ಸಹಕಾರ ಇಲಾಖೆಯಿಂದ ಮೈಸೂರಿನಲ್ಲಿ ನೂತನ ಕ್ಯಾಂಟೀನ್ ಲೋಕಾರ್ಪಣೆ

(ಅ.04) : ಮೈಸೂರು ಬಂಡಿಹಾಳದ ಎಪಿಎಂಸಿ ಆವರಣದಲ್ಲಿ ಸಹಕಾರ ಇಲಾಖೆಯಿಂದ ನೂತನವಾಗಿ ಆರಂಭಿಸಿರುವ ಶ್ರೀ ಅನ್ನಪೂರ್ಣ ಕ್ಯಾಂಟೀನ್ ನನ್ನು ಕರ್ನಾಟಕ ಸರ್ಕಾರದ ಸಹಕಾರ ಸಚಿವರು ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಮಂತ್ರಿಗಳಾದ ಎಸ್.ಟಿ ಸೋಮಶೇಖರ್ ಲೋಕಾರ್ಪಣೆಗೊಳಿಸಿದರು.

ಶ್ರೀ ಅನ್ನಪೂರ್ಣ ಕ್ಯಾಂಟೀನ್ ನಲ್ಲಿ ದಸರಾವರೆಗೆ ಉಚಿತ ಊಟ ನೀಡಲಾಗುತ್ತದೆ. ನಂತರದ ದಿನಗಳಲ್ಲಿ ಹತ್ತು ರೂಪಾಯಿಗೆ ಊಟ ನೀಡಲಾಗುತ್ತದೆ.

ದಾನಿಗಳ ನೆರವಿನಿಂದ ರೈತ ಬಾಂಧವರಿಗೆ ರುಚಿ ಮತ್ತು ಶುಚಿಯಾದ ಊಟ ನೀಡುವ ಕೆಲಸವನ್ನು ವರ್ತಕರು ಮಾಡುತ್ತಿದ್ದಾರೆ. ಸಹಕಾರ ಕ್ಷೇತ್ರದಿಂದ ಈ ಕ್ಯಾಂಟೀನ್ ಆರಂಭಿಸಲಾಗಿದೆ. ದಾನಿಗಳು ಮುಂದೆ ಬಂದರೆ ರಾಜ್ಯದ ವಿವಿಧೆಡೆಯ ಎಪಿಎಂಸಿಗಳಲ್ಲಿ ಕೂಡ ಕ್ಯಾಂಟೀನ್ ತೆರೆಯುವ ಚಿಂತನೆ ಮಾಡಲಾಗುವುದು ಎಂದು ಸಚಿವರು ಈ ಸಂದರ್ಭ ಹೇಳಿದರು.

ಈ ವೇಳೆ ಸ್ಥಳೀಯ ಶಾಸಕರಾದ ನಿರಂಜನ್ ಕುಮಾರ್, ಜಿ.ಟಿ.ದೇವೇಗೌಡ, ಮೂಡಾ ಮಾಜಿ ಅಧ್ಯಕ್ಷರಾದ ರಾಜೀವ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

CATEGORIES
TAGS
Share This

COMMENTS

Wordpress (0)
Disqus ( )
error: Content is protected !!