ದಲಿತ ಯುವಕನಿಂದ ಹಣ ದೋಚಿದ ಪೋಲೀಸ್. ಆರೋಪಿಗೆ ಬೆಂಗಾವಲಾದರೇ ದ.ಕ ಪೋಲೀಸ್ ವರೀಷ್ಠಾಧಿಕಾರಿ ಮತ್ತು ಮಾಧ್ಯಮ.
ಪುತ್ತೂರು : (ಏ.18) ರಾಜ್ಯಾದ್ಯಂತ ಲಾಕ್ ಡೌನ್ ಸಂದರ್ಭದಲ್ಲಿ ಅಗತ್ಯ ವಸ್ತುಗಳನ್ನು ಪಡೆಯಲು ಹೋಗುವ ಜನಸಾಮಾನ್ಯರಿಗೆ ಪೋಲೀಸರು ಕೆಲವೊಂದು ಸಂದರ್ಭದಲ್ಲಿ ಗೋತ್ತಿದ್ದೋ ಗೊತ್ತಿಲ್ಲದೆಯೋ ಕಿರಿಕಿರಿ ಮಾಡುವುದು ಸಾಮಾನ್ಯ ಆದರೆ ಲಾಕ್ ಡೌನ್ ಸಮಯವನ್ನು ಬಳಸಿಕೊಂಡು ಸುಳ್ಯ ತಾಲೂಕು ವ್ಯಾಪ್ತಿಯ ಬೆಳ್ಳಾರೆ ಪೋಲೀಸ್ ಠಾಣೆಯ ಪೋಲೀಸ್ ಒಬ್ಬರು ಸ್ಥಳೀಯ ದಲಿತ ಯುವಕ ಸುಂದರ ಎಂಬವರು ಅಸ್ಪತ್ರೆಗೆ ಹೋಗಿ ಬರುವ ಸಮಯದಲ್ಲಿ ಯುವಕನನ್ನು ವಿಚಾರಿಸಿ ಅಗತ್ಯ ದಾಖಲೆಗಳನ್ನು ನೀಡಿದರೂ ಸಹ 1000 ರೂಪಾಯಿಯನ್ನು ಫೈನ್ ಹಾಕಿದ್ದಲ್ಲದೇ ದಲಿತ ಯುವಕನ ಬಳಿ ಪದಾರ್ಥ ಮಾಡಲು ಒಂದು ಕೋಳಿಯನ್ನು ನೀಡುವಂತೆ ಒತ್ತಾಯಿಸಿದ್ದರು. ಈ ಬಗ್ಗೆ ಮಾಹಿತಿ ತಿಳಿದ ಪುತ್ತೂರು ಮೂಲದ ಖಾಸಗಿ ಟಿವಿ ಮಾಧ್ಯಮವು ವರದಿ ಮಾಡಿದ್ದು ಇದರಿಂದ ಎಚ್ಚೆತ್ತ ಪೋಲೀಸ್ ಅಧಿಕಾರಿಗಳು ತನ್ನ ಪ್ರಭಾವ ಬಳಸಿಕೊಂಡು ದಕ್ಷಿಣ ಕನ್ನಡ ಜಿಲ್ಲಾ ಪೋಲೀಸ್ ವರೀಷ್ಠಾಧಿಕಾರಿಯವರು ದೂರುದಾರರ ವಿರುಧ್ಧ ಸುಳ್ಳು ದೂರು ಎಂಬ ಪತ್ರಿಕಾ ಪ್ರಕಟಣೆ ನೀಡಿದ್ದರು.

