ಈ ಬಾರಿ ಹೊಸ ವರ್ಷ ದುಬಾರಿ! ಮತ್ತೆ ಎಲ್ ಪಿಜಿ ದರ ಏರಿಕೆ

ನವದೆಹಲಿ : (ಜ.02) ಕೇಂದ್ರ ಸರ್ಕಾರವು ಅಡುಗೆ ಅನಿಲ (LPG) ದರವನ್ನು ಏರಿಸುವ ಮುಖಾಂತರ ಜನರಿಗೆ ಹೊಸ ವರ್ಷವನ್ನು ದುಬಾರಿಯನ್ನಾಗಿಸಿದೆ ದೆಹಲಿಯಲ್ಲಿ 695 ರೂಪಾಯಿ ಇದ್ದ ಸಬ್ಸಿಡಿ ಒಂದು ಸಿಲಿಂಡರ್ ಬೆಲೆ ಈಗ 714 ರೂಪಾಯಿ ಆಗಿದ್ದು ಸುಮಾರು 19 ರೂಪಾಯಿ ಏರಿಕೆಯಾಗಿದೆ.

Lpg gas cylender price increased

ಇನ್ನು ಮುಂಬೈನಲ್ಲಿ ಸಿಲಿಂಡರ್ ಗೆ 665 ರೂಪಾಯಿ ಇದ್ದ ಬೆಲೆ ಪ್ರಸ್ತುತ 684 ರೂಪಾಯಿ ಯಾಗಿದ್ದು 19.5 ರೂಪಾಯಿ ಹೆಚ್ಚಳವಾಗಿದೆ. ಪ್ರಮುಖ ನಗರಗಳಾದ ಕೊಲ್ಕತ್ತದಲ್ಲಿ 21.5 ಮತ್ತು ಚೆನ್ನೈನಲ್ಲಿ ಈ ಹಿಂದೆ 734 ರೂಪಾಯಿ ಇದ್ದ ಎಲ್ ಪಿಜಿ ಬೆಲೆ ಸುಮಾರು 20 ರೂಪಾಯಿಯಷ್ಟು ಏರಿಕೆಯಾಗಿದೆ. ಕೇಂದ್ರ ಸರ್ಕಾರವು ಈ ಹಿಂದೆ ರೈಲ್ವೆ ಪ್ರಯಾಣ ದರವನ್ನು ಕೂಡ ಹೆಚ್ಚಿಸಿದ್ದರು.

CATEGORIES
TAGS
Share This

COMMENTS

Wordpress (0)
Disqus ( )
error: Content is protected !!