ಡಿಕೆಶಿ ಪದಗ್ರಹಣ : ವಿಟ್ಲ ಉಪ್ಪಿನಂಗಡಿ ಬ್ಲಾಕ್ ವ್ಯಾಪ್ತಿಯ ಕಾರ್ಯಕರ್ತರ ಭೇಟಿ ಮಾಡಿದ ಕೆಪಿಸಿಸಿ ಉಸ್ತುವಾರಿ ಚಂದ್ರಹಾಸ ಕರ್ಕೇರ.

Dks swearing

ಪುತ್ತೂರು : (ಜೂ.30) ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾಗಿ ಡಿಕೆ ಶಿವಕುಮಾರ್ ನೇಮಕಗೊಂಡ ಹಿನ್ನೆಲೆ ಯಲ್ಲಿ ಅವರ ಪದಗ್ರಹಣ ಕಾರ್ಯಕ್ರಮವು ಜುಲೈ 02 ರಂದು ನಡೆಯಲಿದ್ದು ಈ ನಿಟ್ಟಿನಲ್ಲಿ ರಾಜ್ಯದ ಎಲ್ಲಾ ಬ್ಲಾಕ್ ಮತ್ತು ವಲಯ/ ಪ್ರತಿ ಬೂತ್ ಮಟ್ಟದಲ್ಲಿ ಕಾರ್ಯಕ್ರಮ ಯಶಸ್ವಿಯಾಗಿ ನಡೆಸಲು ಪ್ರತಿ ಬ್ಲಾಕ್ ಗೆ ಕೆಪಿಸಿಸಿ ಯಿಂದ ಉಸ್ತುವಾರಿಗಳನ್ನು ನೇಮಿಸಿದ್ದು ವಿಟ್ಲ ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ಉಸ್ತುವಾರಿಯಾದ ಶ್ರೀ ಚಂದ್ರಹಾಸ ಕರ್ಕೇರ ರವರು ಬ್ಲಾಕ್ ಕಾಂಗ್ರೆಸ್ ವ್ಯಾಪ್ತಿಯ 19 ಪಂಚಾಯತ್ ಗಳಿಗೆ ಭೇಟಿ ನೀಡಿ ಕಾರ್ಯಕ್ರಮದ ಬಗ್ಗೆ ಮಾಹಿತಿ ನೀಡಿ ಯಶಸ್ವಿಗೊಳಿಸುವಂತೆ ಮನವಿ ಮಾಡಿದರು.

Dks swearing
ಈ ಸಂದರ್ಭದಲ್ಲಿ ಕೊಳ್ನಾಡು ಜಿಲ್ಲಾ ಪಂಚಾಯತ್ ಕ್ಷೇತ್ರದ ಸದಸ್ಯರು ಮತ್ತು ಕೆಪಿಸಿಸಿ ಕಾರ್ಯದರ್ಶಿಯಾದ ಎಂ. ಎಸ್. ಮೊಹಮ್ಮದ್, ವಿಟ್ಲ ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಮುರಳಿಧರ ರೈ ಮಠಂತಬೆಟ್ಟು, ಪುತ್ತೂರು ಯುವ ಕಾಂಗ್ರೆಸ್ ಅಧ್ಯಕ್ಷರಾದ ಯು.ಟಿ ತೌಸೀಫ್, ಪುತ್ತೂರು ವಿಧಾನಸಭಾ ಕ್ಷೇತ್ರದ ಸಾಮಾಜಿಕ ಜಾಲತಾಣದ ಉಸ್ತುವಾರಿ ಜಗದೀಶ್ ಕಜೆ, ಕಾಂಗ್ರೆಸ್ ಪಕ್ಷದ ಪ್ರಮುಖರಾದ ಶ್ರಿ ರಾಜೇಶ್ ಬಾಳೆಕಲ್ಲು, ಜಗನ್ನಾಥ್ ಶೆಟ್ಟಿ, ಎಲ್ಯಣ್ಣ ಪೂಜಾರಿ, ಶ್ರೀಮತಿ ಬೇಬಿ, ಅದಂ ಕುಂಞ್ಞ, ಡಾ| ರಾಜಾರಾಂ, ಜಯಪ್ರಕಾಶ್ ಬದಿನಾರು, ಸಮೀರ್, ಮೋನಪ್ಪ ಗೌಡ ಪಮ್ಮನಮಜಲು, ಶಂಶುದ್ದಿನ್ ಅಜ್ಜಿನಡ್ಕ, ರಶೀದ್ ಮುರ, ಬಾಲಕೃಷ್ಣ ಪೂಜಾರಿ ಸೇರಿದಂತೆ ಹಲವು ಸ್ಥಳೀಯ ಜನಪ್ರತಿನಿಧಿಗಳು, ಮುಖಂಡರು ಜತೆಗಿದ್ದರು.

CATEGORIES
TAGS
Share This

COMMENTS

Wordpress (0)
Disqus ( )
error: Content is protected !!