ಕೊರಗ ಸಮುದಾಯದ ಸ್ಪೂರ್ತಿ ಚೇತನ ಗೋಕುಲದಾಸ್ ಇನ್ನಿಲ್ಲ.
ಮಂಗಳೂರು : (ಮೇ.26) ಕೊರಗ ಸಮುದಾಯದ ಸ್ಪೂರ್ತಿ ಚೇತನ, ಸಮುದಾಯದ ಮೊತ್ತ ಮೊದಲ ಪದವೀಧರ ಪಳ್ಳಿ ಗೋಕುಲ ದಾಸ್ ಇಂದು ಬೆಳ್ಳಗ್ಗೆ ಮಂಗಳೂರಿನ ಚಿಲಿಂಬಿಯ ತಮ್ಮ ಸ್ವಗೃಹದಲ್ಲಿ ನಿಧನರಾದರು.
ಮೂಲತಃ ಕಾರ್ಕಳ ತಾಲೂಕಿನ ಪಳ್ಳಿ ಗ್ರಾಮದವರಾದ ಗೋಕುಲದಾಸರು ಕೊರಗ ಸಮುದಾಯದ ಮೊಟ್ಟ ಮೊದಲ ಪಧವೀದರರಾಗಿದ್ದರು. ಹುಟ್ಟು ಹೋರಾಟಗಾರ, ಅಪ್ರತಿಮ ಸಂಘಟಕ, ತೀಕ್ಷ್ಣ ಮಾತುಗಾರ, ಬರಹಗಾರ, ಕ್ರಾಂತಿ ಕವಿ, ಅದಕ್ಕೂ ಮಿಗಿಲಾಗಿ ಒಬ್ಬ ಮಾನವತವಾದಿಯಾಗಿದ್ದರು.

Advertisement
ಅಂಚೆ ಇಲಾಖೆಯಲ್ಲಿ ಸೇವೆ ಸಲ್ಲಿಸಿರುವ ಗೋಕುಲದಾಸರು ನಿವೃತ್ತಿ ಜೀವನವನ್ನು ಮಂಗಳೂರಿನ ಚಿಲಿಂಬಿಯ ತಮ್ಮ ಸ್ವಗೃಹದಲ್ಲಿ ಸಾಗಿಸುತ್ತಿದ್ದರು. ತಮ್ಮ ಇಳಿ ವಯಸ್ಸಿನಲ್ಲಿಯೂ ಕೊರಗ ಸಮುದಾಯದ ಸಂಘಟನೆ ಮತ್ತು ಅಭಿವೃದ್ಧಿಗಾಗಿ ದುಡಿಯುತ್ತಿದ್ದ ಇವರು, ‘ಕೊರಗ ಅಭಿವೃದ್ಧಿ ಸಂಘಗಳ ಒಕ್ಕೂಟ’ದ ಗೌರವಾಧ್ಯಕ್ಷರು. ಅಲ್ಲದೆ ಸಮುದಾಯದ ಸ್ಪೂರ್ತಿ ಚಿಲುಮೆಯಾಗಿದ್ದರು.