ಜನರು ಸ್ವಯಂ ಪ್ರೇರಿತರಾಗಿ ಜಾಗೃತೆ ವಹಿಸುವಂತೆ ಮಾಜಿ ಸಚಿವ ರೈ ವಿನಂತಿ.

ಬಂಟ್ವಾಳ : (ಮಾ.25) ಜಾಗತಿಕ ಕೊರೋನಾ ವೈರಸ್ ಮಹಾ ಮಾರಿ ಕಾಯಿಲೆಗೆ ಜನ ಗಂಭೀರವಾಗಿ ಸ್ವಯಂ ಪ್ರೇರಿತರಾಗಿ ಜಾಗೃತೆ ವಹಿಸಬೇಕು. 21 ದಿನಗಳ ಲಾಕ್ ಡೌನ್ ದೇಶಾದ್ಯಂತ ಮಾಡಲಾಗಿದೆ. ಕರ್ನಾಟಕದಲ್ಲಿ ಲಾಕ್ ಡೌನ್ ಜಾರಿ ಮಾಡುವಾಗ ಕೆಲವು ವಿನಾಯಿತಿಗಳನ್ನು ಘೋಷಣೆ ಮಾಡಲಾಗಿದೆ. ಬಿ.ಪಿ.ಎಲ್ ಕಾರ್ಡ್ ಹೊಂದಿರುವ

Ramanath rai

ಬಡ ಜನರಿಗೆ ಈಗಾಗಲೇ ಧರ್ಮಾರ್ಥ ಅಕ್ಕಿ ಒದಗುತ್ತಿರುವ ಜೊತೆಗೆ ಉಪ್ಪು, ಹುಳಿ, ಮೆಣಸು, ಎಣ್ಣೆ, ತೆಂಗಿನ ಕಾಯಿ ಪಡಿತರ ದಿನ ಬಳಕೆಯ ವಸ್ತುಗಳನ್ನು ಆದ್ಯತೆಯ ಮೇರೆಗೆ ಧರ್ಮಾರ್ಥವಾಗಿ ನೀಡಲು ತುರ್ತು ಕ್ರಮ ಕೈಗೊಳ್ಳುವಂತೆ ಒತ್ತಾಯಿಸುತ್ತೇನೆ. ಸಾರ್ವಜನಿಕರು ಸರಕಾರದ ಆದೇಶವನ್ನು ಗಂಭೀರವಾಗಿ ಪರಿಗಣಿಸುವ ಮೂಲಕ ಕೊರೋನಾ ವೈರಸ್ ಜನರಿಂದ ಜನರಿಗೆ ಹರಡದಂತೆ ಜಾಗೃತೆ ವಹಿಸುವಂತೆ ಪತ್ರಿಕಾ ಪ್ರಕಟಣೆಯಲ್ಲಿ ವಿನಂತಿಸಿದ್ದಾರೆ.

CATEGORIES
TAGS
Share This

COMMENTS

Wordpress (0)
Disqus ( )
error: Content is protected !!