ವಾಹನ ಚಾಲಕರು, ಬಿಪಿಎಲ್  ಕಾರ್ಡು ಹೊಂದಿರುವರನ್ನು  ಭಯೋತ್ಪಾದಕರಂತೆ ನಡೆಸಿಕೊಳ್ಳುವ ಸರಕಾರದ ವಿರುದ್ಧ ಹೇಮನಾಥ್ ಶೆಟ್ಟಿ ಕಿಡಿ !

ಪುತ್ತೂರು : ರಾಜ್ಯದಲ್ಲಿ ವಾಹನ‌ ಸವಾರರು ನಿರ್ಭಯವಾಗಿ ವಾಹನ ಚಲಾಯಿಸಲಾಗದ ವಾತಾವರಣ ಸೃಷ್ಟಿಯಾಗಿದೆ. ಇವರನ್ನು ಹಿಂಸಿಸುವುದು ಶಿಕ್ಷಿಸುವುದೇ ಪೋಲೀಸರ ಕರ್ತವ್ಯವಾಗಿದೆ ಎನ್ನುವ ಮಟ್ಟಕ್ಕೆ ಮುಟ್ಟಿದೆ. ವಾಹನ ಚಲಾಯಿಸುವವರನ್ನು ತಡೆದು ನಿಲ್ಲಿಸುವ ಪೋಲೀಸರು ಎಲ್ಲಾ ದಾಖಲೆಗಳು ಸರಿಯಿದ್ದರೂ ಯಾವುದಾದರೂ ಒಂದು ಸುಳ್ಳು ಕಾರಣದಿಂದಲಾದರೂ ಕೇಸ್ ದಾಖಲಿಸುತ್ತಾರೆ. ಅದಲ್ಲದೆ (ಪ್ರಥಮ ಬಾರಿಗೆ) ದಾಖಲೆ ಸರಿಯಿಲ್ಲದಿದ್ದರೂ ದಂಡ ಕಟ್ಟಿಸಿಕೊಂಡರೂ ಬಿಡದೆ. DL ರದ್ದು, ಪರ್ಮಿಟ್ ರದ್ದು ಮಾಡಲು RTO ಗೆ ಬರಿತಾರೆ. ಅದರಿಂದಾಗಿ ಜನರಿಗೆ ತುಂಬಾ ತೊಂದರೆಯಾಗಿದೆ. ಕೇಳಿದರೆ ಟಾರ್ಗೆಟ್ ಅಂತಾರೆ. ಜನರನ್ನು ಶಿಕ್ಷಿಸಲು/ ದಂಡಿಸಲೂ ಟಾರ್ಗೆಟ್ ನೀಡುತ್ತಿರುವುದು ಸರಿಯೇ ಸಮಾಜ ಎತ್ತಕಡೆ ಸಾಗುತ್ತಿದೆ. ಇದನ್ನು ಸರಕಾರ ಗಂಭೀರವಾಗಿ ಪರಿಗಣಿಸಬೇಕು , ಜನರ ಮೇಲೆ ಮಾನವೀಯತೆ ತೋರಬೇಕು. ಜನರನ್ನು ಬದುಕಲು ಬಿಡಿ ಎಂದು ಪತ್ರಿಕಾಗೋಷ್ಟಿಯಲ್ಲಿ ಪುತ್ತೂರ ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಕಾವು ಹೇಮನಾಥ್ ಶೆಟ್ಟಿಯವರು ಹೇಳಿದರು.
ಇದೀಗ ಬಿಪಿಎಲ್ ಪಡಿತರ ಚೀಟಿಹೊಂದಿದವರು ಅರ್ಹರಲ್ಲದವರು ಅದನ್ನು ಹಿಂದಿರುಗಿಸಿ ಇಲ್ಲವಾದರೆ ನಿಮ್ಮ ವಿರುದ್ದ ಕ್ರಮಿನಲ್ ಕೇಸ್ ದಾಖಲು ಮಾಡ್ತೇವೆ. ಮೂರು ತಿಂಗಳು ಜೈಲುವಾಸ ಅನುಭವಿಸಬೇಕಾಗುತ್ತದೆ ಎಂದು ಹೇಳ್ತಾರೆ. ಬಿಜೆಪಿ ನಾಯಕರು ಸ್ವಲ್ಪ ಗಮನಿಸಬೇಕು ಅಂದು ಗ್ಯಾಸ್ ಸಬ್ಸಿಡಿ ಬಿಡಿ ಎಂದು ಕರೆ ಕೊಟ್ಟಿರಿ,( ಹೊಡಿರಿ ಬಡಿಯಿರಿ ಎಂದರೆ ಕೂಡಲೇ ಕಾರ್ಯಪ್ರವೃತ್ತರಾಗುವ ಎಷ್ಟು ಬಿಜೆಪಿ ಕಾರ್ಯಕರ್ತರು ನಿಮಗೆ ಕರೆಗೆ‌ ಸ್ಪಂದಿಸಿದ್ದಾರೆ ಸ್ವಲ್ಪ ಅವಲೋಕನ ಮಾಡಿ) ಇಂದು ಬಿಪಿಎಲ್ ಬಿಡಿ ಅಂತೀರಿ ನಿಮಗೆ ಬಡವರು‌ ನೆಮ್ಮದಿಯಿಂದ ಬದುಕುವುದು ಇಷ್ಟವಿಲ್ಲವೇ. ಬಡವ ನೂರು ಇನ್ನೂರು ಅಂತ ಸರಕಾರದಿಂದ ಸವಲತ್ತು ಪಡೆದು ಕೊಂಡರೆ ನಿಮಗೇನು ಹೊಟ್ಟೆ ಉರಿ..?

