ಮೋದಿಯ ಸ್ವಚ್ಚ ಭಾರತ ಪರಿಕಲ್ಪನೆಯಂತೆ ಮಠಂತಬೆಟ್ಟು ದೇವಸ್ಥಾನದ ವತಿಯಿಂದ ಮಾರ್ಚ್ 8ರಂದು ಬೃಹತ್ ಸ್ವಚ್ಚತಾ ಕಾರ್ಯಕ್ರಮ.

ಪುತ್ತೂರು : (ಮಾ.02) ತಾಲೂಕಿನ ಪ್ರಮುಖ ದೇವಸ್ಥಾನಗಳಲ್ಲಿ ಒಂದಾದ ಶ್ರೀ ಮಠಂತಬೆಟ್ಟು ಮಹಿಷಮರ್ದಿನಿ ದೇವಸ್ಥಾನದ ಬ್ರಹ್ಮಕಲಶ ಕಾರ್ಯದ ನಿಮಿತ್ತ ಹತ್ತು ಹಲವು ವಿಶಿಷ್ಟವಾದ ಕಾರ್ಯಕ್ರಮಗಳನ್ನು ಈವರೆಗೂ ಭಕ್ತಾದಿಗಳ ನೇತೃತ್ವದಲ್ಲಿ ಮಾಡಿದ್ದು ಅದರಂತೆ ದೇಶದ ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರ ಬಹು ನಿರೀಕ್ಷಿತ ಕನಸಿನ ಒಂದು ಭಾಗವಾದ “ಸ್ವಚ್ಚ ಭಾರತ” ಪರಿಕಲ್ಪನೆಗೆ ಕೈಜೋಡಿಸುವ ನಿಟ್ಟಿನಲ್ಲಿ ದೇವಸ್ಥಾನವನ್ನು ಸಂಪರ್ಕಿಸುವ ರಸ್ತೆಯ ಬದಿಯಲ್ಲಿ ತುಂಬಿಕೊಂಡಿರುವ ಕಸ ಕಡ್ಡಿಯನ್ನು  Swatch bharath

ಸ್ಥಳೀಯ ಶಾಲಾ ಮಕ್ಕಳು,ವಿವಿಧ ಶಾಲಾ ಶಾಲಾಭಿವೃಧ್ಧಿ ಸಮಿತಿ, ಶಿಕ್ಷಕ ವೃಂದ, ಅಂಗನವಾಡಿ ಕಾರ್ಯಕರ್ತೆಯರು, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಘಟಕದ ಸದಸ್ಯರು ಮತ್ತು ಪದಾಧಿಕಾರಿಗಳು, ಸ್ಥಳೀಯ ಸಂಘ ಸಂಸ್ಥೆಗಳು, ಸ್ತ್ರೀ ಶಕ್ತಿ ಸಂಘಗಳು, ಬ್ರಹ್ಮಕಲಶ ಸಮಿತಿ ಪದಾಧಿಕಾರಿಗಳು ಮತ್ತು ಸಮಿತಿ ಸಂಚಾಲಕರು ದೇವಸ್ಥಾನದ ಬೈಲುವಾರು ಸಮಿತಿ ಸದಸ್ಯರು ಹಾಗೂ ಶ್ರೀ ದೇವಿಯ ಭಕ್ತಾದಿಗಳ ಒಗ್ಗುಡುವಿಕೆಯಲ್ಲಿ ಸೇಡಿಯಾಪು, ಶಾಂತಿನಗರ ಮತ್ತು ಪೆರ್ನೆ ಜಂಕ್ಷನ್ ಲ್ಲಿ ಮಾರ್ಚ್ 08 ರಂದು ಬೆಳಿಗ್ಗೆ 7 ಗಂಟೆಗೆ ಏಕಕಾಲದಲ್ಲಿ ಉದ್ಘಾಟನೆಗೊಂಡು ಮೂರು ಪ್ರತ್ಯೇಕ ತಂಡದ ಮುಖಾಂತರ ಸ್ವಚ್ಚತಾ ಕಾರ್ಯವು ನಡೆಯಲ್ಲಿದ್ದು ಕೋಡಿಂಬಾಡಿಯ ವಿನಾಯಕನಗರದಲ್ಲಿ ಕೊನೆಗೊಳ್ಳುತ್ತದೆ. ನಂತರ ಭಾಗವಹಿಸಿದ ಎಲ್ಲಾ ಬಂಧುಗಳು ಶ್ರೀ ಮಹಿಷಮರ್ದಿನಿ ದೇವಸ್ಥಾನ ಮಠಂತಬೆಟ್ಟು ಇಲ್ಲಿ ಶ್ರಮದಾನ ನಡೆಸಲ್ಲಿದ್ದಾರೆ. ಊರ ಪರವೂರ ಭಕ್ತರು, ಸಂಘಟನೆಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಬ್ರಹ್ಮಕಲಶ ಸಮಿತಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ. ಈ ಸ್ವಚ್ಚತಾ ಕಾರ್ಯಕ್ರಮದಲ್ಲಿ ಭಾಗವಹಿಸುವವರು ಅಗತ್ಯವಾಗಿ ಕತ್ತಿ, ಹಾರೆಯನ್ನು ತರಬೇಕಾಗಿ ವಿನಂತಿಸಲಾಗಿದೆ.

CATEGORIES
TAGS
Share This

COMMENTS

Wordpress (0)
Disqus ( )
error: Content is protected !!