ಕಜೆ ಅಂಗನವಾಡಿಯಲ್ಲಿ ಅದ್ದೂರಿ ಬಾಲಮೇಳ ಮತ್ತು ಸ್ತ್ರೀ ಶಕ್ತಿ ಸಂಘಗಳ ಸಮಾವೇಶ

ಪುತ್ತೂರು : (ಡಿ.28) ದಕ್ಷಿಣ ಕನ್ನಡ ಜಿಲ್ಲೆಯಲ್ಲಿಯೇ ಸ್ವಚ್ಛ ಮತ್ತು ಸುಂದರ ಅಂಗನವಾಡಿ ಎಂಬ ಹೆಗ್ಗಳಿಕೆ ಪಡೆದ ಪುತ್ತೂರು ತಾಲೂಕು ಕೋಡಿಂಬಾಡಿ ಗ್ರಾಮದ ಕಜೆ ಅಂಗನವಾಡಿ ಕೇಂದ್ರ ದ ಬಾಲಮೇಳ ಮತ್ತು ಸ್ತ್ರೀ ಶಕ್ತಿ ಸಂಘಗಳ ಸಮಾವೇಶವು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಪುತ್ತೂರು, ಅಂಗನವಾಡಿ ಕೇಂದ್ರ ಬಾಲವಿಕಾಸ ಸಮಿತಿ, ಹಿರಿಯ ವಿದ್ಯಾರ್ಥಿ ಸಂಘ, ಕಿಶೋರಿ ಸಂಘ ಕೋಡಿಂಬಾಡಿ ಕಜೆ ಇದರ ಸಂಯುಕ್ತ ಆಶ್ರಯದಲ್ಲಿ ಡಿಸೆಂಬರ್ 25ನೇ ಬುಧವಾರ ಕಜೆ ಅಂಗನವಾಡಿಯಲ್ಲಿ ನಡೆಯಿತು. ಕಾರ್ಯಕ್ರಮದ ಉದ್ಘಾಟನೆಯನ್ನು ಅಂಗನವಾಡಿ ಪುಟಾಣಿಗಳು ನೆರವೆರಿಸಿದರು.

Anganavadi

ಬೇಬಿ ಲತಿಕಾ ಪ್ರಾಸ್ತಾವಿಕವಾಗಿ ಮಾತನಾಡಿ ಕಾರ್ಯಕ್ರಮಕ್ಕೆ ಅತಿಥಿಗಳನ್ನು ಸ್ವಾಗತಿಸಿದರು ಅಂಗನವಾಡಿಯಲ್ಲಿ ಸಿಗುವ ಸವಲತ್ತುಗಳ ಬಗ್ಗೆ ತಿಳಿಸಿ, ಕಾರ್ಯಕ್ರಮದ ಯಶಸ್ವಿಗೆ ಸಹಕಾರ ನೀಡಿದವರಿಗೆ ಧನ್ಯವಾದಗಳನ್ನು ಹೇಳಿದರು ನಂತರ ಸಾಕ್ಷರತೆ ಯ ಜಯಗೋಷಕ್ಕೆ ಎಲ್ಲಾ ಪುಟಾಣಿಗಳೊಂದಿಗೆ ಜೈಕಾರ ಹಾಕಿ ಶುಭಕೋರಿದರು. ಉದ್ಘಾಟನಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬಾಲವಿಕಾಸ ಸಮಿತಿ ಅಧ್ಯಕ್ಷೆ ಶ್ರೀಮತಿ ಅರುಣ ಶೇಖರ್ ವಹಿಸಿದ್ದು. ಕಾರ್ಯಕ್ರಮಕ್ಕೆ ಸಹಕರಿಸಿದ ಎಲ್ಲರನ್ನು ಉದ್ದೇಶಿಸಿ ಇನ್ನು ಮುಂದೆಯು ಸಹಕಾರ ನೀಡಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕಾಗಿ ಮನವಿ ಮಾಡಿದರು.

