರು. ನಿಶ್ಮಿತಾ ರವರು ಸ್ವಾಗತಿಸಿದರು ಸಾನ್ವಿ ಎಂ ರೈ ಮಠಂತಬೆಟ್ಟು ವಂದನಾರ್ಪಣೆ ಮಾಡಿದರು.

ಕಾರ್ಯಕ್ರಮದಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳು ಹಾಗೂ ಅತಿಥಿಗಳು
ಈ ಕಾರ್ಯಕ್ರಮದಲ್ಲಿ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷರಾದ ಅಶೋಕ್ ಕುಮಾರ್ ರೈ, ರೈ ಎಸ್ಟೇಟ್ ಕೋಡಿಂಬಾಡಿ, ಕಾರ್ಯಧ್ಯಕ್ಷರಾದ ಸೀತಾರಾಮ ಶೆಟ್ಟಿ ಹೆಗ್ಡೆಹಿತ್ಲು, ಪ್ರಧಾನ ಕಾರ್ಯದರ್ಶಿ ಜಯಾನಂದ ಕೋಡಿ, ಕಾರ್ಯದರ್ಶಿ ರಮೇಶ್ ನಾಯಕ್ ನಿಡ್ಯ, ಸಂಚಾಲಕರಾದ ಗಂಗಾಧರ ಶೆಟ್ಟಿ ಮಠಂತಬೆಟ್ಟು, ಉಪಾಧ್ಯಕ್ಷರಾದ ಸಂಕಪ್ಪ ಶೆಟ್ಟಿ ಮಠಂತಬೆಟ್ಟು, ದಾಮೋಧರ ಶೆಟ್ಟಿ ಮಠಂತಬೆಟ್ಟು, ಶಿವಪ್ರಸಾದ್ ಶೆಟ್ಟಿ ಮಠಂತಬೆಟ್ಟು, ಶಾಲಾ ಶಿಕ್ಷಕಿ ಪದ್ಮಾವತಿ ವಾಸಪ್ಪ ಗೌಡ, ಶಾಲಾ ಎಸ್ ಡಿ ಎಂ ಸಿ ಅಧ್ಯಕ್ಷರಾದ ಚಿತ್ರಾ ಸುರೇಶ್ ಗೌಡ ಬೋಳಾಜೆ, ಮಹಿಳಾ ಸಮಿತಿಯ ಗೌರವ ಅಧ್ಯಕ್ಷರಾದ ಸುಮ ಅಶೋಕ್ ರೈ, ರೈ ಎಸ್ಟೇಟ್ ಕೋಡಿಂಬಾಡಿ, ಮಹಿಳಾ ಸಮಿತಿ ಅಧ್ಯಕ್ಷರಾದ ರಶ್ಮಿ ನಿರಂಜನ್ ರೈ ಮಠಂತಬೆಟ್ಟು, ಸದ್ಯಸರಾದ ಮಮತಾ ಗಂಗಧಾರ ಶೆಟ್ಟಿ ಮಠಂತಬೆಟ್ಟು, ರೇಣುಕಾ ಮುರಳೀಧರ ರೈ ಮಠಂತಬೆಟ್ಟು, ವಿಜಯಲಕ್ಷ್ಮೀ ರಮೇಶ್ ನಾಯಕ್ ನಿಡ್ಯ, ಪೂರ್ಣಿಮ ಸೀತಾರಾಮ ಶೆಟ್ಟಿ ಹೆಗ್ಡೆಹಿತ್ಲು, ಭವ್ಯ ದಾಮೋಧರ ಶೆಟ್ಟಿ ಮಠಂತಬೆಟ್ಟು,
ಪ್ರೇಮಲತಾ ದೇವದಾಸ್ ಪೂಜಾರಿ ಡೆಕ್ಕಾಜೆ, ಪುಷ್ಪಲತಾ ಮೋನಡ್ಕ, ಚಂದ್ರಹಾಸ ಸೆಡಿಯಾಪು, ವಿಜಯಲಕ್ಷ್ಮೀ ಕೃಷ್ಣಮೂರ್ತಿ ಪಾದೆ, ನಳಿನಿ ಪಿ ರೈ, ಪ್ರಚಾರ ಸಮಿತಿಯ ಸಹ ಸಂಚಾಲಕರಾದ ಸುಬಾಷ್ ರವಿ, ಜಗದೀಶ್ ಕಜೆ, ಸದಸ್ಯರಾದ ಸತೀಶ ಮಡಿವಾಳ ಸೇಡಿಯಾಪು, ಹರೀಶ್ ಪ್ರಭು ದಾರಂದಕುಕ್ಕು, ಪವಿತ್ರ ಆಚಾರ್ಯ ಸೇಡಿಯಾಪು, ಮನೀಷಾ ಶೆಟ್ಟಿ ಕೆದಿಕಂಡೆಗುತ್ತು, ಮನೋಜ್ ಶೆಟ್ಟಿ ಬರಮೇಲು, ಪ್ರಜಿತ್ ಶೆಟ್ಟಿ ಮಠಂತಬೆಟ್ಟು ಉಪಸ್ಥಿತರಿದ್ದರು.