ಕರಾವಳಿಯ ದಣಿವರಿಯದ ನಾಯಕ ರೈ”ಗೆ ಮತ್ತೆ ಟಿಕೆಟ್
ಬಂಟ್ವಾಳ : (ಫೆ.06) ರಮಾನಾಥ ರೈ ಅಂದರೆ ಅದು ಬಂಟ್ವಾಳದ ಪಿಲಿ ಎಂದು ಕರೆಯುವುದುಂಟು. ಅಕ್ಷರಶಃ ತನ್ನ ಸುದೀರ್ಘ 4-5 ದಶಕದ ರಾಜಕಾರಣದಲ್ಲಿ ಹುಲಿಯಂತೆಯೇ ಬದುಕಿ ಬಾಳಿದವರು ರೈಗಳು. ಸ್ವತಃ ರೈ” ಗಳ ಪ್ರಭಾವದ ಮೇಲೆ ಕರಾವಳಿ ಭಾಗದ ಇತರ ಕ್ಷೇತ್ರದ ಅಭ್ಯರ್ಥಿಗಳ ಗೆಲುವು ನಿಶ್ಚಯವಾಗುತ್ತದೆ ಎಂದರೆ ರೈ” ಗಳು ಕರಾವಳಿ ಭಾಗದಲ್ಲಿ ಅಷ್ಟೆ ಪ್ರಭಾವ ಹೊಂದಿದ್ದಾರೆ ಎಂದರ್ಥ. ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷದ ತತ್ವ ಸಿದ್ದಾಂತಗಳಿಗೆ ಎಳ್ಳಷ್ಟೂ ಚ್ಯುತಿ ಬಾರದಂತೆ ನುಡಿದಂತೆ ನಡೆದ ಕರಾವಳಿ ಭಾಗದ ಏಕೈಕ ರಾಜಕಾರಣಿಯೊಬ್ಬರಿದ್ದರೆ ಅದು ಬೆಳ್ಳಿಪ್ಪಾಡಿ ರಮಾನಾಥ ರೈ ಪ್ರತಿಷ್ಠಿತ ಮನೆತನ, ಮನೆ ಬಾಗಿಲಿಗೆ ಬಂದ ಬಡಬಗ್ಗರಿಗೆ, ಶೋಷಿತರಿಗೆ ಅಶಕ್ತರನ್ನು ಬರಿಗೈಲಿ ಕಳುಹಿಸಿದ ನಿದರ್ಶನಗಳೇ ಈ ಮನೆತನದಲ್ಲಿ ಇರಲಿಕ್ಕಿಲ್ಲ. ನೂರಾರು ಎಕರೆ ಭೂಮಿ ಕಳೆದುಕೊಂಡ ದಾನ ಧರ್ಮಿಷ್ಟ ಕೊಡುಗೈ ದಾನಿಯೂ ಹೌದು.

