ಜನರನ್ನು ಅವರವರ ಊರಿಗೆ ತಲುಪಿಸಿ ಬಳಿಕ ಲಾಕ್ ಡೌನ್ ಮುಂದುವರಿಸಿ : ಎಚ್. ಮಹಮ್ಮದ್ ಆಲಿ

ಮಂಗಳೂರು : (ಏ.14) ಕೊರೋನ ರೋಗ ಹರಡದಂತೆ ಕಳೆದ 21ದಿನಗಳಿಂದ ಇಡೀ ದೇಶವೇ ಲಾಕ್ ಡೌನ್ ಗೆ ತುತ್ತಾಗಿದೆ. ದೇಶದ ಜನತೆಗೆ ಯಾವುದೇ ಮುನ್ಸೂಚನೆ ನೀಡದೆ ಧಿಡೀರನೆ ಪ್ರಧಾನಿ ಮೋದಿಯವರು ಲಾಕ್ ಡೌನ್ ಘೋಷಿಸಿರುವುದರಿಂದ ದೇಶದ ಜನತೆ ಸಂಕಷ್ಟಕ್ಕೆ ಸಿಲುಕಿ ಒದ್ದಾಡ್ತಿದ್ದಾರೆ. ಬೇರೆ ಬೇರೆ ರಾಜ್ಯಗಳಲ್ಲಿ ಹಾಗು ರಾಜ್ಯದ ಬೇರೆ ಕಡೆಗಳಲ್ಲಿ ಈ ಲಾಕ್ ಡೌನ್ ನಿಂದಾಗಿ ತಮ್ಮ ತಮ್ಮ ಊರಿಗೆ ಬರಲಾಗದೆ ಸಿಲುಕಿ ಕೊಂಡಿರುವ ಕಾರ್ಮಿಕರು, ಹೋಟೆಲ್ ಇನ್ನಿತರ ಕಡೆ ಕೆಲಸ ನಿರ್ವಹಿಸಿತ್ತಿರುವವರು, ಇತರ ಉದ್ಯೋಗಸ್ಥರು ಊರಿಗೆ ಬರಲಾಗದೆ ಸಂಕಷ್ಟ ಅನುಭವಿಸುತ್ತಿದ್ದಾರೆ. ಇದರಲ್ಲಿ ಹಲವಾರು ಜನರು ಕುಡಿಯಲು ನೀರು ತಿನ್ನಲು ಅನ್ನವಿಲ್ಲದೆ ಬದುಕಲು ಒದ್ದಾಡ್ತಿದ್ದಾರೆ.

