ರಿಕ್ಷಾ ಚಾಲಕರಿಗೆ ಆರೋಗ್ಯ ವಿಮಾ, ಪೆನ್ಶನ್  ಸೌಲಭ್ಯ ಕೊಡಲು ಐವನ್ ಡಿಸೋಜಾ ಸರ್ಕಾರ ಕ್ಕೆ ಒತ್ತಾಯ.

Ivan d'souza

ಪುತ್ತೂರು : (ಜೂನ್ 23) ಆಟೋ ರಿಕ್ಷಾ ಚಾಲಕರು ಸಮಾಜದಲ್ಲಿ ಜವಾಬ್ದಾರಿಯುತ ಕರ್ತವ್ಯವನ್ನು ನಿಭಾಯಿಸುವವರು, ಸಮಾಜ ಕಟ್ಟುವವರು, ಸೌಹಾರ್ದತೆ ಬಯಸುವವರು ಅವರ ಬೇಡಿಕೆ ಈಡೇರಿಸಿದರೆ ನಾವು ಜವಾಬ್ದಾರಿಯನ್ನು ನಿಭಾಯಿಸಿದವರಾಗುತ್ತೇವೆ ಎಂದು ವಿಧಾನ ಪರಿಷತ್ ಸದಸ್ಯ ಶ್ರೀ ಐವನ್ ಡಿಸೋಜಾ ರವರು ಹೇಳಿದರು.

ಪುತ್ತೂರು ವಿಟ್ಲ ರಸ್ತೆಯ ಕಬಕ ಜಂಕ್ಷನ್ ನಲ್ಲಿ ತನ್ನ 3 ಲಕ್ಷ ಅನುದಾನದಿಂದ ನಿರ್ಮಾಣಗೊಂಡಿರುವ ಆಟೋ ರಿಕ್ಷಾ ತಂಗುದಾಣವನ್ನು ಉದ್ಘಾಟಿಸಿ ಮಾತನಾಡಿದರು. ನಾನು ವಿಧಾನ ಪರಿಷತ್ ಸದಸ್ಯನಾಗಿ 6ವರ್ಷ ಪೂರೈಸಿ ಕೊನೆಯ ದಿನವಾದ ಇಂದು ಒಂದು ಒಳ್ಳೆಯ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದೇನೆ ಎಂದು ಸಂತಸ ವ್ಯಕ್ತಪಡಿಸಿದರು.

Ivan d'souza

ಆರೋಗ್ಯವಂತರಾಗಿರುವಾಗ ಕಷ್ಟಪಟ್ಟು ದುಡಿದು ಕುಟುಂಬ ಸಾಕುವ ಅಟೋಚಾಲಕರು ತನ್ನ ನಿವೃತ್ತಿ ಕಾಲದಲ್ಲಿ ಸಂಕಷ್ಟದಲ್ಲಿ ಇರಬಾರದು ಎನ್ನುವ ದೃಷ್ಟಿಯಿಂದ ಅವರಿಗೆ ಅರೋಗ್ಯ ವಿಮೆ ಮತ್ತು ನಿವೃತ್ತಿ ವೇತನವನ್ನು ನೀಡಬೇಕೆಂದು ಅಗ್ರಹಿಸಿ ಅಧಿವೇಶನದಲ್ಲಿ ಸುಮಾರು ಒಂದೂವರೆ ಘಂಟೆಗಳ ಕಾಲ ನಿಮ್ಮ ಪರವಾಗಿ ಮಾತನಾಡಿದ್ದೇನೆ ಕೋರೋಣ ಸಂಕಷ್ಟ ಕಾಲದಲ್ಲಿ ನಿಮಗೆ ಆರ್ಥಿಕ ಸಹಾಯ ನೀಡಬೇಕೆಂದು ಮಾನ್ಯ ಮುಖ್ಯಮಂತ್ರಿಗಳಲ್ಲಿ ಆಗ್ರಹಿಸಿದೆ ಸರಕಾರವು ನಿಮಗೆ 5000 ರೂಪಾಯಿ ಸಹಾಯಧನ ಘೋಷಿಸಿದೆ ಇದು ಕೆಲವರಿಗೆ ಸಿಕ್ಕಿದೆ ಎಂದರು.

