ಸೋಷಿಯಲ್ ಡೆಮಾಕ್ರಟಿಕ್ ಆಟೋ ಯುನಿಯನ್‌ ವತಿಯಿಂದ ಚಾಲಕರ ಪರಿಹಾರ ಧನದ ಸೌಲಭ್ಯಕ್ಕಾಗಿ ಉಚಿತ ಸೇವೆ.

ಪುತ್ತೂರು : (ಮೇ.26) ದಿನಾಂಕ 25/05/2020 ಸೋಮವಾರ ದಂದು ಸೋಷಿಯಲ್ ಡೆಮಾಕ್ರಟಿಕ್ ಆಟೋ ಯುನಿಯನ್‌ ಪುತ್ತೂರು ಘಟಕದ ವತಿಯಿಂದ ಕರ್ನಾಟಕ ಸರ್ಕಾರದ ಆಟೋ ಮತ್ತು ಟ್ಯಾಕ್ಸಿ ‌ಚಾಲಕರಿಗೆ ಘೋಷಣೆ ಮಾಡಿರುವ 5000 ₹ ಪರಿಹಾರ ಯೋಜನೆಯನ್ನು ಆನ್ಲೈನ್ ಮೂಲಕ ಉಚಿತವಾಗಿ ಅರ್ಜಿ ಭರ್ತಿ ಮಾಡುವ ಸೇವೆಯನ್ನು ಎಸ್.ಡಿ.ಟಿ.ಯು ಅಧ್ಯಕ್ಷರಾದ ಹಮೀದ್ ಸಾಲ್ಮರ ಉದ್ಘಾಟಿಸಿದರು. ಈ ಉಚಿತ ಕಾರ್ಯಗಾರವು ದಿನಾಂಕ 25/27/28 ರಂದು ಮೂರು ದಿನಗಳ ಕಾಲ ನಡೆಯಲಿದೆ.

Hameed salmara
ಕಾರ್ಯಕ್ರಮದ ಉದ್ಘಾಟನಾ ಸಮಾರಂಭದಲ್ಲಿ ಪುತ್ತೂರು ವಿಧಾನಸಭಾ ಕ್ಷೇತ್ರದ ಅದ್ಯಕ್ಷರಾದ ಕೆ.ಎ ಸಿದ್ದೀಕ್‌, ಕೂರ್ನಡ್ಕ ವಲಯಾದ್ಯಕ್ಷರಾದ ಉಮ್ಮರ್ ಕೂರ್ನಡ್ಕ ಮುಖ್ಯ ಅತಿಥಿಯಾಗಿ ಭಾಗವಹಿಸಿದರು. ಹಾಗೂ ಎಸ್.ಡಿ.ಎ.ಯು ಕಾರ್ಯದರ್ಶಿಗಳಾದ‌ ಆಸಿಫ್ ಮುಕ್ವೆ, ಎಸ್.ಡಿ.ಪಿ.ಐ ಪುತ್ತೂರು ವಿಧಾನಸಭಾ ಕ್ಷೇತ್ರದ ಕಾರ್ಯದರ್ಶಿಗಳಾದ‌ ಅಶ್ರಫ್ ಬಾವು, ಎಸ್.ಡಿ.ಟಿ.ಯು ಕಾರ್ಯದರ್ಶಿಗಳಾದ ಕೆ.ಎಸ್ ಉಮ್ಮರ್ ಕೂರ್ನಡ್ಕ, ಅಶ್ರಫ್ ಪರ್ಲಡ್ಕ, ಎಸ್.ಡಿ.ಟಿ.ಯು ಬಾತಿಷ ಬಡಕ್ಕೋಡಿ, ಎಸ್.ಡಿ.ಟಿ.ಯು ಉಮ್ಮರ್ ‌ಸಂಪ್ಯ ಮೊದಲಾದವರು ಉಪಸ್ಥಿತರಿದ್ದರು. ಪುತ್ತೂರು ತಾಲೂಕಿನ ಸರ್ವ ಆಟೋ ಮತ್ತು ಟ್ಯಾಕ್ಸಿ ಚಾಲಕರು ಈ ಉಚಿತ ಸೇವೆಯನ್ನು ಪಡೆಯುವಂತೆ ಪತ್ರಿಕಾ ಪ್ರಕಟಣೆಯಲ್ಲಿ ವಿನಂತಿಸಿದ್ದಾರೆ.

CATEGORIES
TAGS
Share This

COMMENTS

Wordpress (0)
Disqus ( )
error: Content is protected !!