ಕೊಡಗು ನಾಪೊಕ್ಲು ಬ್ಲಾಕ್ ಉಸ್ತುವಾರಿಯಾಗಿ ಕಾವು ಹೇಮನಾಥ್ ಶೆಟ್ಟಿ ನೇಮಕ.

ಪುತ್ತೂರು : ( ಜೂ.28) ಕಾವು ಹೇಮನಾಥ್ ಶೆಟ್ಟಿ ಯವರನ್ನು ಕೊಡಗು ಜಿಲ್ಲೆಯ ನಾಪೊಕ್ಲು ಬ್ಲಾಕ್ ಉಸ್ತುವಾರಿ ಯಾಗಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ನೇಮಕ ಮಾಡಿ ಆದೇಶಿಸಿದ್ದಾರೆ. ಕರ್ನಾಟಕ ಪ್ರದೇಶ ಕಾಂಗ್ರೆಸ್ ನ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಡಿ.ಕೆ ಶಿವಕುಮಾರ್ ಅವರ ಪದಗ್ರಹಣ ಕಾರ್ಯಕ್ರಮ ಜುಲೈ 2 ರಂದು ನಡೆಯಲಿದೆ. ಕೊರೋನಾ ಕೋವಿಡ್-19 ವೈರಸ್ ಸೋಂಕಿನಿಂದಾಗಿ ಸಾರ್ವಜನಿಕ ಕಾರ್ಯಕ್ರಮ ನಡೆಸಲು ಅಸಾಧ್ಯವಾಗಿರುವುದರಿಂದ ರಾಜ್ಯದಾದ್ಯಂತ ಸ್ಥಳೀಯವಾಗಿ ಎಲ್ಲಾ ಕಾರ್ಯಕರ್ತರು ಪ್ರತಿಜ್ಞೆ ಕಾರ್ಯಕ್ರಮವನ್ನು ಝೂಮ್ ಆಪ್ ಮೂಲಕ ಯಶಸ್ವಿಯಾಗಿ ನಡೆಸಲು ತೀರ್ಮಾನಿಸಿದ್ದಾರೆ.

Kavu Hemanath shetty
ಇದು ಎಷ್ಯಾದಲ್ಲೇ ದಾಖಲೆಯ ಕಾರ್ಯಕ್ರಮ ಆಗಿರುವುದರಿಂದ ಎಲ್ಲಾ ಬ್ಲಾಕ್ ಗಳಿಗೆ ಉಸ್ತುವಾರಿಗಳನ್ನು ನೇಮಕ ಮಾಡಿ ಕಾರ್ಯಕ್ರಮ ಯಶಸ್ವಿಗೊಳಿಸಲು ಕ್ರಮ ತೆಗೆದುಕೊಂಡಿದ್ದಾರೆ. ಅದರಂತೆ ಕೊಡಗು ಜಿಲ್ಲೆಯ ನಾಪೊಕ್ಲು ಬ್ಲಾಕ್ ಗೆ ಪುತ್ತೂರು ಬ್ಲಾಕ್ ಕಾಂಗ್ರೆಸ್ ನ ಮಾಜಿ ಅಧ್ಯಕ್ಷ ಕಾವು ಹೇಮನಾಥ್ ಶೆಟ್ಟಿ ಯವರನ್ನು ಕೆಪಿಸಿಸಿ ಯ ನೂತನ ಕಾರ್ಯಾಧ್ಯಕ್ಷ ಸಲೀಂ ಅಹಮ್ಮದ್ ಶಿಫಾರಸ್ಸಿನಂತೆ ಕೆಪಿಸಿಸಿ ನೂತನ‌ ಅಧ್ಯಕ್ಷ ಡಿ‌.ಕೆ ಶಿವಕುಮಾರ್ ಈ ಆದೇಶವನ್ನು ಮಾಡಿದ್ದಾರೆ.
ಕಾವು ಹೇಮನಾಥ್ ಶೆಟ್ಟಿಯವರು ಈ ಹಿಂದೆ ಮೋಯಿಲಿ ಲೋಕಸಭಾ ಚುನಾವಣೆಯಲ್ಲಿ ಮಡಿಕೇರಿ ಉಸ್ತುವಾರಿಯಾಗಿ ಕಾರ್ಯನಿರ್ವಹಿಸಿದ್ದರು. ಶೆಟ್ಟಿಯವರು ಮಡಿಕೇರಿಯಲ್ಲಿ ತನ್ನ ಮೂಲ ಮನೆಯನ್ನು ಹೊಂದಿದ್ದು, ಅ ಭಾಗದ ಜನರ ಜೊತೆ ನಿಕಟ ಸಂಪರ್ಕ ಹೊಂದಿದ್ದಾರೆ.

CATEGORIES
TAGS
Share This

COMMENTS

Wordpress (0)
Disqus ( )
error: Content is protected !!