ಎ.ಅರ್ ವಾರಿಯರ್ಸ್ ವತಿಯಿಂದ ಶ್ರೀ ಕ್ಷೇತ್ರ ಮಠಂತಬೆಟ್ಟುವಿನಲ್ಲಿ ಸೇವಾ ರೂಪದ ಶ್ರಮದಾನ.

ಪುತ್ತೂರು : (ಡಿ.30) ಮುಂಬರುವ 2020 ರ ಎಪ್ರಿಲ್ ತಿಂಗಳಿನಲ್ಲಿ ಕೋಡಿಂಬಾಡಿ ಮಠಂತಬೆಟ್ಟು ಶ್ರೀ ಮಹಿಷಮರ್ದಿನಿ ದೇವಸ್ಥಾನದಲ್ಲಿ ನಡೆಯಲಿರುವ ಬ್ರಹ್ಮಕಲಶೋತ್ಸವದ ಅಂಗವಾಗಿ ಶ್ರಮದಾನ ಕರಸೇವೆಯು ಊರ ಮತ್ತು ಪರವೂರ ಭಕ್ತರಿಂದ ನಡೆಯುತಿದ್ದು. ಇದರ ಮುಂದುವರಿದ ಭಾಗವಾಗಿ ಅಶೋಕ್ ಕುಮಾರ್ ರೈ ಅಭಿಮಾನಿ ಬಳಗ ಎ.ಆರ್ ವಾರಿಯರ್ಸ್‌ ಪುತ್ತೂರು ಇದರ ವತಿಯಿಂದ ಡಿಸೆಂಬರ್ 29 ರ ಆದಿತ್ಯವಾರದಂದು ಶ್ರೀ ಕ್ಷೇತ್ರ ಮಠಂತಬೆಟ್ಟುವಿನಲ್ಲಿ ಸೇವಾ ರೂಪದ ಶ್ರಮದಾನ ನಡೆಯಿತು.

AR worriers

ಈ ಸಂದರ್ಭದಲ್ಲಿ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷರಾದ ಅಶೋಕ್ ಕುಮಾರ್ ರೈ ಕೋಡಿಂಬಾಡಿ, ಎ.ಆರ್ ವಾರಿಯರ್ಸ್‌ ಇದರ ಪ್ರಮುಖರಾದ ಪ್ರಜ್ವಲ್ ರೈ ಪಾತಾಜೆ ಸವಣೂರು, ಸುಜಿತ್ ಬಂಗೇರ ಸಂಟ್ಯಾರ್, ದೇವರಾಜ್ ಸಿಂಹವನ, ಮನೋಜ್ ಸಂಟ್ಯಾರ್,ದೇವು ಪಂಜಳ,ಅರುಣ್ ಆಲಂಗಾರ್, ಚರಣ್ ಮಠ, ದೀರಜ್ ಸೇರಿದಂತೆ ಹಲವಾರು ಮಂದಿ ಕರಸೇವೆಯಲ್ಲಿ ಭಾಗಿಯಾದರು.

CATEGORIES
TAGS
Share This

COMMENTS

Wordpress (0)
Disqus ( )
error: Content is protected !!