ನಾಟಿವೈದ್ಯ ಪದ್ಧತಿಯನ್ನು ಉಳಿಸಿಕೊಂಡು ಬಂದಿರುವ ಪ್ರತಿಷ್ಠಿತ ಮನೆತನ.

ಬರಹ: ಪಟ್ಲ ಯತೀನ್ ಬಿರ್ವ ಕಡೇಶಿವಾಲಯ

ಪುತ್ತೂರು  : ನಾಟಿ ವೈದ್ಯರು ವಂಶಪಾರಂಪರ್ಯವಾಗಿ ಬಂದ ಜ್ಞಾನವನ್ನು ಬಳಸಿ ಹಲವು ರೋಗಗಳಿಗೆ ಚಿಕಿತ್ಸೆ ನೀಡಿ ಗುಣವಾಗಿದೆ. ಒಂದು ಮನುಷ್ಯನಿಗೆ ರೋಗಗಳು ಬರವುದು ಎಲ್ಲ ಕಾಲದಲ್ಲಿ ಇತ್ತು. ಅದಕ್ಕೆ ಯಾವ ರೋಗಕ್ಕೆ ಯಾವ ರೋಗಕ್ಕೆ ಯಾವ ಔಷಧಿಯನ್ನು ಕೊಡಬಹುದು ಎಂಬುದು ಪ್ರಕೃತಿಯಲ್ಲಿ ಇರುವಂತಹ ಗಿಡಮೂಲಿಕೆಗಳು ಬೇರು, ಎಲೆ, ಬಲ್ಲಿ, ತೊಗಟೆ, ಮರ, ಕಾಯಿ, ಹಣ್ಣು, ಅವುಗಳ ಜೊತೆ ಒಡನಾಟ ಇರಬಹುದು. ಸೂಕ್ಷ್ಮವಾಗಿ ಗಮನಿಸುವುದು ಅವುಗಳನ್ನು ಧ್ಯಾನದ ಮನಸ್ಸಿನಿಂದ ನೋಡುತ್ತಿದ್ದರು. ಇಂತಹ ಕಾಯಿಲೆಗಳು ಬಂದಾಗ ಇಂಥ ಬೇರಿನಿಂದ ಗುಣವಾಗುತ್ತದೆ. ಎಂದು ತಿಳಿದು ನಾಟಿ ಔಷಧಿಯನ್ನು ಕೊಡುತ್ತಿದ್ದರು. ಕೆಲವು ವೈದ್ಯ ಪದ್ಧತಿಯಲ್ಲಿ ಚಿಕಿತ್ಸೆ ಪಡೆದು ಫಲಕಾರಿಯಾಗದೆ ರೋಗಿಗಳು ಕೊನೆಗೆ ಮೊರೆಹೋಗುವುದು ನಾಟಿ ವೈದ್ಯ ಪದ್ಧತಿಗೆ. ಈಗಲೂ ನಾಟಿ ಔಷಧಿಯನ್ನು ಹಲವಾರು ಮಂದಿ ಮಾಡುತ್ತಿದ್ದಾರೆ. ಪರಂಪರೆಯಿಂದ ನಾಟಿವೈದ್ಯ ಪದ್ದತಿಯನ್ನು ಉಳಿಸಿಕೊಂಡು ಬಂದಿರುತ್ತಾರೆ. ಅದರಲ್ಲೂ “ಪುತ್ತೂರು ತಾಲೂಕಿನ ಕಬಕ ಗ್ರಾಮದ ಪ್ರತಿಷ್ಠಿತ ಮನೆತನ ಕಲ್ಲೇಗ-ಮುರ” ನಾಟಿವೈದ್ಯ ಮುತ್ತಮ್ಮಇವರ ತಂದೆ ನಾಟಿವೈದ್ಯದಲ್ಲಿ ಪ್ರಸಿದ್ಧರಾಗಿದ್ದ ಅಪ್ಪಯ್ಯ ಪೂಜಾರಿ ನಾಟಿ ವೈದ್ಯರಾಗಿದ್ದರು. ಪಂಡಿತರಾಗಿದ್ದರು ಮುತ್ತಮ್ಮ ಅವರ ತಾಯಿ ಜಾಕಮ್ಮರವರು ನಾಟಿವೈದ್ಯ ಮುತ್ತಮ್ಮ ರವರು ತಂದೆಯಿಂದ ನಾಟಿವೈದ್ಯ ಗಿಡಮೂಲಿಕೆಗಳ ಔಷದಿಯನ್ನು ಕೊಡಲು ಇವರಿಂದ ಕಲಿತು. ಮಂತ್ರವನ್ನು ಮತ್ತು ನೂಲು ಕಟ್ಟಲು ತಂದೆಯಿಂದ ವಿದ್ಯೆಯನ್ನು ಪಡೆದುಕೊಂಡಿದ್ದು. ನಾಟಿ ವೈದ್ಯರಾಗಿ ಸಮಾಜಸೇವೆ ಮಾಡಲು ಮುತ್ತಮ್ಮ ರವರು 25 ವರ್ಷ ಇರುವಾಗಲೇ ಆಯುರ್ವೇದ ನಾಟಿ ಔಷಧಿಯನ್ನು ಕೊಡಲು ಪ್ರಾರಂಭಿಸಿದರು. ಪಮ್ಮಣ್ಣ ಪೂಜಾರಿ ಮತ್ತು ನಾಟಿವೈದ್ಯ ಮುತ್ತಮ್ಮ ಅವರಿಗೆ ಮೂರು ಗಂಡು ಮಕ್ಕಳು ಎರಡು ಹೆಣ್ಣು ಮಕ್ಕಳು ಇವರಿಗೆ.

