ಸುಳ್ಯ ಕಾಂಗ್ರೆಸ್ಸ್ ಕಾರ್ಯಕರ್ತರ ಬಂಡಾಯ ಪುತ್ತೂರು ಕ್ಷೇತ್ರದ ಬೆಂಕಿಗೆ ತುಪ್ಪ ಸುರಿಯುವ ಸಾಧ್ಯತೆ.
ಮಂಗಳೂರು (ಮಾ.29) : ಪ್ರತಿ ಚುನಾವಣೆಯಲ್ಲಿ ಟಿಕೆಟ್ ಗಾಗಿ ಜಿದ್ದಾಜಿದ್ದಿನ ಹೋರಾಟ ನಡೆಯುವ ಬೂದಿ ಮುಚ್ಚಿದ ಕೆಂಡದಂತಿರುವ ಪುತ್ತೂರು ಕ್ಷೇತ್ರದ ಮೂಲ ಕಾಂಗ್ರೆಸಿಗರ ಬಂಡಾಯದ ಬಿಸಿ ಎದ್ದು ನಿಂತರೆ ಕಾಂಗ್ರೆಸ್ ಕರಾವಳಿಯಲ್ಲಿ ಗೆಲ್ಲುವ ಸ್ಥಾನವನ್ನು ಕಳೆದುಕೊಳ್ಳಲಿದೆ ಎಂಬುವುದು ರಾಜಕೀಯ ಲೆಕ್ಕಾಚಾರ.

ಕೃಷ್ಣಪ್ಪ .ಜಿ
ಅಭ್ಯರ್ಥಿ ಅಯ್ಕೆಗೆ ಕಗ್ಗಂಟಾಗಿ ಉಳಿದಿರುವ ಎರಡು ಕ್ಷೇತ್ರಗಳಾದ ಮಂಗಳೂರು ದಕ್ಷಿಣ ಹಾಗೂ ಸುರತ್ಕಲ್ ಕ್ಷೇತ್ರದ ಮಾಜಿ ನಾಯಕರ ಬಂಡಾಯ ಅದೆಷ್ಟು ಕಾಂಗ್ರೆಸ್ ವೋಟ್ ಗಳನ್ನು ಒಡಯಬಲ್ಲದು ಎಂಬುದರ ಮೇಲೆ ಕಾಂಗ್ರೆಸ್ಸ್ ಅಭ್ಯರ್ಥಿಯ ಭವಿಷ್ಯ ಅಡಗಿದೆ.

ನಂದಕುಮಾರ್
ಕಳೆದ 2013ರ ವಿಧಾನಸಭಾ ಚುನಾವಣೆಯಲ್ಲಿ ಸುಳ್ಯ ಕ್ಷೇತ್ರದಲ್ಲಿ ಗೆಲುವಿನ ಸನಿಹಕ್ಕೆ ಬಂದ ಕಾಂಗ್ರೆಸ್ ಕೊನೆ ಕ್ಷಣದಲ್ಲಿ ಕೈ ಬಿಟ್ಟು ಹೋಗಿ 8 ಕ್ಷೇತ್ರದ ಪೈಕಿ 7ನ್ನು ಗೆದ್ದುಕೊಂಡು ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲು ಕರಾವಳಿ ಕಾಣಿಕೆ ನೀಡಿತು ಎಂದು ಹೇಳಬಹುದು. ನಂತರ 2018ರಲ್ಲಿ ಕಾಂಗ್ರೆಸ್ ಕರಾವಳಿಯಲ್ಲಿ ಪೂರ್ಣ ವಾಗಿ ಮುಗ್ಗರಿಸಿದಾಗ ಸುಳ್ಯ ಕ್ಷೇತ್ರದೊಂದಿಗೆ 8ರಲ್ಲಿ 7ನ್ನು ಕಳೆದುಕೊಂಡು ಒಂದು ಸ್ಥಾನಕ್ಕೆ ತೃಪ್ತಿಪಟ್ಟು ರಾಜ್ಯದಲ್ಲಿ ಕಾಂಗ್ರೆಸ್ ಅಧಿಪತ್ಯ ಸ್ಥಾಪಿಸಲು ಹಿನ್ನಡೆಯನ್ನು ಕಂಡಿತು.

