ಕಾವು ಹೇಮನಾಥ್ ಶೆಟ್ಟಿ ನೇತೃತ್ವದಲ್ಲಿ ನೇತ್ರಾವತಿ ವೀರರಿಗೆ ಸನ್ಮಾನ.

ಮಂಗಳೂರು : (ಮೇ.26) ಬಂಟ್ವಾಳ ತಾಲೂಕಿನ ಪಾಣೆಮಂಗಳೂರು ಸಮೀಪ ನೇತ್ರಾವತಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಕಲ್ಲಡ್ಕದ ನಿಶಾಂತ್ ಎನ್ನುವ ಯುವಕನನ್ನು ಬದುಕಿಸಲು ಅಪಾಯಕಾರಿ ನದಿಗೆ ತನ್ನ ಜೀವದ ಹಂಗು ತೊರೆದು ಹಾರಿ ಅವನನ್ನು ಮೇಲೆತ್ತಿ ಬದುಕಿಸಲು ಪ್ರಯತ್ನಿಸಿದ ಗೂಡಿನ ಬಳಿ ನಿವಾಸಿಗಳಾದ ಸಮೀರ್, ಮಹಮ್ಮದ್, ಝಹೀರ್, ಆರೀಫ್, ತೌಸೀಫ್, ಮುಕ್ತಾರ್, ಮತ್ತು ಮಾಹಿತಿ ನೀಡಿದ ಅಫೀಝ್ ಹಾಗೂ ಇತ್ತೀಚೆಗೆ ರೋಗಿಯೋರ್ವನನ್ನು ಬೆಂಗಳೂರಿಗೆ ತಲುಪಿಸಲು ಮಂಗಳೂರಿನಿಂದ ಅತೀ ವೇಗವಾಗಿ ಆಂಬ್ಯುಲೆನ್ಸ್ ನ್ನು ಚಾಲನೆ ಮಾಡಿದ ಹನೀಫ್ ಎಂಬವರಿಗೆ ಪುತ್ತೂರು ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಕಾವು ಹೇಮನಾಥ್ ಶೆಟ್ಟಿ ನೇತೃತ್ವದಲ್ಲಿ ತನ್ನ ಅಭಿಮಾನಿಗಳು ಹಾಗೂ ಜಾತ್ಯತೀತ ಒಕ್ಕೂಟ ಪುತ್ತೂರು ಇದರ ವತಿಯಿಂದ ಸನ್ಮಾನ ನಡೆಯಿತು.

Hemanath shetty

ಈ ಸಂದರ್ಭದಲ್ಲಿ ಮಾತನಾಡಿದ ಕಾವು ಹೇಮನಾಥ್ ಶೆಟ್ಟಿಯವರು ಕೊರೋನ ಭೀತಿಯಿಂದ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಈ ಪರಿಸ್ಥಿತಿಯಲ್ಲಿ ಮತ್ತು ಈದ್ ಹಬ್ಬವನ್ನು ಆಚರಿಸುವ ದಿನದಂದು ಹಿಂದೂ ಯುವಕನೋರ್ವ ನೀರಿಗೆ ಬಿದ್ದಿರುವುದನ್ನು ತಿಳಿದು ತಮ್ಮ ಜೀವದ ಹಂಗನ್ನು ತೊರೆದು ನೀರಿಗೆ ಹಾರಿ ರಕ್ಷಿಸಲು ಪ್ರಯತ್ನಿಸಿರುವುದು ನಮಗೆ ತುಂಬಾ ಖುಷಿಯಾದ ವಿಷಯ. ಅವನನ್ನು ಬದುಕಿಸುವ ಶತಪ್ರಯತ್ನವನ್ನು ಮಾಡಿದರೂ ಬದುಕದಿರುವುದು ದುರದೃಷ್ಠ ಇಂತ ಯುವಕರಿಂದಾಗಿ ಮನುಷ್ಯತ್ವ ಉಳಿದಿದೆ.

