ಎಂ.ಆರ್.ಪಿ.ಎಲ್ ನೇಮಕಾತಿ ಪಟ್ಟಿಯನ್ನು ಕೂಡಲೇ ತಡೆಹಿಡಿಯಲು ಆದೇಶ.

 

ಮಂಗಳೂರು : (ಮೇ.22) ಎಂ.ಆರ್.ಪಿ.ಎಲ್ ನಲ್ಲಿ ಇತ್ತೀಚೆಗೆ ಸುಮಾರು 200 ಕ್ಕೂ ಹೆಚ್ಚು ವಿವಿಧ ಹುದ್ದೆಗಳ ನೇಮಕಾತಿ ಪ್ರಕ್ರಿಯೆ ನಡೆದಿದ್ದು, ಸದರಿ ನೇಮಕಾತಿಯಲ್ಲಿ ಕರ್ನಾಟಕದ ಹಾಗೂ ಸ್ಥಳೀಯ ಅಭ್ಯರ್ಥಿಗಳಿಗೆ ಅನ್ಯಾಯವಾಗಿದೆ ಎಂಬ ಕೂಗು ಕೇಳಿ ಬಂದ ಹಿನ್ನೆಲೆಯಲ್ಲಿ ಇಂದು ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ ಕೋಟಾ ಶ್ರೀನಿವಾಸ ಪೂಜಾರಿಯವರು, ಸ್ಥಳಿಯ ಶಾಸಕರಾದ ಶ್ರೀ ಉಮನಾಥ ಕೋಟ್ಯಾನ್, ಡಾ. ಭರತ್ ಶೆಟ್ಟಿ ಹಾಗೂ ಶ್ರೀ ವೇದವ್ಯಾಸ ಕಾಮತ್ ಅವರ ಉಪಸ್ಥಿತಿಯಲ್ಲಿ ಎಂ.ಆರ್ ಪಿ.ಎಲ್.ನ ಆಡಳಿತ ನಿರ್ದೇಶಕರು ಹಾಗೂ ಹಿರಿಯ ಅಧಿಕಾರಿಗಳೊಂದಿಗೆ ಸಭೆಯನ್ನು ಸಂಸದ ನಳಿನ್ ಕುಮಾರ್ ನೇತೃತ್ವದಲ್ಲಿ ನಡೆಸಲಾಯಿತು.

Mrpl

ಸ್ಥಳೀಯರಿಗಾದ ಆನ್ಯಾಯದ ಬಗ್ಗೆ ಎಂ.ಆರ್.ಪಿ.ಎಲ್ ಅಧಿಕಾರಿಗಳೊಂದಿಗೆ ಕೂಲಂಕುಷವಾಗಿ ಚರ್ಚಿಸಲಾಯಿತು ಹಾಗೂ ಸದರಿ ನೇಮಕಾತಿ ಪಟ್ಟಿಯನ್ನು ಕೂಡಲೇ ತಡೆಹಿಡಿಯಲು ಆದೇಶಿಸಲಾಗಿ ಎಂ.ಆರ್.ಪಿ.ಎಲ್ ಆಡಳಿತ ನಿರ್ದೇಶಕರು ಸದರಿ ನೇಮಕಾತಿಯನ್ನು ತಡೆಹಿಡಿಯಲು ಒಪ್ಪಿರುತ್ತಾರೆ.

Amrutha rao

Advertisement

ನೇಮಕಾತಿಯ ಮುಂದಿನ ಪ್ರಕ್ರಿಯೆಯನ್ನು ಸಂಸದರ, ಉಸ್ತುವಾರಿ ಸಚಿವರ ಹಾಗೂ ಸ್ಥಳೀಯ ಶಾಸಕರ ಮಾರ್ಗದರ್ಶನದಲ್ಲಿ ನಡೆಸಲು ಆದೇಶಿಸಲಾಗಿದೆ.

CATEGORIES
TAGS
Share This

COMMENTS

Wordpress (0)
Disqus ( )
error: Content is protected !!