ಕೊರೋನಾ ಎಫೆಕ್ಟ್ : ಬಡ ಕಾರ್ಮಿಕರ ಮುಖದಲ್ಲಿ ಮಂದಹಾಸ ಮೂಡಿಸಿದ “ಜನತೆ ಸೇವಾ ಟ್ರಸ್ಟ್”
ಪುತ್ತೂರು : ( ಮಾ. 25) ಕೊರೋನಾ ಸೊಂಕು ತಡೆಗಟ್ಟುವ ನಿಟ್ಟಿನಲ್ಲಿ ರಾಜ್ಯ ಸರಕಾರ ರಾಜ್ಯಾದ್ಯಂತ ಕರ್ಫ್ಯೂ ಜಾರಿಗೊಳಿಸಿರುವುದರ ಪರಿಣಾಮ ಆಹಾರ ವಸ್ತುಗಳ ಖರೀದಿಗೆ ತುಂಬಾ ಸಂಕಷ್ಟದಲ್ಲಿರುವ ಬಡ ಕೂಲಿ ಕಾರ್ಮಿಕ ವರ್ಗದ ಜನರಿಗೆ ಅಗತ್ಯ ಆಹಾರ ಪದಾರ್ಥಗಳನ್ನು ಪುತ್ತೂರಿನ “ಜನತೆ ಸೇವಾ ಟ್ರಸ್ಟ್”

ಕೋಡಿಂಬಾಡಿ ಅರ್ಬಿ ಎಂಬಲ್ಲಿ ಆಹಾರ ಪದಾರ್ಥ ವಿತರಣೆ
ಪುತ್ತೂರಿನ ಅಸುಪಾಸಿನ ಬಡವರಿಗೆ ನೀಡುತ್ತಿದ್ದಾರೆ. “ಜನತೆ ಸೇವಾ ಟ್ರಸ್ಟ್” ಇಂದು ಮಾರ್ಚ್ 25ನೇ ಬುಧವಾರ ಪುತ್ತೂರು ತಾಲೂಕಿನ ಕೋಡಿಂಬಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಅರ್ಬಿ ಎಂಬಲ್ಲಿ ಗುಡಿಸಲಿನಲ್ಲಿ ವಾಸಿಸುವ ಬಡ ಕಾರ್ಮಿಕರಾದ ಕರಿಯಪ್ಪ ಪೂಜಾರಿ, ಬೇಬಿ, ಸುಧಾ ಎಂಬ ಸಹೋದರ- ಸಹೋದರಿಯರಿಗೆ,

ಪುತ್ತೂರಿನ ಪಡೀಲ್ ಎಂಬಲ್ಲಿ ಆಹಾರ ಪದಾರ್ಥ ವಿತರಣೆ
ಮತ್ತು ಪುತ್ತೂರು ನಗರ ವ್ಯಾಪ್ತಿಯ ಪಡೀಲ್ ಎಂಬಲ್ಲಿ ವಾಸಿಸುತ್ತಿರುವ ಖಾದರ್ ಎಂಬ ಬಡ ದಿನಗೂಲಿ ಕಾರ್ಮಿಕ ರಿಗೆ ಅತೀ ಅಗತ್ಯ ಆಹಾರ ಪದಾರ್ಥಗಳಾದ ಅಕ್ಕಿ, ಬೆಳೆ, ಉಪ್ಪಿನಕಾಯಿ, ಉಪ್ಪು ಮುಂತಾದ ವಸ್ತುಗಳನ್ನು ಕೋಡಿಂಬಾಡಿ ಗ್ರಾಮ ಪಂಚಾಯತ್ ಗ್ರಾಮ ಕಾರಣೀಕರಾದ ಶ್ರೀ ಚಂದ್ರ ನಾಯಕ್ ರವರು “ಜನತೆ ಸೇವಾ ಟ್ರಸ್ಟ್” ನ ಪರವಾಗಿ ಕಾರ್ಮಿಕ ಕುಟುಂಬಕ್ಕೆ ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ಕೋಡಿಂಬಾಡಿ ಕಾಪು ನಿವಾಸಿ ಬಾಲಕೃಷ್ಣ ಗೌಡ ಮತ್ತು “ಜನತೆ ಸೇವಾ ಟ್ರಸ್ಟ್” ನ ಪ್ರಮುಖರಾದ ಜಗದೀಶ್ ಕಜೆ, ನಿಶಾದ್ ಡಿ.ಕೆ, ತೇಜ ಕುಮಾರ್ ಉಪಸ್ಥಿತರಿದ್ದರು.