ಕಾಂಗ್ರೆಸ್ ಮುಖಂಡ ಸುಹೈಲ್ ಬಂಧನ ಜನಪರ ಧ್ವನಿ ಹತ್ತಿಕ್ಕುವ ವ್ಯವಸ್ಥಿತ ಷಡ್ಯಂತ್ರವಾಗಿದೆ : ಪ್ರಸಾದ್ ಪಾಣಾಜೆ
ಪುತ್ತೂರು : (ಜೂ 04) ಕಳೆದೊಂದು ವರ್ಷದಿಂದ ಕೊರೊನಾ ಸಂಕಷ್ಟ ಪರಿಸ್ಥಿಯಲ್ಲಿ ಬೆಂದು ಹೋದ ಜನತೆ ಇದೀಗ ಜಾರಿಯಲ್ಲಿರುವ ಲಾಕ್ ಡೌನ್ ನಿಂದ ಅಕ್ಷರಶಃ ಅರೆ ಜೀವವಾಗಿದ್ದಾರೆ. ಕೈಯಲ್ಲಿ ಉದ್ಯೋಗವಿಲ್ಲ ಸಾಲದ ಬಾಧೆ ನಿಂತಿಲ್ಲ. ನಿತ್ಯ ಹೊಟ್ಟೆ ತುಂಬಿಸಲು ವಿಫಲವಾಗಿರುವಾಗ ಆರೋಗ್ಯ ಕೆಟ್ಟು ಆಸ್ಪತ್ರೆ ಸೇರಿದರೆ ಆತನಿಗೆ ಮತ್ತಿನ್ನೇನು ಬೇಕಾಗಿಲ್ಲ.

ಶ್ರೀಪ್ರಸಾದ್ ಎನ್ ಪಾಣಾಜೆ
ಆಸ್ಪತ್ರೆಯ ಬಿಲ್ ಗಳಲ್ಲಿ ಲಕ್ಷ ಲಕ್ಷ ನಮೂದಾಗುವ ಮೊತ್ತವನ್ನು ಬಡಜನರು ಹೇಗೆ ತಾನೆ ಪಾವತಿಸಿಯಾರು? ಇಂಥ ಅಸಹಾಯಕರಿಗೆ ಬೆನ್ನೆಲುಬಾಗಿ ನಿಂತ ಯುವ ಕಾಂಗ್ರೆಸ್ ಮುಖಂಡ ಸುಹೈಲ್ ಕಂದಕ್ ರವರು ಸಹಾಯದ ಧ್ವನಿ ಎತ್ತಿ ನ್ಯಾಯ ಒದಗಿಸಲು ಹೋರಾಡಿದರೆ ಅದು ಅಪರಾಧವೆಂಬಂತೆ ಬಂಧಿಸಿರುವುದು ಜನಪರ ಧ್ವನಿಯನ್ನು ಹತ್ತಿಕ್ಕುವ ವ್ಯವಸ್ಥಿತ ಷಡ್ಯಂತ್ರವಾಗಿದೆ. ಈ ವ್ಯವಸ್ಥಿತ ಷಡ್ಯಂತ್ರ ವನ್ನು ಪುತ್ತೂರು ಬ್ಲಾಕ್ ಯುವ ಕಾಂಗ್ರೆಸ್ ಖಂಡಿಸುತ್ತಿದೆ ಎಂದು ಅಧ್ಯಕ್ಷ ಪ್ರಸಾದ್ ಎನ್ ಪಾಣಾಜೆ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.