ಭಾರತ ಐಕ್ಯತಾ ಯಾತ್ರೆ ಚಿತ್ರದುರ್ಗಕ್ಕೆ ಕಾಲಿಡಲು ದಿನಗಣನೆ ಆರಂಭ.

ಚಿತ್ರದುರ್ಗ : (ಅ.04) ರಾಹುಲ್ ಗಾಂಧಿ ಕೈಗೊಂಡಿರುವ ಭಾರತ ಐಕ್ಯತೆ ಯಾತ್ರೆ ಕಲ್ಲಿನಕೋಟೆ ಚಿತ್ರದುರ್ಗಕ್ಕೆ ಕಾಲಿಡಲು ದಿನಗಣನೆ ಆರಂಭವಾಗಿದ್ದು, ಕೋಟೆನಾಡಿನ ಜನರು ಕಾತರದಿಂದ ಕಾಯುತ್ತಿದ್ದಾರೆ.

H anjaneya

ಕರ್ನಾಟಕದಲ್ಲಿ ಯಾತ್ರೆ ಪ್ರಾರಂಭವಾದ ದಿನದಿಂದಲೂ ಜನರಲ್ಲಿ ಹೆಚ್ಚಿನ ಉತ್ಸಾಹ ಕಂಡು‌ಬರುತ್ತಿದ್ದು, ಐಕ್ಯತಾ ಯಾತ್ರೆಯ ಪೂರ್ವ ಸಿದ್ಧತೆ ಸಂಬಂಧ ಚಿತ್ರದುರ್ಗ ಜಿಲ್ಲೆಯ ಹಿರಿಯೂರು, ಚಳ್ಳಕೆರೆ, ಹಾಗೂ ಮೊಳಕಾಲ್ಮುರು ತಾಲೂಕಿನಲ್ಲಿ ಹಮ್ಮಿಕೊಂಡಿದ್ದ ಪೂರ್ವಭಾವಿ ಸಭೆ ಹಾಗೂ ಸ್ಥಳ ವೀಕ್ಷಣೆ ಕಾರ್ಯಕ್ರಮದಲ್ಲಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಉಪಾಧ್ಯಕ್ಷರು ಹಾಗೂ ಮಾಜಿ ಸಚಿವರಾದ ಶ್ರೀ ಹೆಚ್. ಆಂಜನೇಯ ಭಾಗವಹಿಸಿ, ಪಾದಯಾತ್ರೆಯನ್ನು ಯಶಸ್ವಿಗೊಳಿಸಲು ಅಗತ್ಯ ಸೂಚನೆ ಸಲಹೆಗಳನ್ನು ನೀಡಿದರು.

H anjaneya

ಈ ಸಂದರ್ಭದಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಶ್ರೀ ರಾಮಲಿಂಗಾರೆಡ್ಡಿ, ಸಂಸದರಾದ ಶ್ರೀ ಡಿ. ಕೆ. ಸುರೇಶ್, ಶಾಸಕರಾದ ಶ್ರೀ ಟಿ. ರಘುಮೂರ್ತಿ, ಮಾಜಿ ಸಂಸದರಾದ ಶ್ರೀ ಬಿ. ಎನ್. ಚಂದ್ರಪ್ಪ, ಮಾಜಿ ಸಚಿವರಾದ ಶ್ರೀ ಡಿ. ಸುಧಾಕರ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಶ್ರೀ ತಾಜ್ ಪೀರ್, ಜಿಲ್ಲಾ ಕಾಂಗ್ರೆಸ್ ಕಾರ್ಯಾಧ್ಯಕ್ಷರಾದ ಶ್ರೀ ಹಾಲೇಶ್, ಮಾಜಿ ವಿಧಾನ ಪರಿಷತ್ ಸದಸ್ಯರಾದ ಶ್ರೀ ಎಂ. ಸಿ. ವೇಣುಗೋಪಾಲ್, ಮಾಜಿ ಶಾಸಕರಾದ ಶ್ರೀ ಬಿ. ಜಿ. ಗೋವಿಂದಪ್ಪ , ಶ್ರೀ.ಎಸ್. ತಿಪ್ಪೇಸ್ವಾಮಿ, ಅಸಂಘಟಿತ ಕಾರ್ಮಿಕರ ಘಟಕದ ಅಧ್ಯಕ್ಷರಾದ ಶ್ರೀ ಜಿ. ಎಸ್. ಮಂಜುನಾಥ್ , ಮುಖಂಡರಾದ ಮುಖಂಡರಾದ ಶ್ರೀ ಯೋಗೇಶ್ ಬಾಬು , ಶ್ರೀ ರಾಕ್ ಮಂಜುನಾಥ್ ಸೇರಿದಂತೆ ಪಕ್ಷದ ಅನೇಕ ಮುಖಂಡರು, ಕಾರ್ಯಕರ್ತರು ಉಪಸ್ಥಿತರಿದ್ದರು.

CATEGORIES
TAGS
Share This

COMMENTS

Wordpress (0)
Disqus ( )
error: Content is protected !!