ನಾಟಿ ವೈದ್ಯ ಪದ್ಧತಿಯಲ್ಲಿ ಸಮಾಜ ಸೇವೆ ಮಾಡುತ್ತಾ. ಹಲವಾರು ಜನರ ಬದುಕಿನಲ್ಲಿ ಆಶಾಕಿರಣವಾಗಿದ್ದ ಇವರು ಕಾಯಿಲೆಗಳಿಗೆ ಕೊಡುತ್ತಿದ್ದ ನಾಟಿ ಔಷಧಿ ಸರ್ಪಸುತ್ತು, ಸರ್ಪ ನಂದಲ, ಕೆಂಪು, ಹೊರ ಮುಖದ ಕ್ಯಾನ್ಸರ್, ಕಣ್ಣು ದೃಷ್ಟಿಯಿಂದ ಉಂಟಾಗುವ ದೋಷಗಳು, ಬೆಸರ್ಪ್ಪು, ದೃಷ್ಟಿ ಕಜ್ಜಿ ಶರೀರಕ್ಕೆ, ಬೆಂಕಿ ಬಿದ್ದಾಗ ಊರಿಗೆ ಉರಿ ತೆಗೆಯುವುದು, ಇಂತಹ ರೋಗಗಳಿಗೆ ಆಯುರ್ವೇದ ನಾಟಿ ಔಷಧಿಯನ್ನು ಕೊಡುತ್ತಿದ್ದರು. ಹಿಂದಿನಿಂದ ಬಂದಂತಹ ಕ್ರಮದಂತೆ ಸಿಯಾಲ ಮಂತ್ರಿಸಿ ಕೊಡುವುದು. ನೂಲು ಕಟ್ಟುವುದು ನಾಟಿ ಮದ್ದಿಗೆ ಬೇಕಾದ ಗಿಡಮೂಲಿಕೆಗಳು ಬೇರು ಮತ್ತು ಎಲೆಗಳ ಕಷಾಯ ಹಾಗೂ ಲೇಪ ಹಚ್ಚಿ ರೋಗಿಗಳನ್ನು ಗುಣಮುಖವಾಗಿ ಮಾಡಿರುತ್ತಾರೆ. ಸರ್ಕಾರಿ ವೈದ್ಯರಿಗೆ ಸರ್ಪಸುತ್ತು ಕಾಯಿಲೆಯಿಂದ ಅವರ ಒಂದು ಕಣ್ಣು ಮುಚ್ಚಿಕೊಂಡಿತ್ತು. ಇವರಲ್ಲಿ ನಾಟಿ ಔಷಧಿಯನ್ನು ಮಾಡಿ ಸಂಪೂರ್ಣ ಗುಣವಾಗಿದೆ. ಇಂತಹ ಹಲವಾರು ಉದಾಹರಣೆಗಳಿವೆ. ನಾಟಿ ವೈದ್ಯದಲ್ಲಿ ಇವರ ಕೈಗುಣದಿಂದ ಹಲವಾರು ರೋಗಗಳನ್ನು ಗುಣಪಡಿಸಿದ ತಾಯಿ ಕೆಲವು ವೈದ್ಯಪದ್ಧತಿಯ ಕೆಲವು ರೋಗಗಳು ಗುಣವಾಗದೆ ಮೊರೆಹೋಗುವುದು ನಾಟಿ ವೈದ್ಯ ಪದ್ಧತಿಗೆ. ಅದೇ ರೀತಿ ನಾಟಿ ಔಷಧಿಗೆ ಮುಂಬೈ, ಆಂಧ್ರಪ್ರದೇಶ, ಕೇರಳ, ಮತ್ತು ತಮಿಳು ನಾಡುಗಳಿಂದ ಬಂದ ಜನರು ಇವರಲ್ಲಿ ಬಂದು ತುಂಬಾ ಜನ ಚಿಕಿತ್ಸೆ ಪಡೆದು ಗುಣವಾಗಿ ಹೋಗಿದ್ದಾರೆ. ಇವರು ಮುಖ್ಯವಾಗಿ ಸುಬ್ರಹ್ಮಣ್ಯ ದೇವರನ್ನು ಸ್ಮರಿಸುತ್ತಾ ಮತ್ತು ದೇಯಿ ಬೈದೆತಿ ತಾಯಿಯ ಹೆಸರನ್ನು ಹೇಳಿ ಮನೆಯ ದೈವ ಶಕ್ತಿಗೆ ಕೈಮುಗಿದು ಔಷಧಿಯನ್ನು ಕೊಡುತ್ತಿದ್ದರು.

