ಲಾಕ್ ಡೌನ್ ಹಿನ್ನಲೆ ಶುಕ್ರವಾರ 10 ಕುಟುಂಬಗಳಿಗೆ ಆಹಾರಪದಾರ್ಥ ಪೂರೈಸಿದ ಜನತೆ ಸೇವಾ ಟ್ರಸ್ಟ್.

ಪುತ್ತೂರು : (ಮಾ.28) ಕೊರೋನಾ ವೈರಸ್ ನ ತೀವ್ರತೆ ದಿನೇ ದಿನೇ ಹೆಚ್ಚಾಗುತ್ತಿದ್ದು ದುರ್ಬಲ ವರ್ಗದ ಜನ ಅಗತ್ಯ ಆಹಾರ ಪದಾರ್ಥಗಳಿಗೆ ಕಷ್ಟಪಡುತ್ತಿದ್ದಾರೆ ರಾಜ್ಯ ಸರಕಾರ ಕಠಿಣ ಕಾನೂನು ಜಾರಿಗೆ ತಂದ್ದಿದ್ದು ಸರಕಾರ ನೀಡುವ ಪಡಿತರವು ಬಡವರಿಗೆ ಇನ್ನು ತಲುಪಿಲ್ಲದೆ ಇರುವ ಸಂದರ್ಭದಲ್ಲಿ ಪುತ್ತೂರಿನ “ಜನತೆ ಸೇವಾ ಟ್ರಸ್ಟ್” ಉಚಿತ ಆಹಾರ ಪದಾರ್ಥಗಳನ್ನು ವಿತರಣೆ ಮಾಡುತ್ತಿದ್ದು, ಮಾರ್ಚ್ 27 ಶುಕ್ರವಾರ ಪುತ್ತೂರು ತಾಲೂಕಿನ ಕೋಡಿಂಬಾಡಿ

Janathe seva trust

ಗ್ರಾಮ ಪಂಚಾಯತ್ ವ್ಯಾಪ್ತಿಯ ಬದಿನಾರು ಕಾಲನಿಯಲ್ಲಿ ಸುಮಾರು 10 ಕುಟುಂಬಗಳಿಗೆ ಅಗತ್ಯ ಆಹಾರ ಪದಾರ್ಥಗಳಾದ ಅಕ್ಕಿ, ಬೆಳೆ, ಉಪ್ಪು, ಉಪ್ಪಿನಕಾಯಿಯನ್ನು ವಿತರಿಸಿದರು. ಜನತೆ ಸೇವಾ ಟ್ರಸ್ಟ್ ನ ಜೊತೆ ಸಾಥ್ ನೀಡಿದ ಕೋಡಿಂಬಾಡಿ ಗ್ರಾಮ ಪಂಚಾಯತ್ ಗ್ರಾಮ ಕಾರಣೀಕದ ಚಂದ್ರ ನಾಯಕ್ ಕಾಲನಿ ನಿವಾಸಿಗಳಲ್ಲಿ ಕೊರೋನಾ ವೈರಸ್ ಬಗ್ಗೆ ಜಾಗೃತಿ ಮೂಡಿಸಿದರು. ಈ ಸಂದರ್ಭದಲ್ಲಿ ಜನತೆ ಸೇವಾ ಟ್ರಸ್ಟ್ ನ ಪ್ರಮುಖರಾದ ಜಗದೀಶ್ ಕಜೆ, ನಿಶಾದ್ ಡಿ ಕೆ, ತೇಜ ಕುಮಾರ್, ಉಬೈದ್ ಉಪಸ್ಥಿತರಿದ್ದರು.

CATEGORIES
TAGS
Share This

COMMENTS

Wordpress (0)
Disqus ( )
error: Content is protected !!