APL ಕಾರ್ಡ್ ದಾರರಿಗೂ ರೇಷನ್ ನೀಡಲು ಸರಕಾರ ಕ್ರಮ ಕೈಗೊಳ್ಳಬೇಕು : ಎಚ್. ಮಹಮ್ಮದ್ ಆಲಿ

ಪುತ್ತೂರು : (ಏ.08) ಕೊರೊನಾ ಲಾಕ್ ಡೌನ್ ನಿಂದಾಗಿ ಜನರಿಗೆ ಸರಿಯಾಗಿ ದಿನಪಯೋಗಿ ವಸ್ತುಗಳು ಸಿಗದೆ ಸಂಕಷ್ಟ ಉಂಟಾಗಿರುತ್ತದೆ. BPL ಕಾರ್ಡ್ ದಾರರಿಗೆ ಈಗಾಗಲೇ ಕೇವಲ ಅನ್ನಭಾಗ್ಯದ ಅಕ್ಕಿಯನ್ನು ಸರಕಾರ ಬಿಡುಗಡೆಗೊಳಿಸಿದೆ ಅದರಲ್ಲೂ ಒಬ್ಬರಿಗೆ 7kg ಅಕ್ಕಿಯ ಬದಲು 5ಕೆಜಿ ಅಂದ್ರೆ 2kg ಕಡಿತಗೊಳಿಸಿ ಬಿಡುಗಡೆಗೊಳಿಸಿದೆ. ಲಾಕ್ ಡೌನ್ ಆಗಿ ಇಂದಿಗೆ 14 ದಿನಗಳು ಕಳೆದರೂ ಕೇಂದ್ರಸರಕಾರ ಘೋಷಿಸಿದ ಯಾವುದೇ ಸವಲತ್ತುಗಳು ಈವರೆಗೂ ಜನರಿಗೆ ತಲುಪಿಲ್ಲ. ಸಿದ್ದರಾಮಯ್ಯ ಸರಕಾರದ ಬಡವರಿಗೆ ಉಚಿತ ಅಕ್ಕಿನೀಡುವ ಯೋಜನೆಯ ಸಂದರ್ಭದಲ್ಲಿ APL ಕಾರ್ಡ್ ಹೊಂದಿರುವ ಮಧ್ಯಮ ವರ್ಗದವರಿಗೂ ರಿಯಾಯಿತಿ ದರದಲ್ಲಿ ಅಕ್ಕಿ ನೀಡುವ ಕಾರ್ಯಕ್ರಮ ಹಾಕಿಕೊಂಡಿದ್ದರು.

Mohammad ali
APL ಕಾರ್ಡ್ ದಾರರು ಆಹಾರಇಲಾಖೆಯಲ್ಲಿ “Willing” (ಒಪ್ಪಿಗೆ ) ನೋಂದಣಿ ಮಾಡಿದವರಿಗೆ kg ಗೆ ರೂ. 15 ರಂತೆ ತಿಂಗಳಿಗೆ 10kg ಕೊಡುವ ಕಾರ್ಯಕ್ರಮವಿತ್ತು. ಈ ಯೋಜನೆಯಲ್ಲಿ ಕೆಲವೇ ಕೆಲವು APL ಕಾರ್ಡ್ ದಾರರು ಆಹಾರ ಇಲಾಖೆಯಲ್ಲಿ ನೋಂದಣಿ ಮಾಡಿಸಿ ಈಗಲೂ ರಿಯಾಯಿತಿ ದರದ ಅಕ್ಕಿ ಪಡೆಯುತ್ತಿದ್ದಾರೆ. ಈಗ ಲಾಕ್ ಡೌನ್ ಸಂದರ್ಭದಲ್ಲಿ APL ಕಾರ್ಡ್ ಹೊಂದಿರುವ ಮಧ್ಯಮ ವರ್ಗದವರು ಬಹಳ ಸಂಕಷ್ಟ ಎದುರಿಸುತ್ತಿದ್ದಾರೆ. ಈಗ ಅವರಿಗೆ Willing ನೋಂದಣಿ ಮಾಡಲು ಅವಕಾಶ ಇಲ್ಲದಿದ್ದುದರಿಂದ ಮಧ್ಯಮವರ್ಗದವರ ಹಿತದೃಷ್ಟಿ ಇಟ್ಟುಕೊಂಡು Willing ನೋಂದಣಿ ಹೊರತುಪಡಿಸಿ ಎಲ್ಲಾ APL ಕಾರ್ಡ್ ಹೊಂದಿದವರಿಗೆ ರಿಯಾಯಿತಿ ದರದಲ್ಲಿ ಅಕ್ಕಿ ಹಾಗು ದವಸಧಾನ್ಯಗಳನ್ನು ಬಿಡುಗಡೆಗೊಳಿಸಲು ಮುಂದಾಗಬೇಕೆಂದು ಹಾಗು BPL ಕಾರ್ಡ್ ದಾರರಿಗೆ ಕೇವಲ ಅಕ್ಕಿಯನ್ನು ಮಾತ್ರ ಬಿಡುಗಡೆ ಗೊಳಿಸಿದ್ದು ಅವರಿಗೂ ಗೋಧಿ ಮತ್ತು ದವಸಧಾನ್ಯಗಳನ್ನು ರೇಷನ್ ಅಂಗಡಿಗಳ ಮೂಲಕ ವಿತರಣೆ ಮಾಡಲು ಯೋಜನೆ ಹಾಕಿಕೊಳ್ಳಬೇಕೆಂದು ರಾಜ್ಯದ ಮುಖ್ಯಮಂತ್ರಿಗಳನ್ನು ಈ ಮೂಲಕ ಆಗ್ರಹಿಸುತ್ತೇನೆ ಹಾಗೂ ಈ ಕುರಿತು ಸರಕಾರದ ಗಮನಸೆಳೆಯಲು ಜಿಲ್ಲೆಯ ಉಸ್ತುವಾರಿ ಸಚಿವರು ಮತ್ತು ಜಿಲ್ಲೆಯ ಎಲ್ಲಾ ಶಾಸಕರಲ್ಲಿ ಮನವಿ ಮಾಡ್ಕೊಳ್ಳುತ್ತಿದ್ದೇನೆ ಎಂದು ಆರ್ಯಾಪು ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಎಚ್. ಮಹಮ್ಮದ್ ಆಲಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

CATEGORIES
TAGS
Share This

COMMENTS

Wordpress (0)
Disqus ( )
error: Content is protected !!