ಜನವರಿ 3 ರಂದು ಪುತ್ತೂರಿನಲ್ಲಿ ಪ್ರತಿಧ್ವನಿಸಲಿದೆಯೇ ಪೌರತ್ವ’ದ ಕಿಚ್ಚು?

ಪುತ್ತೂರು : (ಜ.01) ದೇಶಾದ್ಯಂತ ಪೌರತ್ವ ದ ವಿರುಧ್ಧ ಪ್ರತಿಭಟನೆ ಹೆಚ್ಚಾಗುತ್ತಿದ್ದು ದಕ್ಷಿಣಕನ್ನಡ ಜಿಲ್ಲೆಯಲ್ಲಿ ಕಳೆದ ಬಾರಿ ನಡೆದ ಪ್ರತಿಭಟನೆ ತೀವ್ರ ಹಿಂಸಾಚಾರಕ್ಕೆ ತಿರುಗಿದ ಪರಿಣಾಮ ಮುಸ್ಲಿಂ ಸಮುದಾಯದ ಎರಡು ಮಂದಿ ಪೋಲೀಸ್ ರ ಗುಂಡಿಗೆ ಬಲಿಯಾಗಿದ್ದರು. ಅಲ್ಲದೆ, ಹಲವು ಪ್ರತಿಭಟನಕಾರರು ಗಾಯಗೊಂಡಿದ್ದಾರೆ. ಈ ಮೂಲಕ ಪೌರತ್ವ ವಿರುಧ್ಧ ದ “ಪ್ರತಿಭಟನೆ ಎಂಬ ಬೆಂಕಿಗೆ ಪೋಲೀಸರು ತುಪ್ಪ ಸುರಿದಂತಾಗಿದ್ದು” ತದನಂತರ ಪೌರತ್ವ ವಿರುಧ್ಧ ದ ಪ್ರತಿಭಟನೆಗಳು ಜಿಲ್ಲೆಯಾದ್ಯಂತ ಹೆಚ್ಚಾಗಿದ್ದು ಇದಕ್ಕೆ ಸಾಕ್ಷಿ ಎಂಬಂತೆ ಪುತೂರಿನ ಹಲವು ಸ್ಥಳೀಯ ಮುಸ್ಲಿಂ ಸಂಘಟನೆಗಳು ಜನವರಿ 03 ರ ಶುಕ್ರವಾರ ಪುತ್ತೂರಿನ ಹೃದಯ ಭಾಗದಲ್ಲಿರುವ ಕಿಲ್ಲೆ ಮೈದಾನದಲ್ಲಿ ಅಪರಾಹ್ನ 3.30ಕ್ಕೆ ಪೌರತ್ವ ಸಂರಕ್ಷಣಾ ಸಮಾವೇಶ ನಡೆಸಲು ತಯಾರಿ ನಡೆಸಿದೆ.

Protest against NRC

ಮತ್ತು ಪೌರತ್ವ ಸಂರಕ್ಷಣಾ ಸಮಾವೇಶಕ್ಕೆ ಸ್ಥಳೀಯ ಕಾಂಗ್ರೆಸ್ ಮತ್ತು ಜೆಡಿಯಸ್ ಪಕ್ಷದ ಮುಖಂಡರು ತಮ್ಮ  ಕಾರ್ಯಕರ್ತತರಿಗೆ  ಪಕ್ಷತೀತವಾಗಿ ಭಾಗವಹಿಸುವಂತೆ ಕರೆ ನೀಡಿದ್ದಾರೆ.

Federal capital
ಈ ಪೌರತ್ವ ಸಂರಕ್ಷಣಾ ಸಮಾವೇಶಕ್ಕೆ ಮಾಜಿ ಐಎಎಸ್ ಅಧಿಕಾರಿ ಸಸಿಕಾಂತ್ ಸೆಂಥಿಲ್, ಭಜರಂಗದಳದ ಮಾಜಿ ಸಂಚಾಲಕ ಮಹೇಂದ್ರಕುಮಾರ್ ಕೊಪ್ಪ, ಖ್ಯಾತ ಬರಹಗಾರ ಶಿವಸುಂದರ್ ಸೇರಿದಂತೆ ಹಲವು ನಾಯಕರು ಭಾಗವಹಿಸಲಿದ್ದಾರೆ ಎಂದು ತಿಳಿದುಬಂದಿದ್ದು ಪೋಲೀಸ್ ಇಲಾಖೆಯು ಭದ್ರತೆಯ ದೃಷ್ಟಿಯಿಂದ ತಾಲೂಕಿನ ಪ್ರಮುಖ ಸ್ಥಳಗಳಲ್ಲಿ ಹದ್ದಿನ ಕಣ್ಣು ಇರಿಸಿದ್ದಾರೆ.

CATEGORIES
TAGS
Share This

COMMENTS

Wordpress (0)
Disqus (0 )
error: Content is protected !!