ನಾಟಿ ವೈದ್ಯದಲ್ಲಿ ಇವರ ಹೆಸರನ್ನು ತಿಳಿದವರಿಲ್ಲ ಇಂದಿನಿಂದಲೂ ನಾಟಿವೈದ್ಯೆ ಮುತ್ತಮ್ಮ ರವರು ಅಂದರೆ ಎಲ್ಲರ ಮನಸ್ಸಿನಲ್ಲಿ ಇರುವಂತಹ ಜನಪ್ರಿಯ ನಾಟಿವೈದ್ಯರು. ನಾಟಿ ವೈದ್ಯ ಪದ್ಧತಿಯಲ್ಲಿ ಸಾಧನೆ ಮಾಡಿದ್ದು ಇವರು 1991ರಲ್ಲಿ ಜರ್ಮನಿಯ ವೈದ್ಯರ ತಂಡವೊಂದು ಉಡುಪಿಯ ಡಾ|| ಕೃಷ್ಣಮೂರ್ತಿ ಅವರ ಸಹಕಾರದೊಂದಿಗೆ ನಾಟಿವೈದ್ಯಮುತ್ತಮ್ಮ ರವರ ಜೊತೆಗೆ ಸಂವಾದ ಸಂದರ್ಶನ ನಡೆಸಿರುವ ನಾಟಿ ವೈದ್ಯ ಪದ್ಧತಿಯಲ್ಲಿ ಇವರು ಮೆರೆದಿರುವ ಶ್ರೇಷ್ಠತೆಗೆ ಸಂದ ಗೌರವಾಗಿದೆ. ಇವರ ಸೇವೆಗೆ ಯಾವುದೇ ಶುಲ್ಕವನ್ನು ಬಯಸಲಿಲ್ಲ. ರೋಗಿಗಳ ಸಮಸ್ಯೆ ಎಷ್ಟೇ ತೀವ್ರ ಇದ್ದರೂ ಆಹೋರಾತ್ರಿ ಅವಿಶ್ರಾಂತ ಜನಪರ ಸೇವೆಮಾಡಿ ನಗುಮುಖದಿಂದ ರೋಗಿಗಳಿಗೆ ಧೈರ್ಯ ತುಂಬಿ ರೋಗಿಗಳಿಗೆ ವೈದ್ಯರಾಗಿ ತಾಯಿಯಾಗಿ ನಿರಂತರ ನಿಸ್ವಾರ್ಥ ಸೇವೆ ಮಾಡಿರುತ್ತಾರೆ. ಇವರ ಮನೆಗೆ ಯಾರಾದರೂ ಸಮಾಜಸೇವೆ ಮಾಡಲು ಸಂಘ-ಸಂಸ್ಥೆಗಳು ಬಂದರೆ ನಾಟಿ ವೈದ್ಯೆ ಮುತ್ತಮ್ಮ ರವರು ಸಮಾಜಸೇವೆ ಮಾಡುತ್ತಿದ್ದರು. ನಾಟಿ ವೈದ್ಯರಾಗಿ ಸಮಾಜಸೇವೆ ಮಾಡಿರುವುದನ್ನು ಗುರುತಿಸಿ ಹಲವಾರು ಸಂಘ ಸಂಸ್ಥೆಗಳು ಇವರನ್ನು ಸನ್ಮಾನಿಸಿರುತ್ತಾರೆ. ಇವತ್ತು ಇವರು ಇಲ್ಲದಿದ್ದರೂ ಅವರ ನೆನಪು ನಾಟಿ ವೈದ್ಯದಲ್ಲಿ ಮರೆಯಲಾಗದ ನೆನಪು.

