ಅಕ್ರಮ ಪ್ರವೇಶ ಮಹಿಳೆಯರಿಂದ ಸುಂದರ ಪಾಟಾಜೆ’ಗೆ ಧರ್ಮದೇಟು

ಪುತ್ತೂರು : (ಫೆ.07) ದಲಿತ ಸಂಘಟನೆಯ ರಾಜ್ಯಾಧ್ಯಕ್ಷ ಎಂದು ಕೋಡಿಂಬಾಡಿಯ ಕಜೆ ಎಂಬಲ್ಲಿ ತನ್ನ ಸಂಗಡಿಗರೊಂದಿಗೆ ಮನೆಯೊಂದಕ್ಕೆ ಅಕ್ರಮವಾಗಿ ಪ್ರವೇಶಿಸಿದ ಸುಳ್ಯ ಮೂಲದ ಪಾಟಾಜೆ ನಿವಾಸಿ ಸ್ವಯಂಗೋಷಿತ ದಲಿತ ಮುಖಂಡ ಸುಂದರ ಪಾಟಾಜೆ ಮತ್ತು ಸಂಗಡಿಗ ಪರಮೇಶ್ವರ ಎಂಬರಿಗೆ ಮಹಿಳೆಯರು ಧರ್ಮದೇಟು ನೀಡಿದ ಬಗ್ಗೆ ಪ್ರಕರಣ ಬೆಳಕಿಗೆ ಬಂದಿದೆ.
ಕೋಡಿಂಬಾಡಿಯ ಕಜೆ ನಿವಾಸಿಗಳಾದ ಗಿರಿಯಪ್ಷ ಮತ್ತು ಚೋಮ ಎಂಬ ಸಹೋದರರ ಮಧ್ಯೆ ದಶಕಗಳಿಂದ ಜಾಗದ ತಕರಾರು ಇದ್ದು ಇತ್ತೀಚೆಗೆ ಸ್ಥಳೀಯ ಗ್ರಾಮ ಪಂಚಾಯಿತಿಯ ಅಧ್ಯಕ್ಷರು, ಉಪಾಧ್ಯಕ್ಷರು ಮತ್ತು ಇತರೇ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ಮಧ್ಯಸ್ಥಿಕೆಯಲ್ಲಿ ಜಾಗದ ತಕರಾರು ಎರಡು ಕುಟುಂಬದ ಸದಸ್ಯರ ಮುಖಾಮುಖಿ ಮಾತುಕತೆಯಲ್ಲಿ ಸರಿಪಡಿಸಲಾಗಿದ್ದು ಈ ಹಿಂದಿನ ಪ್ರಕರಣಗಳು ಕೂಡ ಸುಖಾಂತ್ಯಗೊಂಡಿತ್ತು.

ದಲಿತ ಮುಖಂಡ ಸುಂದರ ಪಾಟಾಜೆ

ಆದರೆ, ಫೆಬ್ರವರಿ 06 ರಂದು ಸೋಮವಾರ ತಾನು ದಲಿತ ಸಂಘಟನೆಯ ರಾಜ್ಯಾಧ್ಯಕ್ಷ ಎಂದು ಚೋಮ ಎಂಬವರಿಂದ ಸುಮಾರು 20ಸಾವಿರ ಹಣ ಪಡೆದು ತನ್ನ ಸಂಗಡಿಗ ಪರಮೇಶ್ವರ ಎಂಬವರ ಜತೆ ಪುತ್ತೂರಿನ ಜಿಮ್ ಒಂದರಲ್ಲಿ ವ್ಯಾಯಾಮ ಮಾಡಲು ಬರುವ ಅವಿನಾಶ್ ಶಾಂತಿನಗರ ಮತ್ತು ಇತರ ಮೂವರು ಯುವಕರನ್ನು ತಲಾ 1000 ರೂಪಾಯಿಗೆ ನಿಗದಿಪಡಿಸಿ 2 ಜನಕ್ಕೆ ಬಾಡೂಟ ದ ಆಸೆ ತೋರಿಸಿ ಜತೆಗೆ ಹೀಟಾಚಿ ಯಂತ್ರವನ್ನು ಗೊತ್ತುಪಡಿಸಿ ಗಿರಿಯಪ್ಪ ಎಂಬವರ ಮನೆಗೆ ಅಕ್ರಮ ಪ್ರವೇಶ ಮಾಡಿ ತಾವು ಪುತ್ತೂರು ಉಪವಿಭಾಗಧಿಕಾರಿಗಳ ಅದೇಶದ ಮೇರೆಗೆ ತಮ್ಮ ಮನೆಕಟ್ಟಡ ಕೆಡವಲು ಬಂದಿರುವುದಾಗಿ ಸುಳ್ಳು ಹೇಳಿದಲ್ಲದೇ ಗಿರಿಯಪ್ಪ ಎಂಬವರ ಮನೆಯಲ್ಲಿದ್ದ ಹೆಣ್ಣು ಮಕ್ಕಳು/ ಮಹಿಳೆಯರ ಮೇಲೆ ದೌರ್ಜನ್ಯ ಮಾಡಿ ಅನಾಗರಿಕರಂತೆ ವರ್ತಿಸಿದ ಸುಂದರ ಪಾಟಾಜೆ ಮತ್ತು ಪರಮೇಶ್ವರ ಎಂಬುವರಿಗೆ ಮನೆಯಲ್ಲಿದ್ದ ಮಹಿಳೆಯರು ಧರ್ಮದೇಟು ನೀಡಿದ್ದು ಪ್ರಕರಣ ಸ್ಥಳೀಯವಾಗಿ ಗೊತ್ತಾಗುತ್ತಿದ್ದಂತೆ ದಲಿತ ಮುಖಂಡರ ಸೋಗಿನಲ್ಲಿದ್ದ ಸುಂದರ ಪಾಟಾಜೆ ಮತ್ತು ಸಂಗಡಿಗರು ಸ್ಥಳದಿಂದ ಓಡಿ ಹೋಗಿದ್ದಾರೆ ಎನ್ನಲಾಗಿದೆ.

