ABVP ಕಾರ್ಯಕರ್ತರ ಬೆದರಿಕೆಗೆ ನಾವು ಜಗ್ಗುವುದಿಲ್ಲ ತಾವು ಕ್ಯಾಂಪಸ್ ಗೇಟ್ ಮೀಟ್ ಕಾರ್ಯಕ್ರಮವನ್ನ ತಡೆಯುವುದಾದರೆ ತಡೆಯಿರಿ ಜಿಲ್ಲಾ ಅಧ್ಯಕ್ಷರಾದ ಸವಾದ್ ಸುಳ್ಯ ಸವಾಲು.

ಮಂಗಳೂರು : (ಮಾ.09) ರಾಷ್ಟ್ರೀಯ ವಿಧ್ಯಾರ್ಥಿ ಕಾಂಗ್ರೆಸ್ ಸದಾ ವಿಧ್ಯಾರ್ಥಿಗಳ ಅಧ್ಯಯನ ಶೀಲತೆ, ಭವಿಷ್ಯದ ಕುರಿತು ಪರಿಕಲ್ಪನೆ, ರಾಷ್ಟ್ರೀಯತೆ, ದೇಶಪ್ರೇಮ ಇದರ ಬಗ್ಗೆ ಜಾಗೃತಿ ಮೂಡಿಸಿ ಒಬ್ಬ ಭಾರತೀಯ ಮಾದರಿ ಪ್ರಜೆಯಾಗಿ ಹೇಗಿರಬೇಕು ಎಂಬುದಕ್ಕೆ ಕೈಕನ್ನಡಿಯಾಗಿ ಕಾರ್ಯನಿರ್ವಹಿಸುತ್ತ ಬಂದಿದೆ. ಅದರೊಟ್ಟಿಗೆ ಭಾರತದ ಸಂವಿಧಾನದ ವಿರುಧ್ದ ಕಾರ್ಯಗಳಲ್ಲಿ ಯಾರಾದರೂ ಏರ್ಪಟ್ಟರೆ ಅವರ ವಿರುಧ್ದ ಸಮರ ಸಾರಲೂ ನಾವು ಹಿಂಜರಿದ ಇತಿಹಾಸವಿಲ್ಲ ಮುಂದೆಯೂ ಹಿಂಜರಿಯೂದಿಲ್ಲ.

Sawad sullia
ಇನ್ನೂ ಸದೃಡ, ಜತ್ಯಾತೀತ ಭಾರತ ಎಂಬ ಪರಿಕಲ್ಪನೆಯೊಂದಿಗೆ ವಿಧ್ಯಾರ್ಥಿದೆಸೆಯಿಂದಲೇ ಅದಕ್ಕೆ ಮುನ್ನುಡಿ ಬರೆಯೋಣ ಎಂಬ ಧ್ಯೇಯದೋಂದಿಗೆ NSUI ದಕ್ಷಿಣ ಕನ್ನಡ ಜಿಲ್ಲಾ ಸಮಿತಿ ಆರಂಭಿಸಿದ “ಕ್ಯಾಂಪಸ್ ಗೇಟ್ ಮೀಟ್” ಎಂಬ ಕಾರ್ಯಕ್ರಮ ಕೆಲ ದೇಶದ್ರೋಹಿ ABVP ಸಂಘಟನೆಗಳಿಗೆ ಗಂಟಲ ಮುಳ್ಲಾಗಿ ಪರಿಣಮಿಸಿದರೆ ಅದಕ್ಕೆ ನಾವೂ ಜವಾಬ್ದಾರರಲ್ಲ ಮತ್ತೆ ಅಮಾಯಕ ವಿಧ್ಯಾರ್ಥಿಗಳನ್ನು ಮುಂದೆ ಹಾಕಿ ಕಾರ್ಯಕರ್ತರಿಗೆ ಬೆದರಿಕೆ ಹಾಕುವುದು, ಹಲ್ಲೆ ನಡೆಸಲು ಮುಂದಾದರೆ ಕಾನೂನು ರೀತಿಯ ಕ್ರಮ ತೆಗೆದುಕ್ಕೊಳ್ಳುತ್ತೇವೆ ಎಂದು ಸವಾದ್ ಸುಳ್ಯ ರವರು ಎಚ್ಚರಿಸಿದರು.

NSUI ವತಿಯಿಂದ ಕಾಲೇಜಿನಲ್ಲಿ ವಿದ್ಯಾರ್ಥಿಗಳ ಸಮಸ್ಯೆಯನ್ನ ಆಲಿಸುವಂತ ಕಾರ್ಯಕ್ರಮ ಸುಳ್ಯದಲ್ಲಿ ನಡೆದಾಗ NSUI ಪದಾಧಿಕಾರಿಗಳಿಗೆ ಹಾಗೂ ಕಾರ್ಯಕರ್ತರಿಗೆ ABVP ಹಾಕಿದಂತ ಬೆದರಿಕೆಗೆ ನಾವು ಜಗ್ಗುದಿಲ್ಲ ಅಲ್ಲದೆ NSUI ಇನ್ನಿತರ ಕಾಲೇಜುಗಳಲ್ಲಿ ಕೂಡ ಈ ಕಾರ್ಯಕ್ರಮವನ್ನ ಯಶಸ್ವಿಯಾಗಿ ಮುಂದುವತಿಸಲಿದ್ದು ತಾವು ತಡೆವುದಾದರೆ ತಡೆಯಿರಿ ಎಂದು ಜಿಲ್ಲಾ ಅಧ್ಯಕ್ಷರಾದ ಸವಾದ್ ಸುಳ್ಯ ರವರು ಹೇಳಿಕೆಯನ್ನ ನೀಡಿದರು.

CATEGORIES
TAGS
Share This

COMMENTS

Wordpress (0)
Disqus ( )
error: Content is protected !!