ದಲಿತ ಸಂಸದೆಯ ಮೇಲೆ ಸಂಸತ್ತಿನಲ್ಲೇ ಹಲ್ಲೆ ನಡೆಸಿದ ಬಿಜೆಪಿ ಸಂಸದೆ ! ಸ್ಪೀಕರ್ ಮೌನ

ನವದೆಹಲಿ : ( ಮಾ. 03) ದಲಿತ ಸಂಸದೆ ರಮ್ಯಾ ಹರಿದಾಸ್ ಮೇಲೆ ಸದನದಲ್ಲಿ ಬಿಜೆಪಿ ಸಂಸದೆ ಹಲ್ಲೆ ನಡೆಸಿದ್ದು ಈ ಕುರಿತು ಸ್ಪೀಕರ್ ಓಂ ಬಿರ್ಲಾ ಅವರಿಗೆ ಕಾಂಗ್ರೆಸ್ ಸಂಸದೆ ದೂರು ನೀಡಿದ್ದಾರೆ. ಆದರೆ ಸ್ಪೀಕರ್ ಕ್ರಮದ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ.

Ramya haridas

ಲೋಕಸಭೆಯಲ್ಲಿ ದೆಹಲಿ ಹಿಂಸಾಚಾರದ ಕುರಿತು ತೀವ್ರ ಪ್ರತಿಭಟನೆ ನಡೆಸಿದ್ದ ಪ್ರತಿಪಕ್ಷಗಳು ಗೃಹಸಚಿವ ಅಮಿತ್‌ಶಾ ಅವರ ರಾಜೀನಾಮೆಗೆ ಆಗ್ರಹಿಸಿದ್ದವು. ಈ ಸಂದರ್ಭ ಬಿಜೆಪಿ ಮತ್ತು ಕಾಂಗ್ರೆಸ್ ಸದಸ್ಯರ ನಡುವೆ ಪರಸ್ಪರ ತಳ್ಳಾಟ ನಡೆದಿತ್ತು. ಈ ವೇಳೆ ರಾಜಸ್ಥಾನದ ಬಿಜೆಪಿ ಸಂಸದೆ ಜಸ್‌ಕೌರ್ ಮೀನಾ –ಕೇರಳದ ಸಂಸದೆ ರಮ್ಯಾ ಹರಿದಾಸ್ ಮೇಲೆ ಹಲ್ಲೆ ನಡೆಸಿದ್ದಾರೆ.

ಈ ಬಗ್ಗೆ ತಕ್ಷಣ ಕ್ರಮವನ್ನು ತೆಗೆದುಕೊಳ್ಳುವಂತೆ ರಮ್ಯಾ ಸ್ಪೀಕರ್ ಗೆ ಕೋರಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿದ ಸಂಸದೆ ರಮ್ಯಾ, ನಾನು ದಲಿತ ಸಮುದಾಯದವಳು ಮತ್ತು ಮಹಿಳೆ ಎಂಬ ಕಾರಣಕ್ಕೆ ಈ ಕೃತ್ಯ ನಡೆದಿದೆ ಎಂದು ಹೇಳಿದ್ದಾರೆ.

CATEGORIES
TAGS
Share This

COMMENTS

Wordpress (0)
Disqus ( )
error: Content is protected !!