ಕೊರೊನಾ ವೈರಸ್ ಭೀತಿ : ಮುಂದಕ್ಕೆ ಹೋದ NEET ಪರೀಕ್ಷೆ

ನವದೆಹಲಿ : (ಮಾ.28) ಡೆಡ್ಲಿ ಕೊರೊನಾ ವೈರಸ್ ಸೋಂಕನ್ನು ತಡೆಗಟ್ಟಲು ವಿಶ್ವದ ಹಲವು ರಾಷ್ಟ್ರಗಳು ಲಾಕ್ ಡೌನ್ ಮಂತ್ರವನ್ನು ಜಪಿಸುತ್ತಿವೆ. ಭಾರತ ಕೂಡ ಏಪ್ರಿಲ್ 14 ರವರೆಗೆ ಲಾಕ್ ಡೌನ್ ಆಗಿರಲಿದೆ. ಪರಿಣಾಮ, NEET ಪರೀಕ್ಷೆ ಮುಂದಕ್ಕೆ ಹೋಗಿವೆ. ಮೇ 3 ರಂದು ನಡೆಯಬೇಕಿದ್ದ ನ್ಯಾಷನಲ್ ಎಲಿಜಿಬಿಲಿಟಿ ಎಂಟ್ರೆನ್ಸ್ ಟೆಸ್ಟ್ – ಅಂಡರ್ ಗ್ರ್ಯಾಜುಯೇಟ್ (NEET UG) 2020 ಪರೀಕ್ಷೆಯನ್ನು ಮೇ ಕೊನೆಯ ವಾರದವರೆಗೆ ಮುಂದೂಡಲಾಗಿದೆ. ಲಾಕ್ ಡೌನ್ ಬಳಿಕ ಪರಿಸ್ಥಿತಿಯನ್ನು ಅವಲೋಕಿಸಿ ಅಡ್ಮಿಟ್ ಕಾರ್ಡ್ ವಿತರಿಸುವ ದಿನಾಂಕ ಮತ್ತು ಪರೀಕ್ಷೆಯ ದಿನಾಂಕವನ್ನು ನಿಗದಿಗೊಳಿಸಲಾಗುತ್ತದೆ ಎಂದು ರಾಷ್ಟ್ರೀಯ ಪರೀಕ್ಷೆ ಸಂಸ್ಥೆ ತಿಳಿಸಿದೆ.

Ramesh pokriyal

ಕೋವಿಡ್-19 ನಿಂದಾಗಿ JEE (ಜಾಯಿಂಟ್ ಎಂಟ್ರೆನ್ಸ್ ಎಕ್ಸಾಂ) ಮುಖ್ಯ ಪರೀಕ್ಷೆ ಕೂಡ ಪೋಸ್ಟ್ ಪೋನ್ ಆಗಿದೆ. ಕೊರೊನಾ ವೈರಸ್ ನಿಂದ ಪೋಷಕರು ಮತ್ತು ವಿದ್ಯಾರ್ಥಿಗಳು ಎದುರಿಸುತ್ತಿರುವ ಸಂಕಷ್ಟಗಳನ್ನು ಗಮನದಲ್ಲಿ ಇಟ್ಟುಕೊಂಡು ಪರೀಕ್ಷೆಗಳನ್ನು ಮುಂದೂಡಲಾಗಿದೆ.

CATEGORIES
TAGS
Share This

COMMENTS

Wordpress (0)
Disqus ( )
error: Content is protected !!