130 ಕೋಟಿ ಭಾರತೀಯರೂ ಹಿಂದೂಗಳೇ ಎಂದು ಹೇಳಿಕೆ ಆರ್ ಎಸ್ಎಸ್ ಮುಖ್ಯಸ್ಥ ಭಾಗವತ್ ವಿರುದ್ಧ ಕೇಸ್.

ಹೈದರಾಬಾದ್ : (ಡಿ.30) ಇತ್ತೀಚಿಗೆ ಹೈದರಾಬಾದಿನಲ್ಲಿ ನಡೆದ ಆರ್‌ಎಸ್ಎಸ್ ನ ಮೂರು ದಿನಗಳ ‘ವಿಜಯ್ ಸಂಕಲ್ಪ ಸಭಾ’ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದ ಅರ್.ಎಸ್.ಎಸ್. ಮುಖ್ಯಸ್ಥ ಮೋಹನ್ ಭಾಗವತ್, ಭಾರತ ಮಾತೆಯ 130 ಕೋಟಿ ಪುತ್ರರು ಯಾವುದೇ ಭಾಷೆಯನ್ನು ಬೇಕಾದರೆ ಮಾತನಾಡಲಿ, ಯಾವುದೇ ಧರ್ಮ ಆಚರಣೆಯನ್ನು ಅನುಸರಿಸಲಿ. ಇವರೆಲ್ಲ ಹಿಂದೂ ಧರ್ಮವನ್ನು ಆಚರಿಸದೇ ಇದ್ದರೂ ಸಂಘದ ಪಾಲಿಗೆ ಇವರೆಲ್ಲರೂ ಹಿಂದೂಗಳೇ ಎಂದು ಹೇಳಿದ್ದರು.

Mohan bhagavath
ಭಾರತವು ಸಾಂಪ್ರದಾಯಿಕವಾಗಿ ಹಿಂದುತ್ವವಾಗಿದೆ. ಭಾರತದ ಮೋಕ್ಷವು ರಾಜಕೀಯ ಮತ್ತು ರಾಜಕೀಯ ನಾಯಕರಿಂದ ಸಾಧ್ಯವಿಲ್ಲ. ಆದರೆ ಉತ್ತಮ ಸಮಾಜ ಮತ್ತು ಹಿಂದುತ್ವದಿಂದ ಸಾಧ್ಯವಿದೆ ಎಂದು ಹೇಳಿದ್ದರು. ಈ ಸಂಬಂಧ ಹೈದರಬಾದ್ ನ ಎಲ್.ಬಿ ನಗರ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಿಸಿರುವ ಕಾಂಗ್ರೆಸ್ ನಾಯಕ ವಿ. ಹನುಮಂತ ರಾವ್, ಮೋಹನ್ ಭಾಗವತ್ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ

CATEGORIES
TAGS
Share This

COMMENTS

Wordpress (0)
Disqus ( )
error: Content is protected !!