ಬೆಳ್ಳಿಪ್ಪಾಡಿ ರಮಾನಾಥ ರೈ
ತನ್ನ ರಾಜಕೀಯ ಜೀವನದಲ್ಲಿ ಬಂಟ್ವಾಳ ವಿಧಾನಸಭಾ ಕ್ಷೇತ್ರವನ್ನು ನಿರಂತರ ಪ್ರತಿನಿಧಿಸುತ್ತಾ ಒಂದೆರೆಡು ಬಾರಿ ಅಪಪ್ರಚಾರದ ಮಧ್ಯೆ ರೈ”ಗಳು ಸೋಲನುಭವಿಸಿದ್ದು ಬಿಟ್ಟರೆ ಸತತ ಕ್ಯಾಬಿನೆಟ್ ದರ್ಜೆಯ ಸಚಿವರಾದವರು, ರಾಜಕೀಯ ಜೀವನದಲ್ಲಿ ಆಲಸ್ಯ, ದಣಿವರಿಕೆಯನ್ನು ಬದಿಗೊತ್ತಿ ಸಾವಿರಾರು ಕೋಟಿ ರೂಪಾಯಿಗಳ ಅನುದಾನಗಳು ರಸ್ತೆ, ಸಾರಿಗೆ, ಬಸ್ಸು ನಿಲ್ದಾಣ, ಬೃಹತ್ ಸೇತುವೆಗಳು, ಕುಡಿಯುವ ನೀರು, ವಿದ್ಯುತ್, ಮೂಲಸೌಕರ್ಯಗಳ ಗಮನಾರ್ಹ ಕೊಡುಗೆ ಅಭಿವೃದ್ಧಿ ಕಾರ್ಯಗಳು ಬಂಟ್ವಾಳ ಕ್ಷೇತ್ರದಲ್ಲಿ ರೈಗಳಿಂದ ನಡೆದಿದೆ. ಜಿಲ್ಲಾ ಉಸ್ತುವಾರಿ ಸಚಿವರಾಗಿ ಜಿಲ್ಲೆಗೆ ಅಭಿವೃದ್ಧಿ ಅನುದಾನದ ವಿಚಾರದಲ್ಲಿ ಸಮಾನ ನ್ಯಾಯ ಒದಗಿಸಿದವರು, ಬಡವರಿಗೆ ಹಕ್ಕು ಪತ್ರಗಳನ್ನು ನೀಡಿದವರು. ರೈಗಳ ಆಡಳಿತದ ಸಾಧನೆಯೆಂದರೆ ಅದು ಸಾವಿರ ಪುಟಗಳ ಅಧ್ಯಾಯವೇ ನಮ್ಮ ಮುಂದಿದೆ. ಸೋತಾಗ ಕುಗ್ಗಿದವರಲ್ಲ, ಗೆದ್ದಾಗ ಬೀಗಿದವರಲ್ಲ ಹಾಗಂದ ಮಾತ್ರಕ್ಕೆ ಪಕ್ಷ ಸಂಘಟನೆ ಜನರಿಗೆ ಸ್ಪಂದಿಸುವ ನಿಟ್ಟಿನಲ್ಲಿ ಮನೆಯಲ್ಲಿ ಕುಳಿತುಕೊಂಡವರೂ ಅಲ್ಲ.

Advertisement
ರೈ”ಗಳು ಇಂದು ಮಾಜಿಯಾಗಿರಬಹುದು ಇಂದಿಗೂ ಇವರ ಮನೆ ಬಾಗಿಲಿಗೆ ಜಿಲ್ಲೆಯ ಮೂಲೆ ಮೂಲೆಗಳಿಂದ ಸಮಸ್ಯೆಗಳನ್ನು ಹೊತ್ತು ನೂರಾರು ಜನ ಹಾಜರಿರುತ್ತಾರೆ. ಸ್ಪಂದನೆಯ ವಿಚಾರದಲ್ಲಿ ಉದಾಸೀನತೆ ತೋರದೆ ನೋಡುವ/ಮಾಡುವ ಅನ್ನುವ ಧೋರಣೆಯಿಂದ ಯಾವತ್ತೂ ಹಿಂದೆ ಸರಿದು ತನ್ನಿಂದ ತನ್ನ ಕೈಯಿಂದಾಗುವ ಕೆಲಸವನ್ನು ನೇರವಾಗಿ ಮಾಡಿ ಕೊಟ್ಟವರು ರೈ”ಗಳು. ಸಾವಿರಾರು ಯುವಕರಿಗೆ ವಿವಿಧ ಇಲಾಖೆಗಳಲ್ಲಿ ಉದ್ಯೋಗ ದೊರಕಿಸಿಕೊಟ್ಟರು. ಇಂದಿಗೂ ರಮಾನಾಥ್ ರೈ” ಗಳ ಹೆಸರು ಹೇಳಿ ಮೂರು ಹೊತ್ತು ಅನ್ನ ಉನ್ನುವ ಸಾವಿರಾರು ಕುಟುಂಬಗಳು ಜಿಲ್ಲೆ ಹೊರ ಜಿಲ್ಲೆಗಳಲ್ಲಿವೆ. ಇಂತಹ ನೇರ ನಡೆ ನುಡಿಯ ಕರಾವಳಿ ಕಾಂಗ್ರೆಸ್ ನ ಅನಭಿಷಿಕ್ತ ದೊರೆ ರಮಾನಾಥ್ ರೈ ಪರ ಕ್ಷೇತ್ರದಲ್ಲಿ ಅನುಕಂಪದ ಅಲೆ, ಅಭಿವೃದ್ಧಿಯ ಅನುಪಸ್ಥಿತಿ ಎದ್ದು ಕಾಣುತ್ತಿರುವುದನ್ನು ಜನಸಾಮಾನ್ಯರೇ ನೆನಪಿಸಿಕೊಳ್ಳುತ್ತಾರೆ.

