ಎಚ್. ಮಹಮ್ಮದ್ ಆಲಿ ಮತ್ತು ಪುರಸಭೆ ಅಧ್ಯಕ್ಷೆ ಯಾಗಿದ್ದ ಜಯಂತಿ ಬಲ್ನಾಡ್ ರವರ ಪ್ರಯತ್ನದಿಂದ “ಬಿರಮಲೆಗೆ ಟ್ರೀ ಪಾರ್ಕ್”

ಪುತ್ತೂರು : (ಅ.25) ಪುತ್ತೂರು ನಗರದಲ್ಲಿರುವ
ಬಿರಮಲೆ ಬೆಟ್ಟ ಪ್ರವಾಸಿ ತಾಣವಾಗಿ ಅಭಿವೃದ್ಧಿಆಗಬೇಕೆಂದು ಪುತ್ತೂರಿನ ಜನತೆಯ ಬಹುಕಾಲದ ಕನಸಾಗಿತ್ತು ನಿವೃತ್ತ ತಹಶಿಲ್ದಾರರಾದ ಗಾಂಧೀವಾದಿ ಕೋಚಣ್ಣ ರೈ ಯವರು ಸತತವಾಗಿ ಪ್ರಯತ್ನಿಸಿದರೂ ನಿರೀಕ್ಷಿತವಾದ ಅಭಿವೃದ್ಧಿಯಾಗದೇ ಬಿರಮಲೆ ಬೆಟ್ಟ “ಬೆಟ್ಟ” ವಾಗಿಯೇ ಉಳಿಯಿತಲ್ಲದೆ ಪ್ರವಾಸಿ ತಾಣವಾಗಿ ಅಭಿವೃದ್ಧಿ ಹೊಂದಲಿಲ್ಲ

Jayanthi balnad

ಇದರಿಂದ ಬಿರಮಲೆ ಬೆಟ್ಟ ಜನರ ಆಕರ್ಷಣೀಯವಾಗಿ ಉಳಿಯದೇ ಕೇವಲ ಗುಡ್ಡವಾಗಿ ಉಳಿಯುವ ಸಂದರ್ಭದಲ್ಲಿ
ಇದನ್ನು ಪ್ರವಾಸೀ ತಾಣವಾಗಿ ಕಾಣಬೇಕೆಂಬ ಜನರ ಕನಸನ್ನು ಸಾಕಾರ ಗೊಳಿಸಲು ಪ್ರಯತ್ನಿಸಿದವರ ಹೆಸರು ಬೆಳಕಿಗೆ ಬರಲೇ ಇಲ್ಲ.

Jayanthi balnad

Jayanthi balnad

ಪುತ್ತೂರಿನ ಜನಪರ ಪ್ರಾಮಾಣಿಕ ರಾಜಕಾರಣಿ
ಎಚ್. ಮಹಮ್ಮದ್ ಆಲಿಯವರು ಬಿರಮಲೆ ಅಭಿವೃದ್ಧಿಗೆ ತೆರೆಮರೆಯಲ್ಲಿ ಶ್ರಮಿಸಿರುವ ವಿಚಾರ ಪುತ್ತೂರಿನ ಜನತೆಗೆ ತಿಳಿದಿರುವುದಿಲ್ಲ , 1997-98 ನೇ ಇಸವಿಯಲ್ಲಿ ಪುತ್ತೂರು ಪುರಸಭಾ ಉಪಾಧ್ಯಕ್ಷರಾದ ಸಂದರ್ಭದಲ್ಲಿ  ಪುತ್ತೂರಿನ ಸರ್ವಾಂಗೀಣ ಅಭಿವೃದ್ಧಿಗಾಗಿ ಮಾಸ್ಟರ್ ಪ್ಲಾನ್ ತಯಾರಿಸಿ ಆಗಿನ ದಕ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಬಿ. ಎ. ಮೊೃದಿನ್ ರವರಿಗೆ ಸಲ್ಲಿಸಿದಾಗ ಅವರು ADB ಯೋಜನೆಯನ್ನು ಮಂಜೂರುಗೊಳಿಸಿದ್ದರು.

Jayanthi balnad
ಈ ಯೋಜನೆಯಲ್ಲಿ ಬಿರಮಲೆ ಬೆಟ್ಟದ ಸಮಗ್ರ ಅಭಿವೃದ್ಧಿ ಗಾಗಿ ರೂ ಒಂದು ಕೋಟಿಯ ಪ್ರಸ್ತಾವನೆಯನ್ನು ಹೆಚ್. ಮಹಮ್ಮದ್ ಆಲಿ ಯವರು ಸಲ್ಲಿಸಿದ್ದರು .
ಆದರೆ, ADB ನಿಯಮದ ತೊಡಕಿನಿಂದಾಗಿ ಈ ಪ್ರಸ್ತಾವನೆಯನ್ನು ADB ಯೋಜನೆಯಿಂದ ಕೈ ಬಿಡಲಾಯ್ತು , ಬಿರಮಲೆ ಬೆಟ್ಟದಿಂದ ಬಾಲವನಕ್ಕೆ ರೋಪ್ ವೇ ಹಾಗೂ ಪುಟಾಣಿ ರೈಲು ಅಳವಡಿಸುವ ಯೋಜನೆಯು ಈ ಪ್ರಸ್ತಾವನೆಯಲ್ಲಿತ್ತು 2015 ರಲ್ಲಿ ಈ ಪ್ರದೇಶದ ಪುರಸಭಾ ಸದಸ್ಯರಾಗಿದ್ದ ಎಚ್. ಮಹಮ್ಮದ್ ಆಲಿ ಯವರ ವಾರ್ಡ್ ವ್ಯಾಪ್ತಿಗೆ ಬರುವ ಬಿರಮಲೆ ರಸ್ತೆಯನ್ನು ತನ್ನ ಅನುದಾನ ದಲ್ಲಿ ಕಾಂಕ್ರಿಟೀಕರಣದ ಮೂಲಕ ಅಭಿವೃದ್ಧಿ ಪಡಿಸಿದ್ದರು.