Hemanath shetty
ನಿಮಗೆ ದೇಶದ ಬಗ್ಗೆ ಕಾಳಜಿ ಇದ್ದರೆ ಶಾಸಕರು ಸಂಸದರು ನಿಮಗಿರುವ ಸರಕಾರಿ ಸವಲತ್ತುಗಳನ್ನು ಬಿಡಿ. ನಿವೃತ್ತಿ ಬಳಿಕವೂ ,ಸಾಯುವವರೆಗೂ ನಿಮಗೆ ಸವಲತ್ತು ಬೇಕಲ್ವಾ ನಿಮಗೆ ಎಂದು ಅವರು ಪ್ರಶ್ನೆ ಮಾಡಿದರು.
ಮೊದಲು ನೀವು ಸರಕಾರಿ ಸವಲತ್ತು ಬಿಡಿ, ಆಮೇಲೆ ನಿಮ್ಮ ಪಕ್ಷದ ಬೆಂಬಲಿಗರಲ್ಲಿ ಬಿಡಿಸಿ ಆಮೇಲೆ ಸಾರ್ವಜನಿಕರಿಗೆ ಹೇಳಿ ಎಂದರು.

ಸೂಲಿಬೆಲೆಯ ಪ್ರಥಮ ಜೀವಮಾನದ ಸತ್ಯದಿಂದ ದೇಶದ್ರೋಹಿಯಾದರು. ವ್ಯಂಗ್ಯ
ಬಾಡಿಗೆ ಭಾಷಣಕಾರ ಸೂಲಿಬೆಲೆ (ಜಾಗೋ ಭಾರತ್ ಕಾರ್ಯಕ್ರಮದ ರುವಾರಿ) ಹೇಳಿದ ಎಲ್ಲಾ ಸುಳ್ಳುಗಳು ಬಿಜೆಪಿಗೆ ಲಾಭ ಮಾಡಿಕೊಟ್ಟಿದೆ. ಅವರಿಗೆ ಖುಷಿ ನೀಡಿದೆ.ಆಗ ದೇಶಪ್ರೇಮಿ ಯಾಗಿದ್ದರು.
ಆದರೆ ಬಾಡಿಗೆಯಿಲ್ಲದೆ ಅಸಲಿಯಾಗಿ ಹೇಳಿದ ಒಂದು ಸತ್ಯ ಅವನನ್ನು ದೇಶದ್ರೋಹಿಯಾಗಿ ಮಾಡಿತು.
ಈಗಲಾದರೂ ವಾಸ್ತವ ಅರಿವಾಯ್ತಲ್ಲ.
ಪುತ್ತೂರು ನಗರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಇವರೊಂದಿಗೆ ಪುರಸಭೆ ಮಾಜಿ ಉಪಾಧ್ಯಕ್ಷ ಲ್ಯಾನ್ಸಿ ಮಸ್ಕರೇನಸ್, ನಗರಸಭೆ  ಮಾಜಿ ಸದಸ್ಯ ಮುಖೇಶ್ ಕೆಮ್ಮಿಂಜೆ, ಜಿಲ್ಲಾ ಕಾರ್ಮಿಕ ಘಟಕದ ಉಪಾಧ್ಯಕ್ಷ ಸುಭಾಸ್ ರೈ ಬೆಳ್ಳಿಪ್ಪಾಡಿ, ಸಂಘಟನಾ ಕಾರ್ಯದರ್ಶಿ ದಾಮೋದರ್ ಭಂಡಾರ್ ಕರ್ ಉಪಸ್ಥಿತರಿದ್ದರು.

CATEGORIES
Share This

COMMENTS

Wordpress (0)
Disqus (0 )
error: Content is protected !!