ಡಿಸೆಂಬರ್ 22 ಮಹಿಷಮರ್ದಿನಿ ದೇವಸ್ಥಾನದಲ್ಲಿ ಮಕ್ಕಳ ಸಭೆ ಮಕ್ಕಳ ಬ್ರಹ್ಮಕಲಶ ಸಮಿತಿ ರಚನೆ

ಪುತ್ತೂರು : (ಡಿ.17) ತಮ್ಮ ಊರಿನ ದೇವಸ್ಥಾನದ ಬ್ರಹ್ಮಕಲಶ ಕಾರ್ಯಗಳಲ್ಲಿ ಮಕ್ಕಳು ಕೂಡ ಭಾಗವಹಿಸಲು ಮತ್ತು ಈ ನಿಟ್ಟಿನಲ್ಲಿ ಮಕ್ಕಳಿಗೆ ವಿಶೇಷವಾಗಿ ನಮ್ಮ ಸಂಸ್ಕೃತಿ ಮತ್ತು ಸಂಸ್ಕಾರ ಆಚಾರ ವಿಚಾರವನ್ನು ದಾರೆಯೆರೆಯುವ ಸಲುವಾಗಿ ಮಕ್ಕಳ ಸಭೆಯನ್ನು ಡಿಸೆಂಬರ್ 22ನೇ ಆದಿತ್ಯವಾರ ಶ್ರೀ ಮಹಿಷಮರ್ದಿನಿ ದೇವಸ್ಥಾನ ಮಠಂತಬೆಟ್ಟು ಇಲ್ಲಿಯ ಚಿನ್ಮಯಿ ಸಭಾಂಗಣದಲ್ಲಿ ಬೆಳಿಗ್ಗೆ 10 ಗಂಟೆಗೆ ಕರೆಯಲಾಗಿದೆ.

Mattantabettu

ಹಾಗೂ ಅದೇ ದಿನ ಮಕ್ಕಳ ಸಮಿತಿಯನ್ನು ಬ್ರಹ್ಮಕಲಶ ಸಮಿತಿ ಅಧ್ಯಕ್ಷರಾದ ಶ್ರೀ ಅಶೋಕ್ ಕುಮಾರ್ ರೈ ನೇತೃತ್ವದಲ್ಲಿ ರಚಿಸಿ ಅ ಮೂಲಕ ಮಕ್ಕಳೆಲ್ಲರೂ ಒಗ್ಗೂಡಿ ಶ್ರೀ ಮಹಿಷಮರ್ದಿನಿ ದೇವಸ್ಥಾನದ ಬ್ರಹ್ಮಕಲಶ ಕಾರ್ಯಚಟುವಟಿಕೆಗಳಲ್ಲಿ ಭಾಗವಹಿಸಲು ಸದಾವಕಾಶ ಆಗಲಿದೆ ಎಂದು ಬ್ರಹ್ಮಕಲಶ ಸಮಿತಿಯು ಮಾಧ್ಯಮ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

CATEGORIES
TAGS
Share This

COMMENTS

Wordpress (0)
Disqus ( )
error: Content is protected !!