ಮೊಯಿದ್ದಿನ್ ಬಾವ
ಆದರೆ ಈ ಬಾರಿ ಹಾಗೆ ಇಲ್ಲ ಚುನಾವಣಾ ಕಾವು ಏರುತ್ತಿರುವಂತೆ ಕಾಂಗ್ರೆಸ್ ಮೊದಲೇ ಎಚ್ಚೆತ್ತು ರಾಜ್ಯದಲ್ಲಿ ತನ್ನ 124 ಅಭ್ಯರ್ಥಿಗಳ ಲಿಸ್ಟ್ ಬಿಡುಗಡೆಗೊಳಿಸಿ ನಿಟ್ಟುಸಿರು ಬಿಟ್ಟಿದೆ. ಆದರೆ, ಕರಾವಳಿಯ ಸುಳ್ಯದಲ್ಲಿ ಹಿಂದೆಂದೂ ಕಾಣದಂತ ಬಂಡಾಯ ಬಿಸಿ ಈಗ ಎದ್ದಿದೆ, ಅದರ ತಾಪ ಎಷ್ಟಿದೆ ಎಂದರೆ ಕಾಂಗ್ರೆಸ್ ನ ಇನ್ನೊಂದು ಬಂಡಾಯ ಕ್ಷೇತ್ರಕ್ಕೆ ಹೆಸರಾಗಿರುವ ಪುತ್ತೂರಿಗೂ ಇದರ ಕಾವು ಏರುವ ಭಯ ಕಾಂಗ್ರೆಸ್ ಹೈಕಮಾಂಡ್ ವಲಯದಲ್ಲಿ ಶುರುವಾಗಿರುವ ಲಕ್ಷಣಗಳು ಗೋಚರಿಸುತ್ತಿವೆ.

ಹೇಮನಾಥ ಶೆಟ್ಟಿ
ಯಾಕೆಂದರೆ, ಸುಳ್ಯದ ಅಭ್ಯರ್ಥಿಗಳ ಸ್ಪರ್ಧೆ ಕಸರತ್ತಿನ ಬಿಸಿ ಇತ್ತೀಚಿನ ಅಂದರೆ ಕಳೆದ ಒಂದುವರೆ ವರ್ಷದ ಅವಧಿಯಲ್ಲಿ ಆಗಿರೋದು, ಆದರೆ ಪುತ್ತೂರಿನಲ್ಲಿ ಇದರ ಬಿಸಿ ಬಹಳಷ್ಟು ವರ್ಷಗಳದ್ದು , ಇದಲ್ಲದೇ ಈ ಬಿಸಿಯಲ್ಲಿ ಉಳಿದ ಕ್ಷೇತ್ರಗಳಿಗೂ ಪ್ರಭಾವ ಬೀರಲಿದೆ ಎನ್ನುವ ಮಾಹಿತಿ ಕೆಲ ಕಾಂಗ್ರೆಸ್ ಕಾರ್ಯಕರ್ತರದ್ದು, ಇದಕ್ಕೆ ಕಾರಣ ಈಗ ಸುದ್ದಿ ಮಾಡುತ್ತಿರುವ ಬಿಜೆಪಿಯಿಂದ ವಲಸೆ ಬಂದ ಆರೆಸ್ಸೆಸ್ ಮಾಜಿ ಸೇವಕ ಕಾಂಗ್ರೆಸ್ಸಿನಿಂದ ಅಭ್ಯರ್ಥಿ ಅಯ್ಕೆ ಬಯಸಿರೋದು, ಕೇವಲ ಒಂದುವರೆ ವರ್ಷ ದುಡಿದ ಸುಳ್ಯ ಕ್ಷೇತದವರ ಬಂಡಾಯದ ಬಿಸಿ ಈ ರೀತಿ ಏರಿರಬೇಕಾದರೆ, ಪುತ್ತೂರಿನ ಹುಟ್ಟು ಕಾಂಗ್ರೆಸಿಗರ ಅಕ್ರೋಶದ ಬಿಸಿ ಅದೆಷ್ಟು ಕ್ಷೇತ್ರಕ್ಕೆ ಬಾಧಿಸಲಿದೆ ಎನ್ನುವ ಲೆಕ್ಕಚಾರ ಕಾಂಗ್ರೆಸ್ ವಲಯದಲ್ಲಿ ಕಂಡು ಬರುತ್ತಿದೆ.