ದೂರುದಾರ ಸುಂದರ
ದಕ್ಷಿಣಕನ್ನಡ ಜಿಲ್ಲಾ ಪೋಲೀಸರು ನಾವು ಜಿಲ್ಲೆಯ ಜನರ ಹಾಗೆ ಬುದ್ಧಿವಂತರು ಅಲ್ಲ ಬದಲಾಗಿ “ಬುದ್ಧಿಓಂತೆ” ಎಂಬಂತೆ ನಡೆದುಕೊಂಡಿದ್ದರೆ. ದೇಶಾದ್ಯಂತ ಆರೋಗ್ಯ ತುರ್ತು ಪರಿಸ್ಥಿತಿಯ ಈ ಸಮಯದಲ್ಲಿ ಮೋಟಾರು ಕಾಯ್ದೆಯ ಅಡಿಯಲ್ಲಿ ವಾಹನವನ್ನು ಮುಟ್ಟುಗೋಲು ಹಾಕಿಕೋಳ್ಳಬಹುದು ಹೊರತು ಫೈನ್ ಹಾಕುವ ಯಾವುದೇ ಕಾನೂನು ಈಗಿನ ಲಾಕ್ ಡೌನ್ ಸಂದರ್ಭದಲ್ಲಿ ಇರುವ ಬಗ್ಗೆ ರಾಜ್ಯ ಪೋಲಿಸ್ ನಿರ್ದೇಶಕರು ಆದೇಶ ಮಾಡಿಲ್ಲ. (ಅದಕ್ಕಾಗಿ ಕಾನೂನು ಇನ್ನು ರೂಪುಗೊಳ್ಳ ಬೇಕಷ್ಟೆ. ಮೋಟಾರು ಕಾಯ್ದೆ ಇಲ್ಲಿ ಅಪ್ಲೈ ಆಗೋದಿಲ್ಲ) ಎಂದು ದಲಿತ ಮುಖಂಡರು ಪೋಲಿಸ್ ಇಲಾಖೆಗೆ ಪ್ರಶ್ನೆ ಮಾಡಿದ್ದಾರೆ. ಇದಲ್ಲೆದರ ನಡುವೆ ಸ್ಥಳೀಯ ಪೋಲೀಸ್ ಅಧಿಕಾರಿಗಳು ದಲಿತ ಯುವಕನ ಬಳಿ ರಾಜಿ ಪಂಚಾಯಿತಿಯಲ್ಲಿ ಮುಗಿಸಲು ಪೋಲೀಸ್ ಠಾಣೆಗೆ ಬರುವಂತೆ ಒತ್ತಾಯಿಸಲು ಅರೋಪಿ ಬಾಲಕೃಷ್ಣ ರ ಜೊತೆಗೆ ಅನ್ಯಾಯಕ್ಕೆ ಒಳಗಾದ ಸುಂದರ ಎಂಬವರ ಮನೆಗೆ ತೆರಲಿದ್ದು ಪೋಲಿಸ್ ಇಲಾಖೆಯ ದೌರ್ಬಲ್ಯವನ್ನು ಎತ್ತಿ ತೋರಿಸಿದೆ. ದೂರು ನೀಡಿದರೆ ಪ್ರಥಮ ವರ್ತಮಾನ ವರದಿ ದಾಖಲು ಮಾಡುವುದು ಪೋಲಿಸ್ ಕರ್ತವ್ಯ. ಅವನ ತನಿಖೆ ಮಾಡುವುದು ಮತ್ತೆ. ಅದು ಇಲಾಖೆಯವರ ವಿರುದ್ದವೇ ಆದರೂ ‘ಎಫ್ ಐ ಅರ್’ ದಾಖಲಾಗಲೇಬೇಕು.

ಆರೋಪಿ ಪೋಲೀಸ್ ಅಧಿಕಾರಿ ಬಾಲಕೃಷ್ಣ
ಅದು ಬಿಟ್ಟು ಇಲಾಖೇಯೇ ತಪ್ಪಿದಸ್ಥರ ಪರವಾಗಿ ನಿಂತರೆ ಇಲಾಖೆಯ ಮೇಲೆ ಜನಸಾಮಾನ್ಯನಿಗೆ ಇರುವ ನಂಬಿಕೆಗೆ ಭಂಗವಾಗುವುದರಲ್ಲಿ ಸಂಶಯವಿಲ್ಲ. ಅಸಹಾಯಕ ದಲಿತನ ಪರವಾಗಿ ನಿಲ್ಲಬೇಕಾದ ಇಲಾಖೆಯೇ ತಿರುಗಿಬಿದ್ದರೆ ಇವರನ್ನು ರಕ್ಷಣೆ ಮಾಡುವವರು ಯಾರು ಎಂಬ ಪ್ರಶ್ನೆ ಜನರ ಮನಸ್ಸಿನಲ್ಲಿ ಮೂಡಿದೆ. ಸಮಾಜದಲ್ಲಿ ನಡೆಯುವ ಅನ್ಯಾಯಗಳ ವಿರುದ್ದ ಧ್ವನಿಯಾಗಬೇಕಾದ ಮಾಧ್ಯಮವೂ ತಪ್ಪಿತಸ್ಥರ ಪರವಾಗಿ ಪುಂಗಿ ಊದಲು ಪ್ರಾರಂಭಿಸಿದರೆ ಪತ್ರಿಕಾ ಧರ್ಮಕ್ಕೆ ನ್ಯಾಯ ಒದಗಿಸುವವರು ಯಾರು ಎಂದು ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.