ಪೊಲೀಸ್ ಅಧಿಕಾರಿಯಿಂದ ತಡರಾತ್ರಿ ಬೆಳ್ಳಾರೆಯ ಲಾಡ್ಜ್ ನಲ್ಲಿ ವಿವಾಹಿತ ಮಹಿಳೆಯ ಜತೆ ಸರಸ ಸಲ್ಲಾಪ ಧರ್ಮದೇಟು.
ಸುಳ್ಯ : (ಅ.04) ಕೋಮು ದ್ವೇಷದ ಕೊಲೆಗಳಿಂದ ಬೂದಿ ಮುಚ್ಚಿದ ಕೆಂಡದಂತಿದ್ದ ಕರಾವಳಿಯ ಜನರಿಗೆ ಪೋಲಿ(ಸ್) ಅಧಿಕಾರಿಯೋರ್ವರು “ಆನಂದ”ವಾಗಿ ವಿವಾಹಿತ ಮಹಿಳೆಯ ಜತೆ ಸರಸ ಸಲ್ಲಾಪದಲ್ಲಿ ತೋಡಗಿರುವಾಗ ಪತಿಯ ಕೈಗೆ ಸಿಕ್ಕಿ ಧರ್ಮದೇಟಿನಲ್ಲಿ ಮಿಂದು ಏಳುವ ಮೂಲಕ ಸದಾ ಋಣಾತ್ಮಕ ವರದಿಗಳಿಂದ ರೋಸಿ ಹೋಗಿದ್ದ ಕರಾವಳಿಯ ಜನರಿಗೆ ಈ ವರದಿ ರಸದೌತಣ ನೀಡಿದೆ.

ಸಾಂದರ್ಬಿಕ ಚಿತ್ರ
ಸಮಾಜ ಕಲ್ಯಾಣ ನಿಗಮದ ಮಾಜಿ ಅಧ್ಯಕ್ಷೆ ಪ್ರಭಾವಿ ‘ಕೈ’ ನಾಯಕಿ, ಈಗಾಗಲೇ ಪುತ್ತೂರು ವಿಧಾನಸಭಾ ಕ್ಷೇತ್ರದ ಕಾಂಗ್ರೇಸ್ ಪಕ್ಷದ ಟಿಕೆಟ್ ಆಕಾಂಕ್ಷಿರೊರ್ವರ ಸುಪುತ್ರಿ, ಕಾಮದೇನು ಸಂಸ್ಥೆಯ ಪ್ರವರ್ತಕರ ಸೊಸೆ ಹಾಗೂ ಸದಾ ಜನಸಾಮಾನ್ಯರನ್ನು ಅವಕಾಶ ಸಿಕ್ಕಿದಾಗೆಲ್ಲ ಚಡ್ಡಿಯಲ್ಲಿ ನಿಲ್ಲಿಸುತ್ತೇನೆ ಅಂತ ಉಚ್ಚಾರಿಸುವ ಬೆಳ್ಳಾರೆಯ ಪೋಲಿ(ಸ್) ಅಧಿಕಾರಿ ತಾನೇ ಬೆತ್ತಲೆಯಾಗಿದ್ದಾರೆ ಎನ್ನಲಾಗಿದ್ದು ಈಗಾಗಲೇ ವಿಷಯ ಕಾಡ್ಗಿಚ್ಚಿನಂತೆ ಹರಡಿದ್ದು ಪೋಲಿಸ್ ಅಧಿಕಾರಿ ಮತ್ತು ವಿವಾಹಿತ ಮಹಿಳೆಗೆ ಪತಿಯಿಂದಲೇ ಧರ್ಮದೇಟು ಬಿದ್ದಿದೆ.
ಚುನಾವಣಾ ವರ್ಷದ ಈ ಸಮಯದಲ್ಲಿ ಸ್ವತಃ ಆಕಾಂಕ್ಷಿಯಾಗಿ ಪುತ್ತೂರು ಕ್ಷೇತ್ರದದ್ಯಾಂತ ಹತ್ತು ಹಲವು ಕಾರ್ಯಕ್ರಮಗಳನ್ನು ಆಯೋಜಿಸಲು ಸಹಕಾರ ನೀಡುತ್ತಿದ್ದ ಕಾಂಗ್ರೆಸ್ ನ ಭಾರತ್ ಜೋಡೊ ಯಾತ್ರೆಯ ಸಂಯೋಜಕಿಗೆ ಮತ್ತು ಸ್ವತಃ ಕಾಂಗ್ರೆಸ್ ಮುಖಂಡರಿಗೂ ಕಾರ್ಯಕರ್ತರನ್ನು ಭೇಟಿಯಾಗಲು ಇರಿಸು ಮುರಿಸು ಎದುರಾಗಿದೆ.