ಮಠಂತಬೆಟ್ಟು ದೇವಸ್ಥಾನದಲ್ಲಿ ಗ್ರಹಣ ಶಾಂತಿ ಹೋಮ

ಪುತ್ತೂರು : (ಡಿ.26) ಮಠಂತಬೆಟ್ಟು ಶ್ರೀ ಮಹಿಷಮರ್ದಿನಿ ದೇವಸ್ಥಾನದದಲ್ಲಿ ಸೂರ್ಯಗ್ರಹಣ ದ ಪ್ರಯುಕ್ತ ಭಕ್ತರ ಅನುಕೂಲಕ್ಕಾಗಿ ವಿಶೇಷ ಗ್ರಹಣ ಶಾಂತಿಹೋಮವು ನಡೆಯಿತು.
ಬೆಳಿಗ್ಗೆ ಗ್ರಹಣಕಾಲದ ಆರಂಭದಲ್ಲಿ ಭಕ್ತರು ಸಂಕಲ್ಪದಲ್ಲಿ ಪಾಲ್ಗೊಂಡು ತದನಂತರ ಗ್ರಹಣ ಮೋಕ್ಷದ ನಂತರ ಕಲಶ ಸ್ನಾನವನ್ನು ಮುಗಿಸಿ ಭಕ್ತಾದಿಗಳು ಪುನೀತರಾದರು.

Mattantabettu

 

ಶ್ರೀ ಸುಬ್ರಹ್ಮಣ್ಯ ಭಟ್ ಮತ್ತು ದೇವಳದ ಪ್ರಧಾನ ಅರ್ಚಕರಾದ ರಾಮಕೃಷ್ಣ ಭಟ್ ಹಾಗೂ ಪುರೋಹಿತ ವೃಂದ ಈ ಕಾರ್ಯಕ್ರಮ ನೆರವೇರಿಸಿಕೊಟ್ಟರು. ಈ ಪುಣ್ಯ ಕಾರ್ಯದಲ್ಲಿ ದೇವಳದ ಜೀರ್ಣೋದ್ಧಾರ ಸಮಿತಿಯ ಮತ್ತು ಬ್ರಹ್ಮಕಲಶೋತ್ಸವ ಸಮಿತಿಯ ಸಂಚಾಲಕರು ಹಾಗೂ ಪದಾಧಿಕಾರಿಗಳು ಹಾಗೂ ಗ್ರಾಮದ ಭಕ್ತಾದಿಗಳು ಪಾಲ್ಗೊಂಡಿದ್ದರು.

CATEGORIES
TAGS
Share This

COMMENTS

Wordpress (0)
Disqus ( )
error: Content is protected !!