Federal capital

ಮುಖ್ಯ ಅತಿಥಿಯಾಗಿ ಆಗಮಿಸಿದ ಸ್ಥಳೀಯ ಜಿಲ್ಲಾ ಪಂಚಾಯತ್ ಸದಸ್ಯೆ ಶ್ರೀಮತಿ ಶಯನ ಜಯಾನಂದ್ ರವರು ಅಂಗನವಾಡಿಯಲ್ಲಿ ಮಕ್ಕಳಿಗೆ ಸಿಗುವ ಶಿಕ್ಷಣ ಪೌಷ್ಟಿಕಾಂಶಯುಕ್ತ ಆಹಾರ ಹಾಗೂ ಮಕ್ಕಳ ಪ್ರತಿಭೆಗಳ ಬಗ್ಗೆ ತಿಳಿಸಿದರಲ್ಲದೆ ಸರ್ಕಾರದ ಸವಲತ್ತುಗಳು ಸರ್ಕಾರಿ ಶಾಲೆಗಳಲ್ಲಿ ಮಾತ್ರ ದೊರೆಯುತ್ತದೆ ಎಂಬುವುದಾಗಿ ತಿಳಿಸಿದರು. ನವ ಸಾಕ್ಷರರ ಹಿರಿಯ ಮುಖಂಡರಾದ ನಾರಾಯಣ ಸುಳ್ಯ ರವರು 1990 ರಲ್ಲಿ ನವ ಸಾಕ್ಷರರಾಗಿ ಸೇರಿ ಯಾವೂದೇ ಶಾಲೆಗೆ ಹೋಗಿ ಕಲಿಯದೆ 10ನೇ ತರಗತಿ ಪರೀಕ್ಷೆ ಬರೆದು ಈಗ ಸುಬ್ರಹ್ಮಣ್ಯ ದಲ್ಲಿ ಸೆಕ್ಯುರಿಟಿ ಆಗಿ ಸೇವೆ ಮಾಡುತ್ತಿದ್ದು ಸಾಕ್ಷರರಾಗಿಯು ಶಿಕ್ಷಣ ಪಡೆಯಬಹುದು ಎಂಬುದನ್ನು ಹೇಳಿ ಶುಭ ಹಾರೈಸಿದರು. ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ಬಾಬು ಗೌಡ ಬಂಡಾರದ ಮನೆ ಮಾತನಾಡಿ ಸ್ತ್ರೀ ಶಕ್ತಿ ಸಂಘಗಳ ಮಹಿಳೆಯರು ತುಂಬಾ ಶಿಕ್ಷಿತರಾಗಿದ್ದು ಮೊದಲೆಲ್ಲ ಮನೆಗೆ ಸಿಮಿತವಾಗಿದ್ದವರು ಇಂದು ಸಾರ್ವಜನಿಕ ರಂಗಗಳಲ್ಲಿ ಭಾಗವಹಿಸುವುದಲ್ಲದೇ ಕಾರ್ಯಕ್ರಮಗಳ ಉಸ್ತುವಾರಿ ವಹಿಸುವ ಮುಖಾಂತರ ಸಮಾಜದಲ್ಲಿ ಪುರುಷರಿಗೆ ಸರಿ ಸಮಾನವಾಗಿ ಬೆಳೆಯುತ್ತಿರುವುದು ಸಂತೋಷದ ವಿಷಯ ಎಂದರು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಹಿರಿಯ ಮೇಲ್ವಿಚಾರಕರಾದ ಶ್ರೀಮತಿ ಭಾರತಿ .ಜೆ ಯವರು ಅಂಗನವಾಡಿ ಕಾರ್ಯಕ್ರಮಗಳಿಗೆ ಇಲಾಖೆಯಿಂದ ತುಂಬಾ ಅನುದಾನವನ್ನು ನೀಡಲು ಸಾಧ್ಯವಾಗದಿದ್ದರೂ ಸಮುದಾಯ ಆಧಾರಿತವಾಗಿ ಅಂಗನವಾಡಿ ಕಾರ್ಯಕ್ರಮಗಳನ್ನು ಮಾಡಬಹುದು ಎಂಬುದಕ್ಕೆ ಈ ಬಾಲಮೇಳ ಮತ್ತು ಸ್ತ್ರೀ ಶಕ್ತಿ ಸಂಘಗಳ ಸಮಾವೇಶ ಕಾರ್ಯಕ್ರಮವೇ ಸಾಕ್ಷಿ ಎಂಬುದಾಗಿ ತಿಳಿಸಿದರು. ಬಾಲವಿಕಾಸ ಸಮಿತಿ ಸದಸ್ಯರಾದ ಶ್ರೀ ಕೇಶವ ಭಂಡಾರಿ ಕೈಪ, ಸ್ತ್ರೀ ಶಕ್ತಿ ಸಂಘದ ಅಧ್ಯಕ್ಷೆ ಶ್ರೀಮತಿ ಉಷಾ ಮುಖೇಶ್ ಸಂಧರ್ಬೋಚಿತವಾಗಿ ಮಾತನಾಡಿ ಶುಭ ಹಾರೈಸಿದರು.

