ಕಾರ್ಪೋರೇಟ್ ಶೈಲಿಯ ಸಭೆ ನಡೆಸಿ ಗಮನ ಸೆಳೆದ ಮಠಂತಬೆಟ್ಟು ಮಹಿಷಮರ್ದಿನಿ ಬ್ರಹ್ಮಕಲಶ ಪ್ರಚಾರ ಸಮಿತಿ

Mattantabettu mahishamardini temple

ಪುತ್ತೂರು : (ಜ.05) ಮುಂಬರುವ ಎಪ್ರಿಲ್ 21 ನೇ ತಾರೀಖಿನಿಂದ 26 ನೇ ತಾರೀಖಿನವರೆಗೆ ನಡೆಯುವ ಶ್ರೀ ಮಹಿಷಮರ್ದಿನಿ ದೇವಸ್ಥಾನ ಮಠಂತಬೆಟ್ಟು, ಕೋಡಿಂಬಾಡಿ ಇಲ್ಲಿನ ಬ್ರಹ್ಮಕಲಶೋತ್ಸವದ ಅಂಗವಾಗಿ ಪ್ರಚಾರ ಸಮಿತಿಯ ಸಭೆಯು ಶ್ರೀ ದೇವಳದಲ್ಲಿ ನಡೆಯಿತು. ಬ್ರಹ್ಮಕಲಶೋತ್ಸವದ ಇತಿಹಾಸದಲ್ಲಿಯೇ ಪ್ರಥಮ ಬಾರಿಗೆ ದೇವಾಲಯವೊಂದರಲ್ಲಿ ವೀಡಿಯೋ ಕಾನ್ಫರೆನ್ಸ್ ಮೂಲಕ ಸಭೆಯನ್ನು ನಡೆಸುವ ಮೂಲಕ ಪ್ರಚಾರ ಸಮಿತಿಯ ಪ್ರಚಾರ ಕಾರ್ಯಗಳಿಗೆ ಆಧುನಿಕ ಸ್ಪರ್ಶ ದೊರೆತಿರುವುದು ಉಲ್ಲೇಖನೀಯ. ಸಭೆಯಲ್ಲಿ ದೇವಸ್ಥಾನದ ಪ್ರಧಾನ ಅರ್ಚಕರಾದ ಶ್ರೀ ರಾಮಕೃಷ್ಣ ಭಟ್ ರವರು ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷರಾದ ಅಶೋಕ್ ಕುಮಾರ್ ರೈ ಕೋಡಿಂಬಾಡಿಯವರಿಗೆ ವೀಡಿಯೋ ಕಾಲ್ ನೀಡುವ ಮೂಲಕ ಉದ್ಘಾಟನಾ ಕಾರ್ಯ ನೆರವೇರಿಸಿದರು.

Mattantabettu mahishamardini temple

ದೇವಸ್ಥಾನದ ಬ್ರಹ್ಮಕಲಶ ಕಾರ್ಯಗಳಲ್ಲಿ ಸೇವಾ ರೂಪದಲ್ಲಿ ಪ್ರಚಾರ ಸಮಿತಿಯವರು ಮಾಡುವ ಕೆಲಸ ಕಾರ್ಯಗಳು ಮಾದರಿಯಾಗಿದ್ದು ಅಂತರಾಷ್ಟ್ರೀಯ ಮಟ್ಟದಲ್ಲಿ ದೇವಿಯ ಭಕ್ತರಿಗೆ ದೇವಸ್ಥಾನದ ಕ್ಷಣ ಕ್ಷಣದ ಮಾಹಿತಿಯನ್ನು ನೀಡಿ ದೂರದ ಊರಿನ ಭಕ್ತರಿಗೂ ಶ್ರೀ ದೇವಿಯ ಕ್ಷೇತ್ರದಲ್ಲಿ ನಡೆಯುವ ಕಾರ್ಯಕ್ರಮವನ್ನು ನೋಡುವ ಸೌಭಾಗ್ಯ ಪ್ರಚಾರ ಸಮಿತಿಯ ಮುಖಾಂತರ ಆಗುತ್ತಿರುವುದು ಸಂತೋಷದ ವಿಷಯ ಬ್ರಹ್ಮಕಲಶದಂತಹ ದೇವರ ಕಾರ್ಯಕ್ರಮದ ಗುಣಮಟ್ಟವನ್ನು ಅಂತರಾಷ್ಟ್ರೀಯ ಮಟ್ಟದ ಕಾರ್ಪೋರೇಟ್ ಕಂಪೆನಿಗಳು ಮಾಡುವ ಸಭೆಯ ರೀತಿ ಮಾಡಿದ ಪ್ರಚಾರ ಸಮಿತಿಯ ಎಲ್ಲಾರಿಗೂ ಶ್ರೀ ಮಹಿಷಮರ್ದಿನಿ ದೇವಿಯ ಕೃಪೆ ಇರಲಿ ಬ್ರಹ್ಮಕಲಶ ಮತ್ತಷ್ಟು ಅಧ್ದೂರಿಯಾಗಿ ನಡೆಯುವಂತಾಗಲಿ ಎಂದು ಬ್ರಹ್ಮಕಲಶ ಸಮಿತಿಯ ಅಧ್ಯಕ್ಷರಾದ ಅಶೋಕ್ ಕುಮಾರ್ ರೈ ಶುಭ ಹಾರೈಸಿದರು.

