ಮಂಗಳೂರು ವಿಶ್ವವಿದ್ಯಾನಿಲಯ ಕೊಣಾಜೆ ಕ್ಯಾಂಪಸ್ ಪ್ರಥಮ ದರ್ಜೆ ಕಾಲೇಜ್ ಬಂದ್ ಮಾಡುವ ತೀರ್ಮಾನ ಎನ್.ಎಸ್.ಯು.ಐ ನಿಯೋಗದಿಂದ ಕುಲಪತಿಗಳ ಭೇಟಿ.

ಮಂಗಳೂರು : (ಜು.04) ಮಂಗಳೂರು ವಿಶ್ವವಿದ್ಯಾನಿಲಯ ಕೊಣಾಜೆ ಕ್ಯಾಂಪಸ್ ಲ್ಲಿ 2017 ರಲ್ಲಿ ಲಭಿಸಿದ್ದ ಪ್ರಥಮ ದರ್ಜೆ ಕಾಲೇಜಿಗೆ ಸರಕಾರದ ಅನುಮೋದನೆ ಲಭಿಸಿರುವುದು ಹಾಗೂ ಆರ್ಥಿಕ ಹೊರೆ ಕಡಿಮೆಗೊಳಿಸುವ ಉದ್ದೇಶದಿಂದ ಮುಂದಿನ ಶೈಕ್ಷಣಿಕ ವರ್ಷ ಆ ಕಾಲೇಜನ್ನೇ ಬಂದ್ ಮಾಡಲು ವಿ.ವಿ ತಿರ್ಮಾನಿಸಿರುವುದರಿಂದ ಹಲವಾರು ವಿದ್ಯಾರ್ಥಿಗಳ ಶಿಕ್ಷಣಕ್ಕೆ ದಕ್ಕೆ ತರುವಂತಹ ಕೆಲಸಕ್ಕೆ ವಿ.ವಿ ಕಾರಣವಾಗುತ್ತದೆ ಎಂದು ತಿಳಿದು ಎನ್. ಎಸ್.ಯು.ಐ ಪ್ರಧಾನ ಕಾರ್ಯದರ್ಶಿ ಸವಾದ್ ಸುಳ್ಯರವರ ನೇತೃತ್ವದ ನೀಯೋಗವು ಕುಲಪತಿಗಳನ್ನು ಭೇಟಿ ಮಾಡಿ ಮನವಿಯನ್ನು ಸಲ್ಲಿಸಲಾಯಿತು.

Savad sullia

ಬಳಿಕ ಮಾತನಾಡಿದ ಸವಾದ್ ಸುಳ್ಯ, ವಿ.ವಿ ಯು 2021-22ನೇ ಅವಧಿಗೆ ಪ್ರವೇಶಾತಿ ಸ್ಥಗಿತಗೊಳಿಸಿರುವುದಲ್ಲದೆ, ಮೊದಲ ಹಾಗೂ ದ್ವೀತಿಯ ವರ್ಷವನ್ನು ಈಗಾಗಲೇ ಪೂರ್ಣಗೊಳಿಸಿರುವ ವಿದ್ಯಾರ್ಥಿಗಳನ್ನು ಅವರು ಅಪೇಕ್ಷಿಸುವ ಹತ್ತಿರದ ಕಾಲೇಜುಗಳಿಗೆ ವರ್ಗಾವಣೆ ಮಾಡುವ ಸಂಬಂಧ ವಿ.ವಿ ಚಿಂತನೆ ನಡೆಸಿರುವ ಬಗ್ಗೆಯು ತೀವ್ರವಾಗಿ ಖಂಡಿಸಿದರು.

ವಿ.ವಿ ಕ್ಯಾಂಪಸ್ ನ್ನ ಪ್ರಥಮ ದರ್ಜೆ ಕಾಲೇಜನ್ನು ಬಂದ್ ಮಾಡಲು ತಿರ್ಮಾನಿಸಿರುವುದು ಗ್ರಾಮೀಣ ವಿದ್ಯಾರ್ಥಿಗಳಿಗೆ ಬಹುದೊಡ್ಡ ನಷ್ಟ ಉಂಟಾಗುವುದರಿಂದ ಈ ಕೂಡಲೇ ಸರಕಾರ ಕಾಲೇಜನ್ನು ಮುಂದುವರಿಸಿ ವಿದ್ಯಾರ್ಥಿಗಳ ಶಿಕ್ಷಣಕ್ಕೆ ದಕ್ಕೆ ಉಂಟಾಗದಂತೆ ಸರಕಾರ ಸೂಕ್ತ ಪರಿಹಾರ ಮಾಡಬೇಕಾಗಿದೆ. ಇಲ್ಲವಾದಲ್ಲಿ ದ.ಕ ಜಿಲ್ಲಾ ಎನ್.ಎಸ್.ಯು.ಐ ವತಿಯಿಂದ ಉಗ್ರ ಹೋರಾಟದ ಎಚ್ಚರಿಕೆಯನ್ನ ದ.ಕ ಜಿಲ್ಲಾ ಎನ್.ಎಸ್.ಯು.ಐ ಪ್ರಧಾನ ಕಾರ್ಯದರ್ಶಿ ಸವಾದ್ ಸುಳ್ಯ ನೀಡಿದ್ದಾರೆ.

Savad sullia

ಈ ಸಂದರ್ಭದಲ್ಲಿ ಎನ್.ಎಸ್.ಯು.ಐ ಮಂಗಳೂರು ವಿಶ್ವ ವಿದ್ಯಾನಿಲಯ ಕಾಲೇಜ್ ಅಧ್ಯಕ್ಷರಾದ ಸಿರಾಜ್ ಗುದ್ರು, ಜಿಲ್ಲಾ ಎನ್.ಎಸ್. ಯು.ಐ ಪ್ರಧಾನ ಕಾರ್ಯದರ್ಶಿ ಅಸ್ಟನ್ ಸಿಕ್ವೇರ, ಗುರುದತ್ ಉಪಸ್ಥಿತರಿದ್ದರು.

CATEGORIES
TAGS
Share This

COMMENTS

Wordpress (0)
Disqus ( )
error: Content is protected !!