Anganavadi

ಬಳಿಕ ಅಂಗನವಾಡಿಯ ಹಿರಿಯ ವಿದ್ಯಾರ್ಥಿ ಪ್ರಸ್ತುತ ಬೆಳ್ಳಿಪ್ಪಾಡಿ ಹಿ.ಪ್ರಾ ಶಾಲೆಯಲ್ಲಿ ಕಲಿಯುತ್ತಿರುವ ರೋಶನ್ ಡಿ’ಸೋಜ ರವರನ್ನು ಜಿಲ್ಲಾ ಮಟ್ಟದಲ್ಲಿ ಕೊಂಕಣಿ ಕಂಠಪಾಠದಲ್ಲಿ ತೃತೀಯ ಸ್ಥಾನ ಪಡೆದುದ್ದಕ್ಕಾಗಿ ಗುರುತಿಸಲಾಯಿತು. ವೇದಿಕೆಯಲ್ಲಿ ತಾಲೂಕು ಅಂಗನವಾಡಿ ಕಾರ್ಯಕರ್ತೆ ಹಾಗೂ ಸಹಾಯಕಿಯವರ ಸಂಘದ ಅಧ್ಯಕ್ಷೆ ಶ್ರೀಮತಿ ಮಲ್ಲಿಕಾ ಜೆ.ಆಳ್ವ , ಧನಲಕ್ಷ್ಮಿ ಸ್ವ ಸಹಾಯ ಸಂಘದ ಅಧ್ಯಕ್ಷೆ ಶ್ರೀಮತಿ ಸುಗುಣ, ಹಿರಿಯ ವಿಧ್ಯಾರ್ಥಿ ಸಂಘದ ನಾಯಕ ಜಗದೀಶ್ ಕಜೆ, ಕಿಶೋರಿ ಸಂಘ ದ ನಾಯಕಿ ಕು| ಕವಿತ, ಉಪಸ್ಥಿತರಿದ್ದರು. ನಂತರ ನಡೆದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಅಂಗನವಾಡಿ ಪುಟಾಣಿಗಳು, ಹಿರಿಯ ವಿದ್ಯಾರ್ಥಿಗಳು, ಸ್ತ್ರೀ ಶಕ್ತಿ ಸಂಘಗಳ ಮಹಿಳೆಯರು ಮತ್ತು ಮಕ್ಕಳ ಪೋಷಕರಿಂದ ವಿವಿಧ ವಿನೋದವಳಿ ನಡೆಯಿತು.
ಮಧ್ಯಾಹ್ನ ನಡೆದ ಸಭಾಕಾರ್ಯಕ್ರಮದಲ್ಲಿ ಅಧ್ಯಕ್ಷ ಸ್ಧಾನವನ್ನು ಕೋಡಿಂಬಾಡಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ಸಂಧ್ಯಾ ರಾಮಚಂದ್ರ ರವರು ವಹಿಸಿದ್ದರು. ವೇದಿಕೆಯಲ್ಲಿ ಸ್ಥಳೀಯ ತಾಲೂಕು ಪಂಚಾಯತ್ ಸದಸ್ಯರಾದ ಶ್ರೀ ಲಕ್ಷ್ಮಣ್ ಗೌಡ ಕಂಬಳದಡ್ಡ, ಜೆ.ಸಿ.ಐ ಉಪ್ಪಿನಂಗಡಿ ಇದರ ಅಧ್ಯಕ್ಷರಾದ ಮೋನಪ್ಪ ಗೌಡ ಪಮ್ಮನಮಜಲು, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಹಿರಿಯ ಮೇಲ್ವಿಚಾರಕರಾದ ಶ್ರೀಮತಿ ಭಾರತಿ ಜೆ, ಬಾಲ ವಿಕಾಸ ಸಮಿತಿ ಅಧ್ಯಕ್ಷೆ ಶ್ರೀಮತಿ ಅರುಣ ಶೇಖರ್, ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ಬಾಬು ಗೌಡ ಬಂಡಾರದ ಮನೆ ಗ್ರಾಮಕರಣೀಕರಾದ ಚಂದ್ರು ನಾಯಕ್, ಹಿರಿಯ ವಿಧ್ಯಾರ್ಥಿ ಸಂಘದ ನಾಯಕ ಜಗದೀಶ್ ಕಜೆ, ಗ್ರಾಮ ಪಂಚಾಯತ್ ಸದಸ್ಯರಾದ ಮನೋಹರ್ ಗೌಡ ಡಿ. ವಿ, ರಾಮಚಂದ್ರ ಪೂಜಾರಿ, ಶ್ರೀಮತಿ ಭವಾನಿ ಭಾಗವಹಿಸಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.

