ಮಂಗಳೂರಿಗೆ ಅಸಾದುದ್ದೀನ್ ಓವೈಸಿ ❗

 

ಮಂಗಳೂರು : (ಡಿ.30) ಮಂಗಳೂರು ಅಂದಾಕ್ಷಣ ತಟ್ಟಣೆ ಹೊಳೆಯುವುದು ಕಡಲನಗರಿ. ಈ ಸುಂದರ ನಗರದಲ್ಲಿ ಯಾವೂದು ಕೂಡ ಇಲ್ಲ ಅನ್ನೋ ಮಾತೇ ಇಲ್ಲ. ಹಾಗಾಗಿ ಈ ಊರಿನಲ್ಲಿ ಎಲ್ಲಾ ಧರ್ಮದವರು ಬಂದು ನೆಲೆಸ್ತಾರೆ. ಇಲ್ಲಿ ಹೆಚ್ಚಾಗಿ ಜನರ ನೆಮ್ಮದಿ ಕೆಡಿಸೋದು ಕೋಮುಗಲಭೆ.  ಆದ್ರೆ ಇತ್ತೀಚಿನ ದಿನಗಳಲ್ಲಿ ಕೋಮುಗಲಭೆಗೂ ಬ್ರೇಕ್ ಹಾಕುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಇತ್ತೀಚೆಗೆ ನಡೆದ ಪೌರತ್ವದ ಹಿಂಸಾಚಾರದ ಬಳಿಕ ಮತ್ತೆ ಮಂಗಳೂರು ಸುದ್ದಿಯಲ್ಲಿದೆ.

Asaduddin owaisi

ಇದೀಗ ಮತ್ತೆ ಮಂಗಳೂರಿನಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆಯ ವಿರುದ್ಧ ಪ್ರತಿಭಟಿಸಲು ಮುಸ್ಲಿಂ ಸಂಘಟನೆ ಮುಂದಾಗಿದೆ..ಈ ಬಾರಿಯ ಪ್ರತಿಭಟನೆಯಲ್ಲಿ ಸಾವಿರಾರು ಮಂದಿ ಭಾಗವಹಿಸುವ ಸಾಧ್ಯತೆ ಇದೆ. ಯಾಕಂದ್ರೆ ಇದೀಗ ಪೌರತ್ವದ ವಿರುದ್ಧದ ಪ್ರತಿಭಟನೆಗೆ ಅಸಾದುದ್ದೀನ್ ಓವೈಸಿ ಮಂಗಳೂರಿಗೆ ಆಗಮಿಸುವ ಸಾಧ್ಯತೆ ಇದೆ.

Federal capital

ಈ ಬಗ್ಗೆ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಂದೇಶಗಳು ಹರಿದಾಡುತ್ತಿದ್ದು, ಮುಂದಿನ ದಿನಗಳಲ್ಲಿ ಪೊಲೀಸರು ಕೂಡ ಕೊಂಚ ಅಲರ್ಟ್ ಆಗಿರಬೇಕಿದೆ. ಯಾಕಂದ್ರೆ ಅಸಾದುದ್ದೀನ್ ಓವೈಸಿ ಮಂಗಳೂರಿಗೆ ಬರೋದಾದ್ರೆ ಇಲ್ಲಿ ಆತನ ವಿರುದ್ಧ ಪ್ರತಿಭಟನೆ ನಡೆಯೋ ಸಾಧ್ಯತೆ ಇದೆ. ಕಾರಣ ಇಷ್ಟೆ ಈ ಹಿಂದೆಯೊಮ್ಮೆ ಓವೈಸಿ ಮಂಗಳೂರಿಗೆ ಬರೋದಾಗಿ ಸುದ್ದಿ ಹಬ್ಬಿತ್ತು. ಆ ವೇಳೆ ಹಿಂದೂ ಸಂಘಟನೆಗಳು ಪ್ರತಿಭಟಿಸುವ ಎಚ್ಚರಿಕೆ ನೀಡಿತ್ತು. ಇದೀಗ ಮತ್ತೆ ಓವೈಸಿ ಪೌರತ್ವದ ವಿರುದ್ಧದ ಹೋರಾಟಕ್ಕೆ ಶೀಘ್ರದಲ್ಲಿ ಬರೋದಾಗಿ ಸಾಮಾಜಿಕ ಜಾಲತಾಣದಲ್ಲಿ ಸುದ್ದಿ ಹಬ್ಬಿದೆ. ಇದು ಎಷ್ಟು ಸತ್ಯವೋ ಎಂಬುದನ್ನು ಮುಂದಿನ ದಿನಗಳಲ್ಲಿ ನೋಡಬೇಕಿದೆ.

CATEGORIES
TAGS
Share This

COMMENTS

Wordpress (0)
Disqus ( )
error: Content is protected !!