ರಾಮ್ ಸೇನಾ ನೂತನ ಕುಪ್ಪೆಪದವು ಘಟಕ ಉದ್ಘಾಟನೆ.

ಕುಪ್ಪೆಪದವು : (ಜೂ.28) ರಾಮ್ ಸೇನಾ ಕರ್ನಾಟಕ (ರಿ) ಇದರ ವಾಯುಪುತ್ರ ಘಟಕ ಕುಪ್ಪೆಪದವು ಇದರ ಉದ್ಘಾಟನಾ ಸಮಾರಂಭವು ಕುಪ್ಪೆಪದವು ನಾರಾಯಣ ಗುರು ಮಂದಿರದಲ್ಲಿ ನಡೆಯಿತು. ಉದ್ಘಾಟನಾ ಕಾರ್ಯಕ್ರಮದಲ್ಲಿ ರಾಮ್ ಸೇನಾ ಸಂಸ್ಥಾಪಕ ಅಧ್ಯಕ್ಷರಾದ ಪ್ರಸಾದ್ ಅತ್ತಾವರ್ ಹಾಗೂ ರಾಜ್ಯ ಕಾರ್ಯದರ್ಶಿ ಮಂಜುನಾಥ್ ಕುಂದರ್, ರಾಜ್ಯ ಸಂಘಟನಾ ಕಾರ್ಯದರ್ಶಿ ಸಂತೋಷ್ ಶೆಟ್ಟಿ ಓದೂರು, ರಾಮ್ ಸೇನಾ ಜಿಲ್ಲಾ ಗೌರವಾಧ್ಯಕ್ಷರಾದ ಎಂ.ಪಿ. ದಿನೇಶ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪುರುಷೋತ್ತಮ ಆಚಾರ್ಯ ಹಾಗೂ ಕೃಷ್ಣ ಆಸ್ರಣ್ಣರು ಉಪಸ್ಥಿತರಿದ್ದರು.

Ramsena Karnataka

ರಾಮ್ ಸೇನಾ ವಾಯುಪುತ್ರ ಘಟಕ ಕುಪ್ಪೆಪದವು ಇದರ ನೂತನವಾಗಿ ಘೋಷಣೆಗೊಂಡಂತಹ ಪದಾಧಿಕಾರಿಗಳ ವಿವರ ಈ ಕೆಳಗಿನಂತಿದೆ.

Ramsena Karnataka

ಘಟಕದ ಅಧ್ಯಕ್ಷರಾಗಿ ಮನೋಜ್ ಚಂದ್ರಮಜಲ್, ಉಪಾಧ್ಯಕ್ಷರಾಗಿ ವಿನಿತ್ ನೀರಳಿಕೆ, ಕಾರ್ಯದರ್ಶಿಯಾಗಿ ನೀತ್ ರಾಜ್ ಗೆಂದಡ್ಪು, ಪ್ರದಾನ ಕಾರ್ಯದರ್ಶಿಯಾಗಿ ಸಂತೋಷ್ ಕಾಪಿಕಾಡ್, ಸಂಘಟನಾ ಕಾರ್ಯದರ್ಶಿಯಾಗಿ ಚಂದ್ರಹಾಸ್ ಕೋಟ್ಯಾನ್ ಕುಪ್ಪೆಪದವು, ಸಂಘಟನಾ ಕಾರ್ಯದರ್ಶಿ ಶಾಂತಾರಾಮ್ ಕಲ್ಲಾಡಿ, ಗೋ ರಕ್ಷಕ್ ಸೇನಾ ಸಂಚಾಲಕ ಪ್ರವೀಣ್ ಅಟ್ಟೆಪದವು, ಸಾಮಾಜಿಕ ಜಾಲತಾಣ ಪ್ರಮುಖ ಪವನ್ ನೀರಳಿಕೆ, ಗೌರವ ಸಲಹೆಗಾರರಾಗಿ ಐ. ಕೃಷ್ಣ ಅಸ್ರಣ್ಣ ಕುಪ್ಪೆಪದವು, ಸುನಿಲ್ ಕುಪ್ಪೆಪದವು, ವಕ್ತಾರರಾಗಿ ಲಿಂಗಪ್ಪ ಕುಂದರ್ ಅಗರಿ ಜವಾಬ್ದಾರಿ ವಹಿಸಿಕೊಂಡರು.

CATEGORIES
TAGS
Share This

COMMENTS

Wordpress (0)
Disqus ( )
error: Content is protected !!