Kallega

ಈಗ ಕಲ್ಲೇಗ -ಮುರ ಪ್ರತಿಷ್ಠಿತ ಮನೆತನದಿಂದ ನಾಟಿ ವೈದ್ಯರಾಗಿ ದಿ.ಮುತ್ತಮ್ಮ ರವರ ದೊಡ್ಡ ಮಗನ ಧರ್ಮಪತ್ನಿ ನಾಟಿವೈದ್ಯ ಕಮಲ ಪೂಜಾರಿಯವರು ಮುತ್ತಮ್ಮ ರವರಿಂದ ಯಾವ ರೋಗಕ್ಕೆ ಔಷಧಿ ಕೊಡುವುದು ಇವರಿಂದ ವಿದ್ಯೆಯನ್ನು ಪಡೆದುಕೊಂಡು. ಸಿಯಾಲ ಮಂತ್ರಿಸಿ ಕೊಡುವುದು. ಮಂತ್ರವನ್ನು ಕಲಿತುನೂಲು ಕಟ್ಟಲು ಇವರಿಂದ ಕಲಿತರು. ಇವರು ಹಲವಾರು ಕಾಯಿಲೆಗೆ ನಾಟಿ ಔಷಧಿಯನ್ನು ಕೊಡುತ್ತಿದ್ದಾರೆ. ನಾಟಿ ವೈದ್ಯರಾಗಿ ತಲೆತಲಾಂತರದಿಂದ ಬಂದ ನಾಟಿ ವೈದ್ಯ ಪದ್ಧತಿಯನ್ನುಪದ್ಧತಿಯನ್ನು ಬಂದ ನಾಟಿ ವೈದ್ಯ ಪದ್ಧತಿಯನ್ನು ಉಳಿಸಿಕೊಂಡು ಬಂದಿರುತ್ತಾರೆ.

 

CATEGORIES
Share This

COMMENTS

Wordpress (1)
  • comment-avatar
    Ravindra 3 years

    ಸರ್ ನನ್ನೆಗ ಕೀವಿ ಕೇಳಿಸುವಾದಿಲ್ಲ ಪ್ಲಜ್ ಇವರ ನಂಬರ್ ಓರ್ ಅಡ್ರೆಸ್ಸ್ ಶೇರ್ ಮಾಡಿ 9538882448

  • Disqus (0 )
    error: Content is protected !!