Amrutha

Advertisement

ಈ ಬಗ್ಗೆ ಸುಂದರ ಪಾಟಾಜೆ ಮತ್ತು ಪರಮೇಶ್ವರ ಎಂಬವರ ಮೇಲೆ ಪುತ್ತೂರು ನಗರ ಠಾಣೆಯಲ್ಲಿ ಗಿರಿಯಪ್ಪ ಮತ್ತು ಅವರ ಮಗಳ ಹೇಳಿಕೆಯ ಆಧಾರದಲ್ಲಿ ಲೈಂಗಿಕ ದೌರ್ಜನ್ಯ, ಜಾತಿನಿಂದನೆ, ಅಕ್ರಮ ಪ್ರವೇಶದ ಬಗ್ಗೆ ಪ್ರಕರಣ ದಾಖಲಾಗಿದೆ.

ಸುಂದರ ಅವರ ಸಂಗಡಿಗ ಪರಮೇಶ್ವರ

ಸುಂದರ ಪಾಟಾಜೆ ಸುಳ್ಯ ತಾಲ್ಲೂಕಿನಾದ್ಯಂತ ದಲಿತ ಮತ್ತು ಇತರ ಬಡವರಿಂದ ಕೆಲಸ ಮಾಡಿಸಿಕೊಡುವ ನೆಪದಲ್ಲಿ ಹಣಪಡೆದು ವಂಚಿಸಿರುವ, ಬ್ಲಾಕ್ಮೇಲ್ ಮಾಡಿ ಹಣ ವಸೂಲಿ ಇತರೆ ಹಲವಾರು ಪ್ರಕರಣಗಳು ಬೆಳಕಿಗೆ ಬಂದಿರುವುದಲ್ಲದೇ, ಈ ಹಿಂದೆ ಕಾಸರಗೋಡಿನ ಮಹಿಳೆಯೊಬ್ಬರಿಂದ ಪುತ್ತೂರಿನ ವಕೀಲರೊರ್ವರ ಹೆಸರಿನಲ್ಲಿ ಸುಮಾರು 45 ಸಾವಿರ ಹಣ ವಸೂಲಿ ಮಾಡಿದ್ದನು. ಸುಳ್ಯದ ಕೆಲವೊಂದು ದಕ್ಷ ಪೊಲೀಸ್ ಅಧಿಕಾರಿಗಳು ಕೂಡ ಈತನ ಅಕ್ರಮದಲ್ಲಿ ಪಾಲು ಪಡೆಯುತ್ತಿದ್ದದ್ದು ಗುಟ್ಟಾಗಿ ಉಳಿದಿಲ್ಲ. ಸ್ವತಃ ಸುಂದರ ಪಾಟಾಜೆಯ ಮಗ ಸುಬ್ರಹ್ಮಣ್ಯ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಅತ್ಯಾಚಾರ ಪ್ರಕರಣವೊಂದರಲ್ಲಿ ಪೊಲೀಸರು ಜೈಲ್ಲಿಗಟ್ಟಿದ್ದು ಸ್ವಸ್ಥ ಸಮಾಜವನ್ನು ನಿರ್ಮಾಣ ಮಾಡಬೇಕಿದ್ದ ದಲಿತಪರ ಸಂಘಟನೆಗಳು ಅಕ್ರಮ/ಅನಾಚಾರದಲ್ಲಿ ಭಾಗಿಯಾಗುತ್ತಿರುವುದು ಸಂಘಟನೆಯ ಸದಸ್ಯರು ಮತ್ತು ಮುಖಂಡರಿಗೆ ಇರಿಸು- ಮುರಿಸು ಉಂಟಾಗಿದೆ ಎನ್ನಲಾಗಿದೆ.

CATEGORIES
TAGS
Share This

COMMENTS

Wordpress (0)
Disqus ( )
error: Content is protected !!