ಅತ್ಯಾಚಾರ ಆರೋಪಿ ರಮೇಶ್ ಜಾರಕಿಹೊಳಿಯನ್ನು ಬಂಧಿಸಿ ಮಿಥುನ್ ರೈ.

Mithun Rai
ಬೆಂಗಳೂರು : (ಮಾ.29) ಕರ್ನಾಟಕ ಪ್ರದೇಶ ಕಾಂಗ್ರೆಸ್ ಅಧ್ಯಕ್ಷರಾದ ಶ್ರೀ ಡಿ.ಕೆ ಶಿವಕುಮಾರ್ ರವರನ್ನು ಅವಹೇಳನ ಮಾಡಿದ ಅತ್ಯಾಚಾರ ಅರೋಪಿ ರಮೇಶ್ ಜಾರಕಿಹೊಳಿಯನ್ನು ಬಂಧಿಸಬೇಕೆಂದು ಒತ್ತಾಯಿಸಿ ಯುವ ಕಾಂಗ್ರೆಸ್ ನಾಯಕರಾದ ಶ್ರೀ ಮಿಥುನ್ ರೈಯವರ ನೇತೃತ್ವದಲ್ಲಿ ಬೆಂಗಳೂರು ಕಬ್ಬನ್ ಪಾರ್ಕ್ ಪೋಲೀಸ್ ಸ್ಟೇಷನ್ ಎದುರುಗಡೆ ಪ್ರತಿಭಟನೆ ನಡೆಯಿತು.

Mithun rai

ಪ್ರತಿಭಟನೆಯಲ್ಲಿ ಮಾತನಾಡಿದ ಮಿಥುನ್ ರೈ ಯವರು ಅತ್ಯಾಚಾರ ಅರೋಪಿಯಾದ ಬಿಜೆಪಿ ಶಾಸಕ ರಮೇಶ್ ಜಾರಕಿಹೊಳಿ ಉಪ ಚುನಾವಣೆಯ ವೇಳೆ ಡಿ.ಕೆ. ಶಿವಕುಮಾರ್ ರವರ ಮೇಲೆ ಗೂಬೆ ಕೂರಿಸಿ ಪ್ರಕರಣದ ಹಾದಿ ತಪ್ಪಿಸುತ್ತಿದ್ದಾರೆ ಪೋಲೀಸರು ಆದಷ್ಟು ಬೇಗ ಅವರನ್ನು ಬಂಧಿಸಿ ಸರಿಯಾದ ತನಿಖೆ ನಡೆಸಬೇಕೆಂದು ಸರಕಾರವನ್ನು ಒತ್ತಾಯಿಸಿದರು. ಈ ಸಂದರ್ಭದಲ್ಲಿ ಯುವ ಕಾಂಗ್ರೆಸ್ ಮುಖಂಡರಾದ ಮೊಹಮ್ಮದ್ ನಲಪಾಡ್, ಕೆಂಪರಾಜ್ ಗೌಡ, ಮೆರಿಲ್ ರೆಗೊ, ಆರ್. ವಿ ಯುವರಾಜ್ ಹಾಗೂ ಕಾಂಗ್ರೆಸ್ ಮುಖಂಡರು ಉಪಸ್ಥಿತರಿದ್ದರು.

CATEGORIES
TAGS
Share This

COMMENTS

Wordpress (0)
Disqus ( )
error: Content is protected !!