Jayanthi balnad
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಸರಕಾರದಲ್ಲಿ ಪರಿಸರ ಮತ್ತು ಅರಣ್ಯ ಖಾತೆ ಸಚಿವರಾಗಿದ್ದ ರಮಾನಾಥ ರೈಯವರು ಬಂಟ್ವಾಳ ಬಿ.ಸಿ.ರೋಡ್ ಬಳಿ ಸುವ್ಯವಸ್ಥಿತವಾದ ಪಾರ್ಕ್ ನಿರ್ಮಾಣ ಹಾಗೂ ಬಂಟ್ವಾಳ ಪ್ರವಾಸಿ ಮಂದಿರದ ಬಳಿ ನೇತ್ರಾವತಿ ನದಿ ತಪ್ಪಲಿನಲ್ಲಿ ಟ್ರೀ ಪಾರ್ಕ್ ರಚಿಸುತ್ತಿರುವುದನ್ನು ಕಣ್ಣಾರೆ ಕಂಡ ಎಚ್.ಮಹಮ್ಮದ್ ಆಲಿಯವರು ಪುತ್ತೂರು ನಗರಸಭಾ ಅಧ್ಯಕ್ಷರಾದ ಜಯಂತಿ ಬಲ್ನಾಡರೊಂದಿಗೆ ಅರಣ್ಯ ಸಚಿವರಾದ ರಮಾನಾಥ ರೈ ಯವರನ್ನು ಭೇಟಿಮಾಡಿ ಬಿರಮಲೆ ಬೆಟ್ಟದಲ್ಲಿ ಪಾರ್ಕ್ ರಚಿಸಲು ಅನುದಾನ ಬಿಡುಗಡೆಗೊಳಿಸಬೇಕೆಂದು ಸತತವಾಗಿ ಒತ್ತಡ ಹಾಕಿದ ಕಾರಣ ರಮಾನಾಥ ರೈಯವರು ಅನುದಾನ ಬಿಡುಗಡೆ ಮಾಡುವ ಭರವಸೆ ನೀಡುವುದರೊಂದಿಗೆ ಟ್ರೀ ಪಾರ್ಕ್ ಯೋಜನೆ ಮಂಜೂರುಗೊಳಿಸಿದ್ದರು.

Jayanthi balnad
ಟ್ರೀ ಪಾರ್ಕ್ ‌ಮಂಜೂರಾತಿಗೊಂಡಾಗ ಬಿರಮಲೆ ಬೆಟ್ಟದಲ್ಲಿರುವ ಸರಕಾರಿ ಸ್ಥಳವು ಅರಣ್ಯ ಇಲಾಖೆಗೆ ಹಸ್ತಾಂತರವಾಗಬೇಕಿತ್ತು
ಅರಣ್ಯ ಇಲಾಖೆಗೆ ಸ್ಥಳ ಹಸ್ತಾಂತರ ಕೆಲಸಕ್ಕೆ ಓಡಾಡಿ ಪ್ರಯತ್ನಿಸಿರುವ ಮಹಮ್ಮದ್ ಆಲಿಯವರು ಟ್ರೀ ಪಾರ್ಕ್ ಮಂಜೂರಾಗಲು ಸಾಕಷ್ಟು ಶ್ರಮ ವಹಿಸಿದ್ದಾರೆ.

Jayanthi balnad
ಮೊನ್ನೆ ಬಿರಮಲೆ ಬೆಟ್ಟದಲ್ಲಿ ಟ್ರೀ ಪಾರ್ಕ್ ಉಧ್ಘಾಟನೆ ಆಗಿದೆ ಟ್ರೀ ಪಾರ್ಕ್ ಮಂಜೂರಾಗಲು ಶ್ರಮ ವಹಿಸಿರುವ ಎಚ್. ಮಹಮ್ಮದ್ ಆಲಿಯವರಿಗೂ ಮಾಜಿ ಅರಣ್ಯ ಸಚಿವರಾದ ಬಿ ರಮಾನಾಥ ರೈ ಯವರಿಗೂ ಪುತ್ತೂರು ಜನತೆಯ ಪರವಾಗಿ ವಿಶೇಷವಾದ ಅಭಿನಂದನೆಯನ್ನು ಸಲ್ಲಿಸುತ್ತೇನೆ ಎಂದು ಜಯಂತಿ ಬಲ್ನಾಡು ಪತ್ರಿಕಾ ಹೇಳಿಕೆ ನೀಡಿದ್ದಾರೆ.

CATEGORIES
Share This

COMMENTS

Wordpress (0)
Disqus (0 )
error: Content is protected !!