Mohammad ali

ಲಾಕ್ ಡೌನ್ ನಿಂದಾಗಿ ಸಿಲುಕಿ ಜನರು ಬದುಕಲು ಕಷ್ಟಪಡುತಿದ್ದರು ಇವರ ಬಗ್ಗೆ ಕೇಂದ್ರ ಸರಕಾರವಾಗಲಿ, ರಾಜ್ಯಸರಕಾರ ವಾಗಲಿ ಕಿಂಚಿತ್ತು ಗಮನ ಹರಿಸದೆ ಕ್ರೌರ್ಯ ಮೆರೆತಿದೆ. ಹೊರದೇಶ ದಲ್ಲಿದ್ದ ರಾಜಕಾರಣಿಗಳ ಮತ್ತು ಉದ್ಯಮಿಗಳ ಮಕ್ಕಳನ್ನು ದೇಶಕ್ಕೆ ಕರೆತರಲು ವಿಶೇಷ ವಿಮಾನದ ವ್ಯವಸ್ಥೆಮಾಡಿರುವ ಕೇಂದ್ರ ಸರಕಾರ, ಅದೇ ಕಾಳಜಿಯನ್ನು ಜನಸಾಮಾನ್ಯರಲ್ಲೂ ತೋರಿಸಲಿ. ಪ್ರಧಾನಿ ಮೋದಿಯವರು ವಾರಕ್ಕೊಮ್ಮೆ ಟಿ. ವಿ ಯಲ್ಲಿ ಬಂದು ಜನರಿಗೆ ಪುಕ್ಕಟೆ ಟಾಸ್ಕ್ ಕೊಡುತ್ತಿದ್ದಾರೆ, ಹೊರತು ಜನರ ಸಂಕಷ್ಟಕ್ಕೆ ನೆರವಾಗುವ ಯಾವುದೇ ಯೋಜನೆ ಮಾಡ್ತಿಲ್ಲ ಈ ರೀತಿ ಪ್ರಧಾನಿ ಮೋದಿಯವರು ಜನವಿರೋಧಿ ನಡೆ ತೋರಿಸುತ್ತಿದ್ದಾರೆ. ಪ್ರಧಾನಿಯವರು ಪುನಃ ಮೇ 3ರ ವರೆಗೆ ಲಾಕ್ ಡೌನ್ ವಿಸ್ತರಿಸಿರುವ ಘೋಷಣೆ ಮಾಡಿರುತ್ತಾರೆ ಈ ಘೋಷಣೆ ಮಾಡುವ ಮೊದಲು ಜನರು ಎಲ್ಲೆಲ್ಲಿ ಸಿಲುಕಿ ಕಷ್ಟ ಪಡುತ್ತಿದ್ದಾರೆ ಅವರನ್ನು ಅವರವರ ಊರಿಗೆ ತಲುಪಿಸುವ ವ್ಯವಸ್ಥೆ ಮಾಡಿ ಮತ್ತೆ ಲಾಕ್ ಡೌನ್ ವಿಸ್ತರಣೆ ಮಾಡಬೇಕಿತ್ತು.56ಇಂಚಿನ ಎದೆಯ ಕಲ್ಲುಹೃದಯವಿರುವ ಇವರಿಗೆ ಎಲ್ಲಿ ಗೊತ್ತಾಗುತ್ತೆ ಅಸಾಯಕರ ಸಂಕಷ್ಟ.

Ashwini studio

 

ಕಳೆದ 21ದಿನಗಳಿಂದ ಹೇಗೋ ಒದ್ದಾಡಿ ಬದುಕಿರುವ ಈ ಜನರು ಲಾಕ್ ಡೌನ್ ಮುಂದುವರಿದರೆ ಅನ್ನ ನೀರಿಲ್ಲದೆ ಸಾಯುವುದಂತು ಗ್ಯಾರೆಂಟಿ. ಸರಕಾರದ ಜನವಿರೋಧಿ ನೀತಿಯಿಂದ ಕೊರೊನ ಗಿಂತ ಹಸಿವಿನಿಂದ ಸಾಯೋ ಸಂಖ್ಯೆ ಜಾಸ್ತಿ ಆಗೋದಂತು ಖಂಡಿತ. ಈಗಾಗಲೇ ಪ್ರಧಾನಿ ಯವರ ತವರು ರಾಜ್ಯಾವಾದ ಗುಜರಾತ್ ನಲ್ಲಿ ಜನರು ಲಾಕ್ ಡೌನ್ ವಿರುದ್ಧ ರೊಚ್ಚಿಗೆದ್ದು ಬೀದಿಗಿಳಿದು ಪ್ರತಿಭಟನೆ ನಡೆಸಿರುತ್ತಾರೆ.

ಆದುದರಿಂದ ಕೇಂದ್ರ ಹಾಗು ರಾಜ್ಯ ಸರಕಾರ ಲಾಕ್ ಡೌನ್ ನಲ್ಲಿ ಸಿಲುಕಿಕೊಂಡಿರುವ ಜನರನ್ನು ಅವರವರ ಊರಿಗೆ ತಲುಪಿಸಿ “ಕ್ವಾರೆಂಟೈನ್” ನಲ್ಲಿ ಇಟ್ಟು ಬಳಿಕ ಲಾಕ್ ಡೌನ್ ಮುಂದುವರಿಸಲು ಆದೇಶ ಮಾಡಬೇಕಾಗಿ ಜನತೆಯ ಪರವಾಗಿ ಸರಕಾರಗಳನ್ನು ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಎಚ್. ಮಹಮ್ಮದ್ ಆಲಿ ಆಗ್ರಹಿಸಿದ್ದಾರೆ.

CATEGORIES
TAGS
Share This

COMMENTS

Wordpress (0)
Disqus ( )
error: Content is protected !!