Ashwini studio

ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ ಅಧ್ಯಕ್ಷತೆಯನ್ನು ಪ್ರಚಾರ ಸಮಿತಿಯ ಸಂಚಾಲಕರಾದ ಜಯಪ್ರಕಾಶ್ ಬದಿನಾರು ವಹಿಸಿದ್ದರು. ಕಾರ್ಯಕ್ರಮದ ಕುರಿತು ಮಾಹಿತಿಯನ್ನು ಸುದ್ದಿ ಬಿಡುಗಡೆ ಪುತ್ತೂರು ಇದರ ವರದಿ ವಿಭಾಗದ ಮುಖ್ಯಸ್ಥರಾದ ಸಂತೋಷ್ ಕುಮಾರ್ ಶಾಂತಿನಗರ ಮಾತನಾಡಿ ನಮ್ಮ ಗ್ರಾಮದ ದೇವಸ್ಥಾನದ ಕುರಿತು ಪ್ರತಿಯೊಬ್ಬರಿಗೂ ತಿಳಿಯಪಡಿಸುವ ನಿಟ್ಟಿನಲ್ಲಿ ನಾವೆಲ್ಲರೂ ಕಾರ್ಯನ್ನ್ಮೂಕರಾಗಿ ಬ್ರಹ್ಮಕಲಶ ದ ಪ್ರಚಾರ ಕಾರ್ಯಗಳನ್ನು ಹೊಸ ಹೊಸ ತಂತ್ರಜ್ಞಾನದ ಮುಖಾಂತರ ಮಾಡಬಹುದು ಎಂಬುದನ್ನು ನಾವು ಮಾಡಿ ತೋರಿಸುತ್ತಿರುವುದು ನಮಗೆಲ್ಲ ಹೆಮ್ಮೆಯ ವಿಷಯ ಎಂದರು. ಮತ್ತು ಅರ್ಚಕರಾದ ರಾಮಕೃಷ್ಣ ಭಟ್ ಇವರು ಮಾತನಾಡಿ ಪ್ರಚಾರ ಕಾರ್ಯಗಳಿಗೆ ವೇಗ ನೀಡುವ ಸಂದರ್ಭದಲ್ಲಿ ಶ್ರೀ ಕ್ಷೇತ್ರದ ಘನತೆಗೆ ದಕ್ಕೆ ಬಾರದ ರೀತಿಯಲ್ಲಿ ಎಲ್ಲಾ ಕೆಲಸಗಳು ನಡೆಯಲಿ ಎಂದು ಹೇಳಿ ಶುಭ ಹಾರೈಸಿದರು. ಪ್ರಚಾರ ಸಮಿತಿಯ ಸಹ ಸಂಚಾಲಕರಾದ ಜಗದೀಶ್ ಕಜೆ ಮಾತನಾಡಿ ವೆಬ್ ಸೈಟ್, ಸಾಮಾಜಿಕ ಜಾಲತಾಣದಲ್ಲಿ ಯಾವ ರೀತಿಯ ತಂತ್ರಜ್ಞಾನ ಮತ್ತು ಯಾವೆಲ್ಲ ಮಾನದಂಡವನ್ನು ಉಪಯೋಗಿಸಿ ಜನರಿಗೆ ದೇವಸ್ಥಾನದ ಬಗ್ಗೆ ಮಾಹಿತಿ ತಲುಪಿಸಬಹುದು ಎಂಬುದರ ಕುರಿತು ಮಾಹಿತಿ ನೀಡಿದರು.