Advertisement
ವಿಧಾನಸಭಾ ಚುನಾವಣೆ ಸಮೀಪಿಸುತ್ತಿದೆ. ಬಂಟ್ವಾಳ ಕ್ಷೇತ್ರದ ನಾಡಿಮಿಡಿತ ಪ್ರತಿ ಮನೆ ಮನೆಯ ಗುರುತು ಪರಿಚಯ ಜನಮಾನಸದಲ್ಲಿ ಅಭಿವೃದ್ಧಿ ಕಾರ್ಯದಲ್ಲಿ ಚಿರಪರಿಚಿತರಾಗಿರುವ ರೈ”ಗಳಿಗಿಂತ ಪರ್ಯಾಯ ನಾಯಕರು ಕಾಂಗ್ರೆಸ್ ನಲ್ಲಿಲ್ಲ. ರೈ”ಗಳೇ ಬಂಟ್ವಾಳ ಕ್ಷೇತ್ರದಲ್ಲಿ ಪ್ರಶ್ನಾತೀತ ನಾಯಕರು. ಬಂಟ್ವಾಳ ಅಭ್ಯರ್ಥಿ ಆಯ್ಕೆಯೆಂಬುವುದು ವರಿಷ್ಠರು ಈಗಾಗಲೇ ರೈ”ಗಳನ್ನೇ ಅಂತಿಮಗೊಳಿಸಿದ್ದಾರೆ. ರೈ”ಗಳು ಕ್ಷೇತ್ರದಲ್ಲಿ 45-50 ವರ್ಷಗಳಿಂದಲೂ ನಿರಂತರ ಒಡನಾಟ ಇಟ್ಟುಕೊಂಡವರು. ಉಳಿದ ರಾಜಕಾರಣಿಗಳಂತೆ ಜಿಲ್ಲೆಗೊಂದು ಸ್ವಂತ ಮನೆ ನಿರ್ಮಿಸಿಲ್ಲ. ಕ್ಷೇತ್ರದ ಜನಸಾಮಾನ್ಯರ ಯಾವುದೇ ಶುಭ ಸಮಾರಂಭ ಕಷ್ಟ ಸುಖ ದು:ಖದ ಯಾವುದೇ ಸಮಾರಂಭವನ್ನು ಮಿಸ್ ಮಾಡಿಕೊಂಡವರಲ್ಲ. ತನಗೆ ಆಮಂತ್ರಣ ದೊರಕಿದರೆ, ಸುದ್ದಿ ದೊರೆತರೆ ರಾತ್ರಿ ಗಂಟೆ 12.00 ಆದರೂ ಹಾಜರಾಗಿಯೇ ಆಗುತ್ತಾರೆ. ಇಂತಹ ಮತ್ತೊಬ್ಬ ರಾಜಕಾರಣಿ ಕ್ಷೇತ್ರದಲ್ಲಿ ಈಗಲೂ ಇಲ್ಲ ಮುಂದೆ ಹುಟ್ಟಿ ಬರುವುದೂ ಕಷ್ಟ. ಮತ್ತೊಮ್ಮೆ ರಮಾನಾಥ್ ರೈ ನಾಮಪತ್ರ ಸಲ್ಲಿಸಲು ಕ್ಷಣಗಣನೆ ಆರಂಭವಾಗಿದೆ.