ಪುತ್ತೂರಿನಲ್ಲಿ ಕಾರ್ಮಿಕರ ಸಹಕಾರಿ ಸಂಘ ಉದ್ಘಾಟನೆ.

Labour society puttur

ಪುತ್ತೂರು : ( ಜು.01) ದಕ್ಷಿಣಕನ್ನಡ ಜಿಲ್ಲಾ ಕೃಷಿ ಕಾರ್ಮಿಕರ ಸಹಕಾರಿ ಸಂಘ (ರಿ) ಪುತ್ತೂರು ಇದರ ಉದ್ಘಾಟನಾ ಸಮಾರಂಭ ಕಾಮಧೇನು ವಾಣಿಜ್ಯ ಸಂಕೀರ್ಣ (ಕ್ಯಾಂಪ್ಕೋ ಎದುರುಗಡೆ) ದಲ್ಲಿ ಜೂನ್ 30 ರಂದು ನಡೆಯಿತು. ಕಾರ್ಯಕ್ರಮವನ್ನು ಸುಮತಿ ಎಸ್ ಹೆಗ್ಡೆಯವರು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು. ಇದೆ ಸಂದರ್ಭದಲ್ಲಿ ಲಕ್ಮೀ ಪೂಜೆಯು ನಡೆಯಿತು. ಸಹಕಾರಿ ಸಂಘದ ಜಿಲ್ಲಾ ಅಧ್ಯಕ್ಷರಾಗಿ ಸುಮತಿ ಎಸ್ ಹೆಗ್ಡೆ ಮಂಗಳೂರು ಇವರನ್ನು ಆಯ್ಕೆ ಮಾಡಲಾಯಿತು.

Labour society puttur

ಸಂಘದ ಪ್ರವರ್ತಕರಾಗಿ ಶ್ರೀ ರಾಜು ಹೊಸ್ಮಠ, ರವೀಂದ್ರನಾಥ್ ಕಲ್ಲುರಾಯ, ವಿಶ್ವನಾಥ ಪೂಜಾರಿ, ಥೋಮಸ್, ಗಣಪತಿ ಹೆಗ್ಡೆ ಪುತ್ತೂರು, ಚೆನ್ನಪ್ಪ ಗೌಡ, ಹರ್ಷೇಂದ್ರ ಕುಮಾರ್ ಜೈನ್, ರಾಮಾಚಾರಿ ಬೆಳ್ತಂಗಡಿ, ಗಂಗಾಧರ ನಾಯ್ಕ ವಿಟ್ಲ, ವಂದನ್ ಶೇಟ್ ಮಂಗಳೂರು, ಪ್ರಸನ್ನ ಕುಮಾರ್, ಸುಮಾ ರಾವ್, ಮತ್ತು ಕವಿತ ಮಂಗಳೂರು ಆಯ್ಕೆಯಾಗಿದ್ದಾರೆ.
ಕಛೇರಿಯ ಕಾರ್ಯನಿರ್ವಹಣಾಧಿಕಾರಿಯಾಗಿ ಶಿವಾನಂದ ಎಸ್. ಎಂ ಮಂಗಳೂರು ಸಿಬ್ಬಂದಿಗಳಾಗಿ ಸತೀಶ್ ಎಂ ಪುರುಷರಕಟ್ಟೆ, ಕು| ಧನ್ಯಾ ಬೆಟ್ಟಂಪಾಡಿ ಇವರನ್ನು ನೇಮಿಸಲಾಯಿತು.

Labour society puttur

ಈ ಸಂದರ್ಭದಲ್ಲಿ ಕೃಷಿ ಕಾರ್ಮಿಕರ ಸಹಕಾರಿ ಸಂಘದ ಅತೀ ಹೆಚ್ಚು ಮೆಂಬರ್ ಶಿಪ್ ಮಾಡಿದ ಪ್ರವರ್ತಕರಾದ ರಾಜು ಹೊಸ್ಮಠ ರವರನ್ನು ಶಾಲು ಹಾಕಿ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ನ್ಯಾಯವಾದಿಗಳಾದ ಗಿರೀಶ್ ಮಲ್ಲಿ, ಪಿ.ಕೆ ಸತೀಶ್, ನಂದಕಿಶೋರ್, ಶಶಿಕುಮಾರ್ ಕಲ್ಲುರಾಯ, ಪುತ್ತೂರು ಇಂಟಕ್  ಕಾರ್ಯದರ್ಶಿ ಜಗದೀಶ್ ಕಜೆ, ಪ್ರಮುಖರಾದ ಪಾಂಡರಂಗ ಅಮೀನ್, ಆನಂದ ಕೌಡಿಚ್ಚಾರ್, ಸಾಂತಪ್ಪ ನರಿಮೊಗರು, ವಿಶಾಂತ್ ಮುಂಡೋಡಿ, ಆನಂದ ನೆಕ್ಕಿಲು, ಜಯಪ್ರಕಾಶ್ ಉಪಸ್ಥಿತರಿದ್ದರು. ಹರ್ಷೀತ ಮಂಗಳೂರು ಸ್ವಾಗತಿಸಿ ರಾಜು ಹೊಸ್ಮಠ ಧನ್ಯವಾದ ಮಾಡಿದರು.

CATEGORIES
TAGS
Share This

COMMENTS

Wordpress (0)
Disqus ( )
error: Content is protected !!