ಕಬಕ ಆಟೋ ರಿಕ್ಷಾ ಚಾಲಕರು ಸೌಹಾರ್ದತೆಗೆ ಮಾದರಿಯಾಗಿದ್ದಾರೆ : ಕಾವು ಹೇಮನಾಥ್ ಶೆಟ್ಟಿ

Ivan d'souza

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಹೇಮನಾಥ್ ಶೆಟ್ಟಿಯವರು ಪುತ್ತೂರು ಮಂಗಳೂರು ರಸ್ತೆಯ ಕಬಕ ಜಂಕ್ಷನ್ ನಲ್ಲಿ ರಿಕ್ಷಾ ತಂಗುದಾಣ ನಿರ್ಮಿಸಲು ಅನುದಾನ ನೀಡಿದ್ದರು ಅದರ ಕಾಮಗಾರಿ ನಡೆಯುತ್ತಿರುವಾಗ ಕಬಕ ಫ್ರೆಂಡ್ಸ್ ರಿಕ್ಷಾ ಚಾಲಕರು ನಮ್ಮ ವಿಟ್ಲ ರಸ್ತೆಯ ಪಾರ್ಕಿನಲ್ಲಿರುವ ಜೈ ಹಿಂದ್ ಆಟೋ ರಿಕ್ಷಾ ಚಾಲಕ ಮಾಲಕರ ಸಂಘದವರಿಗೂ ರಿಕ್ಷಾ ತಂಗುದಾಣ ನಿರ್ಮಿಸಿ ಕೊಡಲು ನನ್ನಲ್ಲಿ ವಿನಂತಿಸಿದ್ದರು. ಇಲ್ಲಿಯ ಹಿಂದೂ, ಮುಸ್ಲಿಂ ಸೌಹರ್ದತೆಯನ್ನು ಕಂಡು ಸಂತೋಷಗೊಂಡ ನಾನು ವಿಧಾನ ಪರಿಷತ್ ಸದಸ್ಯರಾದ ಐವನ್ ಡಿಸೋಜಾ ರಲ್ಲಿ ಹೇಳಿಕೊಂಡಾಗ ಕೂಡಲೇ ಅದಕ್ಕೆ ಅನುದಾನ ಮಂಜೂರು ಗೊಳಿಸಿದ್ದಾರೆ
ಇಂದು ನಿಮ್ಮೆಲ್ಲರ ಆಶಯದಂತೆ ಈ ಕಾರ್ಯಕ್ರಮ ಉದ್ಘಾಟನೆಗೊಂಡಿದೆ, ಕಬಕ ಪರಿಸರದ ಜನರ ಕಷ್ಟ ಸುಖಗಳಿಗೆ ನೀವು ಭಾಗಿಯಾಗುತ್ತ ಸೌಹಾರ್ದತೆಯನ್ನು ಕಾಪಾಡಿಕೊಂಡು ಬರುವ ಮಹತ್ತರವಾದ ಜವಾಬ್ದಾರಿ ನಿಮ್ಮ ಮೇಲೆ ಇದೆ ಎಂದು ಹೇಳಿದರು ನಗರ ಠಾಣಾ ಇನ್ಸ್ಪೆಕ್ಟರ್ ತಿಮ್ಮಪ್ಪ ನಾಯ್ಕ್ ರವರು ಸಂದರ್ಪೋಜಿತಗವಾಗಿ ಮಾತನಾಡಿದರು.

Ivan d'souza
ವೇದಿಕೆಯಲ್ಲಿ ಚಂದ್ರಶೇಖರ್ ನಾಯ್ಕ್, ಸತೀಶ್ ರೈ ಡಿ. ಕೆ, ಯು. ಲೋಕೇಶ್ ಹೆಗ್ಡೆ, ಲ್ಯಾನ್ಸಿ ಮುಸ್ಕರೇನಸ್, ಜೊಹರಾ ನಿಸಾರ್, ಮುರಳೀಧರ ರೈ ಮಠಂತಬೆಟ್ಟು, ಸಾಬಾ, ವಸಂತ ನೆಕ್ರಾಜೆ, ಜಯಪ್ರಕಾಶ್ ಆಲದಗುಂಡಿ, ಸುಕುಮಾರ್ ಅಂಚನ್, ಉಪಸ್ಥಿತರಿದ್ದರು. ಅನ್ವರ್ ಖಾಸಿಂ,ಹನೀಫ್ ಪುಣ್ಚತ್ತಾರ್, ದಾಮೋದರ್ ಭಂಡಾರ್ಕರ್, ಹನೀಫ್ ಬಗ್ಗುಮೂಲೆ, ಕೆ ಸಿ ಅಶೋಕ್ ಶೆಟ್ಟಿ, ಜಗದೀಶ್ ಕಜೆ, ರೆಹಮಾನ್ ಸಂಪ್ಯ, ಮುಖೇಶ್ ಕೆಮ್ಮಿಂಜೆ, ಎಂ. ಪಿ‌. ಅಬೂಬಕ್ಕರ್, ವಸಂತ ಗೌಡ ಮುಂಗ್ಲಿಮನೆ, ರವಿಪ್ರಸಾದ್ ಶೆಟ್ಟಿ ಮತ್ತಿತರರು ಭಾಗವಹಿಸಿದ್ದರು. ಮೋಹನ್ ಸ್ವಾಗತಿಸಿ, ಚಂದ್ರಶೇಖರ ಗೌಡ ಕೊಡಿಪ್ಪಾಡಿ ಪ್ರಸ್ಥಾವಿಕವಾಗಿ ಮಾತನಾಡಿದರು. ಮಹಾಬಲ ಪೂಜಾರಿ ವಂದಿಸಿದರು. ಮೂಸೆ ಕುಂಞಿ ಕಾರ್ಯಕ್ರಮ ನಿರೂಪಿಸಿದರು.

CATEGORIES
TAGS
Share This

COMMENTS

Wordpress (0)
Disqus ( )
error: Content is protected !!