ಪ್ರಸಾದ್ ಅತ್ತಾವರ್ ನೇತೃತ್ವದ ರಾಮ್ ಸೇನಾದಿಂದ ಹಿರಿಯ ನಟರಿಗೆ ನೆರವು.

Ram sena

ಮಂಗಳೂರು : (ಏ.15) ರಾಮ್ ಸೇನಾ(ರಿ) ಕರ್ನಾಟಕ ಇದರ ವತಿಯಿಂದ ಬೆಂಗಳೂರು ನಗರದಲ್ಲಿ 25 ಕನ್ನಡ ಚಲನಚಿತ್ರ ಹಿರಿಯ ಹಾಗೂ ಪೋಷಕ ನಟರಿಗೆ ದಿನಬಳಕೆಯ ವಸ್ತುಗಳನ್ನು ವಿತರಿಸಲಾಯಿತು. ರಾಮ್ ಸೇನಾ (ರಿ) ಕರ್ನಾಟಕ ಇದರ ಸಂಸ್ಥಾಪಕ ಅಧ್ಯಕ್ಷರಾದ ಪ್ರಸಾದ್ ಅತ್ತಾವರ, ಸಚಿನ್ ದಳವಾಯಿ, ಗೋಪಿನಾಥ್, ಶ್ಯಾಮ್ ಸುಂದರ್ ಮುಂತಾದವರಿಂದ

Prasad attavar

ಹಾಸ್ಯನಟ ಟೆನ್ನಿಸ್ ಕೃಷ್ಣ ನೇತೃತ್ವದಲ್ಲಿ ಹಿರಿಯ ನಟ ಉಮೇಶ್ ಸೇರಿದಂತೆ 25 ಕ್ಕೂ ಮಿಕ್ಕಿ ಪೋಷಕ ಕಲಾವಿದರಿಗೆ ದಿನಬಳಕೆಯ ದಿನಸಿಯನ್ನು ವಿತರಿಸಲಾಯಿತು. ರಾಮ್ ಸೇನಾ ವತಿಯಿಂದ ಮಂಗಳೂರು ಸೇರಿದಂತೆ ಈಗಾಗಲೇ ಹಲವು ಜಿಲ್ಲೆಗಳಲ್ಲಿ ದಿನನಿತ್ಯ ಕೂಲಿ ಕಾರ್ಮಿಕರಿಗೆ ಹಾಗೂ ಬಡವರಿಗೆ ಎರಡು ಹೊತ್ತಿನ ಊಟದ ವ್ಯವಸ್ಥೆಯನ್ನು ಕಲ್ಪಿಸಿರುವುದನ್ನು ಇಲ್ಲಿ ಸ್ಮರಿಸಬಹುದಾಗಿದೆ.

CATEGORIES
TAGS
Share This

COMMENTS

Wordpress (0)
Disqus ( )
error: Content is protected !!