“ದೇಶದ ಏಕತೆ, ಅಖಂಡತೆ ಕಾಂಗ್ರೆಸ್‍ನಿಂದ ಮಾತ್ರ ಸಾಧ್ಯ” ಝಮೀರ್ ಅಹಮ್ಮದ್

ಮಂಗಳೂರು : (ಡಿ.28) ದೇಶಕ್ಕೆ ಸ್ವಾತಂತ್ರ್ಯದ ಮೂಲಕ ಭದ್ರಬುನಾದಿಯನ್ನು ಹಾಕಿಕೊಟ್ಟು ಸಾಮಾಜಿಕ ನ್ಯಾಯ ಒದಗಿಸಿದ ಕಾಂಗ್ರೆಸ್, ದೇಶಕ್ಕೆ ಅನಿವಾರ್ಯವಾಗಿದೆ. ಕಾಂಗ್ರೆಸ್‍ನ ತತ್ವ ಸಿದ್ಧಾಂತಗಳಿಂದ ಮಾತ್ರ “ದೇಶದ ಏಕತೆ, ಅಖಂಡತೆ ಸಾಧ್ಯ” ಎಂದು ಮಾಜಿ ಸಚಿವ ಝಮೀರ್ ಅಹಮದ್ ಹೇಳಿದರು.
ಮಂಗಳೂರು ಮಲ್ಲಿಕಟ್ಟೆಯಲ್ಲಿರುವ ಕಾಂಗ್ರೆಸ್ ಭವನದಲ್ಲಿ ಜರುಗಿದ ಕಾಂಗ್ರೆಸ್‍ನ 134ನೇ ಸಂಸ್ಥಾಪನಾ ದಿನಾಚರಣೆಯಲ್ಲಿ ಅವರು ಮುಖ್ಯ ಅತಿಥಿಯಾಗಿ ಮಾತನಾಡುತ್ತಿದ್ದರು.

Bz sameer Ahmad khan
ಮಾಜಿ ಸಚಿವ ರಮಾನಾಥ ರೈಯವರು ಮಾತನಾಡಿ, “ಪ್ರಬಲ ಜಾತ್ಯಾತೀತ ಪಕ್ಷವಾದ ಕಾಂಗ್ರೆಸ್‍ನಿಂದ ಕೋಮುಶಕ್ತಿಗಳನ್ನು ಮಣಿಸಲು ಸಾಧ್ಯವಿದೆ. ಜಾತ್ಯಾತೀತ ಮನೋಭಾವದವರು ಮಾತ್ರ ಕಾಂಗ್ರೆಸ್‍ನಲ್ಲಿದ್ದು ದೇಶದ ಪ್ರಗತಿಗೆ ಕಾರಣೀಭೂತರಾಗಿದ್ದಾರೆ” ಎಂದರು.
ಶಾಸಕ ಯು.ಟಿ ಖಾದರ್ ಮಾತನಾಡಿ, “ಕೇಂದ್ರ ಸರಕಾರವು ತರಲು ಉದ್ದೇಶಿಸಿರುವ ವಿವಾದಿತ ಎನ್.ಆರ್.ಸಿ ಮಸೂದೆಯು ಜನರಲ್ಲಿ ಗೊಂದಲವನ್ನು ಉಂಟು ಮಾಡಿದ್ದು, ದೇಶಕ್ಕೆ ಅಪಾಯದ ಮುನ್ಸೂಚನೆಯಾಗಿದೆ. ಇದರ ವಿರುದ್ಧ ಕಾಂಗ್ರೆಸ್ ತಳಮಟ್ಟದಿಂದ ಜನಜಾಗೃತಿ ಮೂಡಿಸಲಿದೆ” ಎಂದರು.

Federal capital
ಸಮಾರಂಭದಲ್ಲಿ ವಿಧಾನಪರಿಷತ್ತು ಸದಸ್ಯ ಹಾಗೂ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೆ.ಹರೀಶ್ ಕುಮಾರ್ ಅಧ್ಯಕ್ಷತೆ ವಹಿಸಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ವಿಧಾನಪರಿಷತ್ತು ಸದಸ್ಯ ಐವನ್ ಡಿ’ಸೋಜಾ, ಮಾಜಿ ಶಾಸಕರುಗಳಾದ ಶ್ರೀಮತಿ ಶಕುಂತಲಾ ಶೆಟ್ಟಿ, ಜೆ.ಆರ್ ಲೋಬೋ, ಕಾಂಗ್ರೆಸ್ ಮುಖಂಡರುಗಳಾದ ಪಿ.ವಿ ಮೋಹನ್, ಧನಂಜಯ ಅಡ್ಪಂಗಾಯ, ಲಾವಣ್ಯ ಬಲ್ಲಾಳ್,

National Congress mangalore

ಲೋಕೇಶ್ ಹೆಗ್ಡೆ, ಪದ್ಮನಾಭ ನರಿಂಗಾನ, ಸದಾಶಿವ ಶೆಟ್ಟಿ, ವಿಶ್ವಾಸ್ ಕುಮಾರ್ ದಾಸ್, ಜೆ.ಅಬ್ದುಲ್ ಸಲೀಂ, ಸಂತೋಷ್ ಕುಮಾರ್ ಶೆಟ್ಟಿ ಅಸೈಗೋಳಿ, ಗಣೇಶ್ ಪೂಜಾರಿ, ನೀರಜ್ ಪಾಲ್, ಸಂತೋಷ್ ಕುಮಾರ್ ಶೆಟ್ಟಿ, ನಝೀರ್ ಬಜಾಲ್, ಟಿ.ಕೆ ಸುಧೀರ್ ಮತ್ತಿತರರು ಉಪಸ್ಥಿತರಿದ್ದರು. ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಸದಾಶಿವ ಉಳ್ಳಾಲ್ ಸ್ವಾಗತಿಸಿ, ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಶಾಲೆಟ್ ಪಿಂಟೋ ವಂದಿಸಿದರು.

CATEGORIES
TAGS
Share This

COMMENTS

Wordpress (0)
Disqus ( )
error: Content is protected !!