ಆಶೋಕ್ ಕುಮಾರ್ ರೈ
ಅದರಲ್ಲೂ ಅಲ್ಪಸಂಖ್ಯಾತ ವೋಟ್ ಗಳೇ ಹೆಚ್ಚಿರುವ ಪುತ್ತೂರು ಕ್ಷೇತ್ರದಲ್ಲಿ ಭಾಜಪದಿಂದ ಬಂದ ಕಾಂಗ್ರೆಸ್ ಟಿಕೆಟ್ ಬಯಸಿರುವ ಆಕಾಂಕ್ಷಿಯ ಹೆಸರು ಜಲೀಲ್ ಕರೋಪಾಡಿ ಕೊಲೆ ಪ್ರಕರಣ ಆರೋಪಿಯ ಜತೆ
ಇರುವ ಸಂಬಂಧದ ಲೆಕ್ಕಚಾರವು ಭಾದಿಸಲಿದೆ ಎಂದು ಹೇಳಲಾಗುತ್ತಿದೆ, ಒಂದು ವೇಳೆ ಈ ಪ್ರಕರಣವನ್ನು ಕೈಗೆತ್ತಿಕೊಂಡು ಎಸ್.ಡಿ. ಪಿ.ಐ ಎನ್ನುವ ಪಕ್ಷವು ಸುದ್ದಿ ಮಾಡ ಹೊರಟರೆ ದ.ಕನ್ನಡ ಜಿಲ್ಲೆಯ ಅದೆಷ್ಟು ಸ್ಥಾನಗಳಲ್ಲಿ ಕಾಂಗ್ರೆಸ್ ವೋಟ್ ಒಡೆಯಲು ಇದು ಕಾರಣವಾಗಬಹುದು ಎನ್ನುವ ಗಂಭೀರತೆ ಕಾಂಗ್ರೆಸ್ ವಲಯದಲ್ಲಿ ಆಗುತ್ತಿದೆ ಎನ್ನುವ ಅಲ್ಪಸ್ವಲ್ಪ ಮಾಹಿತಿ, ಅದರ ಪರಿಣಾಮ ಈಗ ಕಾಂಗ್ರೆಸ್ ಇರುವ ಉಳ್ಳಾಲ ಕ್ಷೇತ್ರದಲ್ಲೂ ಗಂಭೀರವಾದ ಹೊಡೆತ ಬೀಳಲಿದೆ ಎನ್ನುವುದು ರಾಜಕೀಯ ವಿಶ್ಲೇಷಕರ ಲೆಕ್ಕಾಚಾರ.

ಶಕುಂತಲ ಶೆಟ್ಟಿ
ಅದರಂತೆ ಬಂಟ್ವಾಳ, ಮೂಡಬಿದ್ರೆ ಹಾಗೂ ಇನ್ನಿತರ ಕ್ಷೇತ್ರಗಳಿಗೂ ಪ್ರಭಾವ ಬೀರಲಿದೆ ಎಂದು ಹೇಳಲಾಗುತ್ತಿದೆ, ಇನ್ನೂ ಈ ಪುತ್ತೂರು ಕ್ಷೇತ್ರದ ಮೂಲ ಕಾಂಗ್ರೆಸಿಗರ ನಡೆಯ ಮೇಲೆಯೇ ಎಲ್ಲರ ದೃಷ್ಟಿ ನೆಟ್ಟಿದೆ. ಸುಳ್ಯ ಒಂದು ಕ್ಷೇತ್ರದ ಬಂಡಾಯದ ಶಮನಕ್ಕಾಗಿ ಆಲೋಚನೆಯಲ್ಲಿ ಇರುವ ಕಾಂಗ್ರೆಸ್ ಗೆ ಈಗ ಪುತ್ತೂರು , ಮಂಗಳೂರು ಉತ್ತರ ಹಾಗೂ ಮತ್ತು ಸುರತ್ಕಲ್ ಕ್ಷೇತ್ರದ ಅಭ್ಯರ್ಥಿ ಅಯ್ಕೆಯು ಕಬ್ಬಿಣದ ಕಡಲೆಯಾಗಿ ಪರಿಣಮಿಸಲಿದೆ.. ಮೂಲ ಕಾಂಗ್ರೆಸ್ ಬಿಸಿಯ ತಾಪಕ್ಕೆ ಉಳಿದ ಗೆಲ್ಲುವ ಕ್ಷೇತ್ರಗಳು ತರಗೆಲೆಯಂತೆ ಉದುರಿ ಹೋಗಲಿದೆಯೇ ಎನ್ನುವ ಭೀತಿ “ಕೈ” ಹೈಕಮಾಂಡ್ ದ್ದು.