Anganavadi
ಹಿರಿಯ ಜನಶಿಕ್ಷಣ ಟ್ರಸ್ಟ್ ನ ನಿರ್ದೇಶಕರು ಮತ್ತು ಜಿಲ್ಲಾ ಸ್ವಚ್ಚತಾ ರಾಯಾಬಾರಿ ಶ್ರೀ ಶೀನ ಶೆಟ್ಟಿ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡುತ್ತಾ ಇಲ್ಲಿ ಬಾಯಿ ಮಾತನಾಡುತ್ತಿಲ್ಲ ಇಲ್ಲಿನ ಕೆಲಸಗಳು ಮಾತನಾಡುತ್ತವೆ. ಈ ಕಜೆ ಅಂಗನವಾಡಿ ಕೇಂದ್ರವು ಎಲ್ಲಾರಿಗೂ ಮಾದರಿಯಾಗಿದೆ. ಈ ಕೇಂದ್ರಕ್ಕೆ ಅದಷ್ಟು ಬೇಗ ಸಿಮೆಂಟ್ ಛಾವಣಿಯಾಗಬೇಕು ಎಂದು ಜನಪ್ರತಿನಿಧಿಗಳಲ್ಲಿ ನಿವೇದಿಸಿದರು. ಇಲ್ಲಿಯ ಮಕ್ಕಳು, ಮಹಿಳೆಯರು, ಪೋಷಕರು, ಸಂಘ ಸಂಸ್ಥೆಗಳು, ಇಲಾಖೆ ಎಲ್ಲಾರ ಸಹಭಾಗಿತ್ವದಿಂದ ಇಂತಹ ಕಾರ್ಯಕ್ರಮ ಯಶಸ್ವಿಯಾಗುತ್ತಿದೆ ಎಂದರು.
ತದನಂತರ ಜೆ.ಸಿ.ಐ ಉಪ್ಪಿನಂಗಡಿ ವತಿಯಿಂದ ನೀಡಿದ ತೂಗೂಯ್ಯಾಲೆಯನ್ನು ತಾಲೂಕು ಪಂಚಾಯತ್ ಸದಸ್ಯರಾದ ಶ್ರೀ ಲಕ್ಷ್ಮಣ್ ಗೌಡ ಕಂಬಳದಡ್ಡ ಉದ್ಘಾಟಿಸಿದರು. ನಂತರ ಮಾತನಾಡಿದ ಜೆಸಿಐ ಉಪ್ಪಿನಂಗಡಿ ಘಟಕದ ಅಧ್ಯಕ್ಷ ಜೆಸಿ| ಮೋನಪ್ಪ ಗೌಡ ಪಮ್ಮನಮಜಲು ಪ್ರಜೆಗಳು ತನ್ನನ್ನು ತಾನು ಸಮಾಜದಲ್ಲಿ ತೊಡಗಿಸಿಕೊಂಡಾಗ ಮಾತ್ರ ಸಮಾಜಕ್ಕೆ ತಮ್ಮಿಂದಾದ ಸಹಾಯವನ್ನು ಮಾಡುವ ಗುಣ ಹೊಂದಲು ಸಾಧ್ಯ ಎಂದರು. ಬಾಲಮೇಳ, ಸ್ತ್ರೀ ಶಕ್ತಿ ಸಂಘಗಳ ಸಮಾವೇಶ ಮತ್ತು ಕ್ರೀಡೋತ್ಸವ ಕಾರ್ಯಕ್ರಮದ ಪ್ರಾಯೋಜಕರಾಗಿ ಶ್ರೀಮತಿ ಸುಗುಣ ಸುಧಾಕರ್, ಹಿರಿಯ ವಿಧ್ಯಾರ್ಥಿಗಳು, ಕೇಶವ ಭಂಡಾರಿ ಕೈಪ, ಜಗದೀಶ್ ಕಜೆ, ಧನಲಕ್ಷ್ಮಿ ಮತ್ತು ಭಾಗ್ಯಲಕ್ಮೀ ಸ್ವಸಹಾಯ ಸಂಘ, ಶ್ರೀಮತಿ ಸುಶೀಲ ಅಣ್ಣು ಪೂಜಾರಿ, ಶ್ರೀಮತಿ ಅರುಣ ಶೇಖರ್, ಶಾರದ ಈಶ್ವರ ಪೂಜಾರಿ, ಶ್ರೀಮತಿ ಗೀತಾ ಪ್ರಭಾಕರ್ ನಾಯಕ್, ಶ್ರೀಮತಿ ಶ್ವೇತಾ ನಾಗೇಶ್ ತೆಂಕಿಲ, ಬಾಬು ಗೌಡ ಬಂಡಾರದ ಮನೆ, ಹರೀಣಿ ರಮೇಶ್ ಭಂಡಾರಿ, ಶಾಂತರಾಮ ಬಾರ್ತಿಕುಮೇರು ಮತ್ತು ಮಕ್ಕಳ ಪೋಷಕರು ವಹಿಸಿದ್ದರು.

