ಲತೀಶ್ ಗುಂಡ್ಯ ವಿರುದ್ಧ ಸುಳ್ಳು ಕೇಸು : ದಲಿತ ಮುಖಂಡ ಹೇಮಂತ್ ಅರ್ಲಪದವು ಖಂಡನೆ.
ಪುತ್ತೂರು : (ಜೂ.04) ದಲಿತ ನಾಯಕ, ಸಾಮಾಜಿಕ ಹೋರಾಟಗಾರ ಬೈರ ಸಮುದಾಯಕ್ಕೆ ಸೇರಿದ ಒಬ್ಬ ಹಿಂದೂ ಮುಖಂಡ ಲತೀಶ್ ಗುಂಡ್ಯ ರವರ ಮೇಲೆ ಅದ ಆರೋಪವನ್ನು ಅಂಬೇಡ್ಕರ್ ಅಪತ್ಬಾಂದವ ಟ್ರಸ್ಟ್ ಪುತ್ತೂರು ತಾಲೂಕು ಅಧ್ಯಕ್ಷರಾದ ಹೇಮಂತ್ ಅರ್ಲಪದವು ತೀವ್ರವಾಗಿ ಖಂಡಿಸಿದ್ದಾರೆ.
ದಲಿತ ಮುಖಂಡ ಸುಂದರ್ ಪಾಟಾಜೆ ಸುಳ್ಯ ಮತ್ತು ಅಂಬುಲೆನ್ಸ್ ಚಾಲಕನ ಪೀತೂರಿಯಿಂದ ಕೊಲೆ ಬೆದರಿಕೆ ಜಾತಿಯೊಳಗಿನ ವೈಷಮ್ಯ ಬರುವಂತಹ ಆಧಾರ ರಹಿತ ಆರೋಪಗಳನ್ನು ಹೊರಿಸಿ ಸುಳ್ಯ ಠಾಣೆಗೆ ದೂರು ನೀಡಿರುವುದು ಸಮಂಜಸವಲ್ಲ.

ಹೇಮಂತ ಅರ್ಲಪದವು
ಇಂದೊಂದು ಸತ್ಯಕ್ಕೆ ದೂರವಾದ ಸುಳ್ಳು ಆರೋಪ ಹೊರಿಸಿರುವುದು ಅಲ್ಲದೇ ಲತೀಶ್ ಗುಂಡ್ಯ ರವರ ಸಾಮಾಜಿಕ ಜೀವನಕ್ಕೆ ದಕ್ಕೆ ತರುವಂತೆ ಮಾಡಿರುವುದು ಸರಿಯಲ್ಲ ಈ ಬಗ್ಗೆ ಸೂಕ್ತ ತನಿಖೆಯನ್ನು ನಡೆಸಿ ಲತೀಶ್ ಗುಂಡ್ಯ ಇವರಿಗೆ ನ್ಯಾಯ ದೊರಕಿಸಿ ಕೊಡಬೇಕು ತಪ್ಪಿದ್ದಲ್ಲಿ ನಾವು ಮುಂದಿನ ದಿನಗಳಲ್ಲಿ ಬೀದಿಗಿಳಿದು ಹೋರಾಟದ ಹಾದಿಯನ್ನು ಹಿಡಿಯಬೇಕಾದ ಅನಿವಾರ್ಯತೆ ಎದುರಾಗಬಹುದು ಎಂದು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.