ಕೋಮು ಸಾಮರಸ್ಯ ಕದಡುವವರಿಗೆ ತಕ್ಕ ಉತ್ತರವಾಗಿದೆ. ನಿಮ್ಮ ಇಂತಹ ಅದ್ಭುತ ಕೆಲಸಕ್ಕೆ ಸರಕಾರ ರಾಜ್ಯೋತ್ಸವ ಪ್ರಶಸ್ತಿ ಕೊಡಬೇಕು. ಮತ್ತು ನಿಮಗೆ ಇನ್ನಷ್ಟು ತರಬೇತಿ ನೀಡಿ ಇನ್ನಷ್ಟು ವ್ಯವಸ್ಥಿತವಾಗಿ ಜೀವ ಉಳಿಸುವ ಪ್ರಯತ್ನಕ್ಕೆ ಸಹಕಾರಿಯಾಗಬೇಕು ಎಂದರು. ಎಲ್ಲರಿಗೂ ಶುಭಹಾರೈಸಿದರು. ಹಿರಿಯರಾದ ಕಿಟ್ಟಣ್ಣ ಗೌಡರು ಸಂದರ್ಭೋಚಿತವಾಗಿ ಮಾತನಾಡಿ ಶುಭ ಹಾರೈಸಿದರು. ವಾಗ್ಮಿ, ಯುವ ನಾಯಕ ಇಕ್ಬಾಲ್ ಬಾಳಿಲ ಪ್ರಸ್ತಾವಿಕವಾಗಿ ಮಾತನಾಡಿದರು. ರವಿಪ್ರಸಾದ್ ಶೆಟ್ಟಿ ಬನ್ನೂರು ಸ್ವಾಗತಿಸಿ ವಂದಿಸಿದರು.

Hemanath shetty
ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ್ ಸದಸ್ಯೆ ಶ್ರೀಮತಿ ಅನಿತ ಹೇಮನಾಥ್ ಶೆಟ್ಟಿ,  ಜಿಲ್ಲಾ ಕಾಂಗ್ರೆಸ್ ಕಾರ್ಮಿಕ‌ ಘಟಕದ ಅಧ್ಯಕ್ಷ ಯು.ಲೋಕೇಶ್ ಹೆಗ್ಡೆ, ಪುತ್ತೂರು ಪುರಸಭೆಯ ಮಾಜಿ ಉಪಾಧ್ಯಕ್ಷ ಲ್ಯಾನ್ಸಿ ಮಸ್ಕರೇನಸ್, ನಗರಸಭೆಯ ಸದಸ್ಯರಾದ ಶಕ್ತಿ ಸಿನ್ಹ, ರಾಬಿನ್ ತಾವ್ರೋ, ಉದ್ಯಮಿ ಮುಲಾರ್ ಅಬೂಬಕ್ಕರ್, ನಗರಸಭೆಯ ಮಾಜಿ ಸದಸ್ಯರಾದ ಅನ್ವರ್ ಖಾಸಿಂ, ಮುಖೇಶ್ ಕೆಮ್ಮಿಂಜೆ, ಕೆಮ್ಮಿಂಜೆ ಶಣ್ಮುಖ‌ ಸುಬ್ರಹ್ಮಣ್ಯದ ವ್ಯವಸ್ಥಾಪನಾ ಸಮಿತಿಯ ಮಾಜಿ ಅಧ್ಯಕ್ಷ ಕೇಶವ ಬೆದ್ರಳ, ಕಾರ್ಮಿಕ ಘಟಕದ ಪುತ್ತೂರು ಬ್ಲಾಕ್ ಅಧ್ಯಕ್ಷ ಕೊರಗಪ್ಪ ಗೌಡ, ಕಾರ್ಮಿಕ ಯುವಕ‌ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಗಳಾದ ಹನೀಫ್ ಪುಣ್ಚತ್ತಾರ್, ರೆಹಮಾನ್ ಸಂಪ್ಯ, ಕಾರ್ಮಿಕ ಘಟಕದ ರಾಜ್ಯ ಕಾರ್ಯದರ್ಶಿ ಹನೀಫ್ ಬಗ್ಗು ಮೂಲೆ, ಹನೀಫ್ ಕೂರ್ನಡ್ಕ, ಅಚ್ಚು ಕೆಮ್ಮಾಯಿ, ಕೆಮ್ಮಾಯಿ ವಿಷ್ಣುಮೂರ್ತಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ‌ ಅಧ್ಯಕ್ಷ ನಾಗೇಶ್ ಆಚಾರ್ಯ, ಸ್ಕೇಲ್ ರಜಾಕ್, ಅಶ್ವಿನಿ ಚಂದ್ರಶೇಖರ್, ಕಾಂಗ್ರೆಸ್ ಸೋಶಿಯಲ್ ಮೀಡಿಯಾದ ಜಗದೀಶ್ ಕಜೆ, ಮೇಘನ್ ಶೆಟ್ಟಿ, ಜಾಬೀರ್ ಬೀಟಿಗೆ, ಉಕ್ಕಾಸ್ ಬೀಟಿಗೆ, ಷರೀಫ್ ಬಲ್ನಾಡ್, ಬಶೀರ್ ಚಾಂದ್ ಸಯ್ಯದ್ ಕಬಕ ಇತರರು ಉಪಸ್ಥಿತರಿದ್ದರು.

CATEGORIES
TAGS
Share This

COMMENTS

Wordpress (0)
Disqus ( )
error: Content is protected !!