Mattantabettu mahishamardini temple

ಕಾರ್ಯಕ್ರಮದ ಬಳಿಕ ಪರವೂರಿನಲ್ಲಿರುವ ಪ್ರಚಾರ ಸಮಿತಿಯ ಸದಸ್ಯರೊಡನೆ ವೀಡಿಯೋ ಕಾನ್ಫರೆನ್ಸ್ ಮೂಲಕ ಚರ್ಚಿಸಲಾಯಿತು. ಈ ಸಂದರ್ಭದಲ್ಲಿ ಸುದ್ದಿ ಬಿಡುಗಡೆ ಪತ್ರಿಕೆಯ ಉಮೇಶ್ ಮಿತ್ತಡ್ಕ, ಶ್ರೇಯಸ್ ಸೂತ್ರಬೆಟ್ಟು, ವಸಂತ ಪುಣಚ, ಪ್ರಚಾರ ಸಮಿತಿಯ ಸದಸ್ಯರುಗಳಾದ ಪವಿತ್ರಾ ಆಚಾರ್ಯ ಸೇಡಿಯಾಪು, ಯೋಗೀಶ್ ಸಾಮಾನಿ ಸಂಪಿಗೆದಡಿ ಮಠಂತಬೆಟ್ಟು, ಕವಿತಾ ಪೂಜಾರಿ ಕೈಪ, ಪ್ರಜ್ವಲ್ ಕುಲಾಲ್ ಸೇಡಿಯಾಪು, ಮನೋಜ್ ಶೆಟ್ಟಿ ಬರೆಮೇಲು,

Federal capital

ಸ್ಮರಣ ಸಂಚಿಕೆ ಸಮಿತಿಯ ಸಂಚಾಲಕರಾದ ಶ್ರೀಧರ ಪೂಜಾರಿ ಕೆದಿಕಂಡೆ, ಸತೀಶ್ ಮಡಿವಾಳ ಸೇಡಿಯಾಪು, ಪ್ರಜೀತ್ ಶೆಟ್ಟಿ ಮಠಂತಬೆಟ್ಟು, ಅಭಿಷೇಕ್ ನಾಯಕ್ ನೆಕ್ಕರಾಜೆ ಉಪಸ್ಥಿತರಿದ್ದರು. ದೇವಳದ ವ್ಯವಸ್ಥಾಪಕರಾದ ಸಂತೋಷ್ ಕುಮಾರ್ ರೈ ಕೆದಿಕಂಡೆಗುತ್ತು ಸ್ವಾಗತಿಸಿ, ಜಗದೀಶ್ ಕಜೆ ವಂದಿಸಿದರು. ಪ್ರಚಾರ ಸಮಿತಿಯ ಸಹಸಂಚಾಲಕರಾದ ಆದರ್ಶ್ ಶೆಟ್ಟಿ ಕಜೆಕ್ಕಾರು ಮತ್ತು ಸುಭಾಷ್ ಕೃಷ್ಣ ದಡಿಕೆತ್ತಾರು ಸಹಕರಿಸಿದರು.

CATEGORIES
TAGS
Share This

COMMENTS

Wordpress (1)
  • comment-avatar

    Good initiative by Matanthabettu Shri Mahishamardhini Temple of utilization of the latest technologies. Let Matanthabettu temple be a role model to other temples on the same. Best wishes for the brahmakalashothsava of Matanthabettu temple, Kodimbady.

  • Disqus ( )
    error: Content is protected !!