Federal capital

ಅಂಗನವಾಡಿಯಲ್ಲಿ ನಡೆದ ಕ್ರೀಡಾಕೂಟವನ್ನು ವಿವೇಕಾನಂದ ಪದವಿ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕರಾದ ಯತೀಶ್ ಕುಮಾರ್ ಗೌಡ ಬಾರ್ತಿಕುಮೇರು ನಡೆಸಿಕೊಟ್ಟರು. ಈ ಕಾರ್ಯಕ್ರಮದಲ್ಲಿ ಅಂಗನವಾಡಿ ಕಾರ್ಯಕರ್ತೆಯರಾದ ಕು| ಅರುಣ .ಡಿ, ಶ್ರೀಮತಿ ರೇವತಿ, ಶ್ರೀಮತಿ ಮಲ್ಲಿಕಾ ಎಸ್. ಆಳ್ವ, ಶ್ರೀಮತಿ ಪೂರ್ಣಿಮಾ, ಅಂಗನವಾಡಿ ಸಹಾಯಕಿಯರಾದ ಶ್ರೀಮತಿ ಸಂಧ್ಯಾ, ಶ್ರೀಮತಿ ಪ್ರೇಮ, ಶ್ರೀಮತಿ ಪುಷ್ಪಾ, ಇಂಟಕ್ ಪುತ್ತೂರು ತಾಲೂಕು ಅಧ್ಯಕ್ಷ ಜಯಪ್ರಕಾಶ್ ಬದಿನಾರು, ಮಾಜಿ ತಾಲೂಕು ಪಂಚಾಯತ್ ಅಧ್ಯಕ್ಷರಾದ ಜಯಾನಂದ ಕೋಡಿಂಬಾಡಿ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಪುತ್ತೂರು ತಾಲೂಕು ಒಕ್ಕೂಟ ದ ಅಧ್ಯಕ್ಷರಾದ ಶ್ರೀ ರಾಮಣ್ಣ ಗೌಡ ಗುಂಡೋಲೆ, ಬನ್ನೂರು ರೈತರ ಸೇವಾ ಸಹಕಾರಿ ಬ್ಯಾಂಕಿನ ನಿರ್ದೇಶಕ ಮೋಹನ್ ಪಕ್ಕಳ ಕುಂಡಾಪು, ಬಾಲ ವಿಕಾಸ ಸಮಿತಿ ಮಾಜಿ ಅಧ್ಯಕ್ಷರಾದ ಶ್ರೀ ಶೇಷಪ್ಪ ಪೂಜಾರಿ ನಿಡ್ಯ, ಶ್ರೀಮತಿ ರೇವತಿ ವೀರಪ್ಪ ಪೂಜಾರಿ, ಶ್ರೀಮತಿ ಚಿತ್ರ ಸುರೇಶ್ ಗೌಡ ಬೋಳಾಜೆ, ಪ್ರಮುಖರಾದ ಅಣ್ಣು ಪೂಜಾರಿ ಕೈಪ, ಗಿರಿಯಪ್ಪ ಕಜೆ, ಶೇಖರ ಪೂಜಾರಿ ನಿಡ್ಯ, ದೀಕ್ಷಿತ್ ಕೈಪ, ಸತೀಶ್ ನಾಯಕ್, ಸುಂದರ, ಶಿವಪ್ರಸಾದ್, ಸಂಪತ್ ಗೌಡ, ಶ್ರೀನಿಧಿ, ವೈಶಾಲಿ ವಿವಿಧ ಕಾರ್ಯಕ್ರಮಗಳ ಉಸ್ತುವಾರಿ ವಹಿಸಿಕೊಂಡಿದ್ದರು ನಗರಸಭಾ ಮಾಜಿ ಸದಸ್ಯ ಮುಖೇಶ್ ಕೆಮ್ಮಿಂಜೆ ಕಾರ್ಯಕ್ರಮ ನಿರ್ವಹಿಸಿದರು.

CATEGORIES
TAGS
Share This

COMMENTS

Wordpress (0)
Disqus ( )
error: Content is protected !!